Advertisement
ಕಳೆದ ಐದಾರು ದಿನಗಳಿಂದ ನಾನು ಬಾಳೆಹಣ್ಣು ಮಾರಾಟ ಮಾಡಿಲ್ಲ. ಇಲ್ಲಿನ ಆಡಳಿತ ಅದನ್ನು ನಿಷೇಧಿಸಿದೆ. ಈ ಮೊದಲು ಇಲ್ಲಿನ ಸಾಮಾನ್ಯ ಪ್ರಯಾಣಿಕರು ಬಾಳೆಹಣ್ಣು ಖರೀದಿಸುತ್ತಿದ್ದರು. ಇತರ ಹಣ್ಣುಗಳ ಬೆಲೆ ಹೆಚ್ಚಾಗಿರುವುದರಿಂದ ಅವರು ಅದನ್ನೇ ಖರೀದಿಸುತ್ತಿದ್ದರು ಎಂದು ಹಣ್ಣಿನ ಅಂಗಡಿ ಮಾಲಕರೊಬ್ಬರು ಹೇಳಿದ್ದಾರೆ.ಆದರೆ ಇದರ ಬಗ್ಗೆ ಪ್ರಯಾಣಿಕರೊಬ್ಬರು ಕೆಂಡ ಕಾರಿದ್ದಾರೆ. ಅತಿ ಕಡಿಮೆ ಬೆಲೆಗೆ ಸಿಗುವ ಉತ್ತಮ ಹಣ್ಣು ಎಂದರೆ ಬಾಳೆಹಣ್ಣು. ಶುಚಿತ್ವದ ಕಾರಣದಿಂದ ಅದರ ಮಾರಾಟ ನಿಷೇಧಿಸುವುದಾದರೆ ಮೊದಲು ಇಲ್ಲಿನ ಶೌಚಾಲಯ ನಿಷೇಧಿಸಬೇಕು. ಅಲ್ಲಿಂದಲೇ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.