Advertisement

ಬನಶಂಕರಿ ದರ್ಶನ ಬಂದ್‌: ಪಾದಯಾತ್ರಿಗಳಿಗೆ ನಿರಾಸೆ

10:08 PM Jan 17, 2022 | Team Udayavani |

ಬಾದಾಮಿ: ಸುಕ್ಷೇತ್ರ ಬಾದಾಮಿ-ಬನಶಂಕರಿದೇವಿ ಜಾತ್ರೆ ನಿಷೇಧಿ ಸಿ ಸರ್ಕಾರ ಆದೇಶ ಹೊರಡಿಸಿದ್ದು, ಕಾರಣ ದೇವರ ದರ್ಶನವನ್ನು ಜ. 21ರವರೆಗೆ ಬಂದ್‌ ಮಾಡಲಾಗಿದೆ. ಪೂಜಾ ಕಾರ್ಯಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಭಕ್ತರ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿ ಸಲಾಗಿದೆ.

Advertisement

ನಿಗದಿಯಂತೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಾಂಪ್ರದಾಯಿಕವಾಗಿ ಸೋಮವಾರ (ಜ.17) ಸಂಜೆ 5.30 ಗಂಟೆಗೆ ರಥೋತ್ಸವ ಜರುಗಲಿದೆ. ಹೊರಗಿನ ಭಕ್ತರನ್ನು ಬನಶಂಕರಿಗೆ ಬರದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ರಥೋತ್ಸವಕ್ಕೆ ಹಗ್ಗ ಮಾಡಲಗೇರಿಯಿಂದ ಬರಲಿದ್ದು, ನಿಗದಿತ ಕಡಿಮೆ ಜನರು ಬರುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.

ಬನಶಂಕರಿಯಲ್ಲಿ ತಹಶೀಲ್ದಾರ್‌ ಸುಹಾಸ ಇಂಗಳೆ, ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ನೇತ್ರಾವತಿ ಪಾಟೀಲ, ಪೊಲೀಸ್‌ ಬಂದೋಬಸ್ತ್ ಕೈಗೊಂಡಿದ್ದು, ಬೀಡುಬಿಟ್ಟಿದ್ದಾರೆ

 

Advertisement

Udayavani is now on Telegram. Click here to join our channel and stay updated with the latest news.

Next