Advertisement

ಬಾದಾಮಿ ಬನಶಂಕರಿ ಜಾತ್ರೆ ರದ್ದು

02:39 PM Nov 28, 2020 | Suhan S |

ಬಾದಾಮಿ: ಉತ್ತರ ಕರ್ನಾಟಕದ ಪ್ರಸಿದ್ಧ ಬಾದಾಮಿ-ಬನಶಂಕರಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಬಾಗಲಕೋಟೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ.

Advertisement

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಚಂದ್ರಕಾಂತ ಅವರು ಈ ವಿಷಯ ತಿಳಿಸಿದರು. ಬನಶಂಕರಿ ದೇವಸ್ಥಾನ ಟ್ರಸ್ಟ್‌ ಕಮೀಟಿಯವರಿಗೆ ತಮ್ಮ ಪರಿವಾರದವರೊಂದಿಗೆ ಕೇವಲ ಶ್ರೀದೇವಿಯ ಪೂಜೆ ಮಾಡಲು ಸೂಚಿಸಿ ಜನಸಂದಣಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಬನಶಂಕರಿ ಜಾತ್ರಾ ಮಹೋತ್ಸವ ರದ್ದುಪಡಿಸಿರುವ ಬಗ್ಗೆ ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು

ತಹಶೀಲ್ದಾರ್‌ ಸುಹಾಸ ಇಂಗಳೆ,ಪಿಎಸ್‌ಐ ಪ್ರಕಾಶ ಬಣಕಾರ, ತಾಪಂ ಇಒ ಡಾ| ಪುನೀತ್‌,ತಾಲೂಕಾ ಆರೋಗ್ಯಾ ಧಿಕಾರಿ ಡಾ|ಎಂ.ಬಿ.ಪಾಟೀಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶಅಥಣಿ, ಸದಾಶಿವ ಮರಡಿ, ಚೊಳಚಗುಡ್ಡ ಪಿಡಿಒ ದೊಡ್ಡಪತ್ತಾರ ಹಾಜರಿದ್ದರು.

ದೇವಲ ಮಹರ್ಷಿ ಜಯಂತಿ :

ಕೆರೂರ: ಪಟ್ಟಣದಲ್ಲಿ ದೇವಲ ಮಹರ್ಷಿಗಳ ಜಯಂತಿ ಆಚರಿಸಲಾಯಿತು. ಈ ಪ್ರಯುಕ್ತ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಇಲ್ಲಿನ ಹೊಸಪೇಟೆ ಓಣಿಯ ಬನಶಂಕರಿ ದೇವಾಲಯ ಆವರಣದಲ್ಲಿ ದೇವಾಂಗ ಸಮಾಜದ ಪ್ರಮುಖರು, ವೇದಮೂರ್ತಿ ದೇವಾಂಗಮಠದ ರುದ್ರಮುನಿ ಸ್ವಾಮೀಜಿ ಮನುಕುಲ ವನ್ನು ಸನ್ಮಾರ್ಗದತ್ತ ಮುನ್ನಡೆಸಿ, ಮಾನ ಮುಚ್ಚುವ ಕಾಯಕ ಧಾರೆ ಎರೆದ ದೇವಲ ಮಹರ್ಷಿ ಗಳ ತತ್ವ, ಆದರ್ಶಗಳನ್ನು ಸಮಾಜ ಬಾಂಧವರು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಸಲಹೆ ಮಾಡಿದರು.

Advertisement

ದೇವಲ ಮಹರ್ಷಿ ಜಯಂತಿ ಉತ್ಸವದ ಮೆರವಣಿಗೆಗೆ ಬನಶಂಕರಿ ದೇಗುಲದ ಆವರಣದಲ್ಲಿ ರುದ್ರಮುನಿ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ದೇವಾಂಗಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ವಿಠ್ಠಲಗೌಡ್ರ ಗೌಡರ, ಲಕ್ಷ್ಮಣ ಮುಗಳಿ, ಬಿಜೆಪಿ ಧುರೀಣ ಪಿತಾಂಬ್ರೆಪ್ಪ ಹವೇಲಿ, ಆನಂದ ಪರದೇಶಿ, ವಿಷ್ಣು ಅಂಕದ, ಪಾಂಡಪ್ಪ ಹುಚಪರಣ್ಣವರ, ಎಸ್‌.ಸಿ. ಕರಿಮರಿ, ಕುಮಾರ ಹೂವಣ್ಣವರ,ಮನೋಹರ ಕುದರಿ, ಗುಂಡಣ್ಣ ಬೋರಣ್ಣವರ, ಮಲ್ಲಿಕಾರ್ಜುನ ಗೌಡರ, ಶಂಕ್ರಪ್ಪ ಗದುಗಿನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next