Advertisement
ಬಾಳೆ ಹಣ್ಣು ಐಸ್ಕ್ರೀಮ್ಬೇಕಾಗುವ
ಸಾಮಗ್ರಿಗಳು
ಬಾಳೆಹಣ್ಣು: 2
ಮಿಲ್ಕ್ಮೇಡ್: 5 ಚಮಚ
ಸಕ್ಕರೆ: 4 ಚಮಚ
ವೈಪಿಂಗ್ ಕ್ರೀಂ: 3/4 ಕಪ್
ವೆನಿಲ್ಲಾ ಎಸೆನ್ಸ್: 1 ಚಮಚ
ಮೊದಲು ಬಾಳೆಹಣ್ಣನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಒಂದು ಝಿಪ್ ಬ್ಯಾಗ್‌ನಲ್ಲಿ ಹಾಕಿ 2 ಗಂಟೆ ಫ್ರಿಡ್ಜ್ನ ಲ್ಲಿಡಬೇಕು. ಅನಂತರ ಈ ಬಾಳೆಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಮಿಲ್ಕ್ ಮೇಡ್ ಸೇರಿಸಿ ಮೃದುವಾಗುವವರೆಗೆ ಅರೆಯಬೇಕು. ಒಂದು ಪಾತ್ರೆಗೆ ವೈಪಿಂಗ್ ಕ್ರೀಂ ಹಾಕಿ ಅದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ ಬೀಟರ್‌ನಿಂದ ಚೆನ್ನಾಗಿ ಮಿಶ್ರ ಮಾಡಿ ಗಟ್ಟಿ ಮಾಡಬೇಕು. ಅದಕ್ಕೆ ಬಾಳೆಹಣ್ಣಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ ಒಂದು ಬಾಕ್ಸಿಗೆ ಹಾಕಿ 12 ಗಂಟೆ ಫ್ರಿಡ್ಜ್ ನಲ್ಲಿಡಿ. ಬಾಳೆಹಣ್ಣಿನ ಐಸ್ ಕ್ರೀಂ ಸವಿಯಲು ಸಿದ್ಧವಾಗುತ್ತದದೆ. ಬನಾನ ಸ್ವೀಟ್
ಬೇಕಾಗುವ
ಸಾಮಗ್ರಿಗಳು
ನೇಂದ್ರ ಬಾಳೆ ಹಣ್ಣು: 4
ಸಕ್ಕರೆ: 1 ಕಪ್
ತೆಂಗಿನತುರಿ: ಅರ್ಧ ಕಪ್
ಅವಲಕ್ಕಿ : 1 ಕಪ್
ಏಲಕ್ಕಿ: 1 ಚಮಚ
ತುಪ್ಪ: ಸ್ವಲ್ಪ
ಬ್ರೆಡ್: 5
ಗೋಡಂಬಿ: ಸ್ವಲ್ಪ
Related Articles
ಮೊದಲು ಬಾಳೆ ಹಣ್ಣನ್ನು ಸಣ್ಣ, ಸಣ್ಣ ತುಂಡುಗಳನ್ನಾಗಿ ಮಾಡಬೇಕು. ಅನಂತರ ಒಂದು ಪ್ಯಾನ್ ಬಿಸಿ ಮಾಡಿ ಅದಕ್ಕೆ ಸಕ್ಕರೆ ಹಾಗೂ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಸಕ್ಕರೆ ನೀರಾಗಿ ತೆಂಗಿನತುರಿ ಅದರಲ್ಲಿ ಚೆನ್ನಾಗಿ ಬೆಂದಾಗ ಅದಕ್ಕೆ ಕತ್ತರಿಸಿದ ಬಾಳೆಹಣ್ಣನ್ನು ಸೇರಿಸಿ ಬೇಯಿಸಿಕೊಳ್ಳಬೇಕು. ಕೊನೆಗೆ ಅವಲಕ್ಕಿ ಮತ್ತೆ ಗೋಡಂಬಿಯನ್ನು ಸೇರಿಸಿ ಮಿಶ್ರ ಮಾಡಿ. ಬ್ರೆಡ್ ಅನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿಕೊಳ್ಳಬೇಕು. ಬಾಳೆಹಣ್ಣಿನ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಬ್ರೆಡ್ ಹುಡಿಯಲ್ಲಿ ಅದ್ದಿ ಎಣ್ಣೆಗೆ ಹಾಕಿ ಕೆಂಬಣ್ಣ ಬರುವವರೆಗೆ ಹುರಿದರೆ ಬಾಳೆಹಣ್ಣು ಸ್ವೀಟ್ ಸಿದ್ಧವಾಗುತ್ತದೆ.
Advertisement
ಬಾಳೆ ಹಣ್ಣಿನ ದೋಸೆಬೇಕಾಗುವ
ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ: 1 ಕಪ್
ಬೆಲ್ಲ: ಕಾಲು ಕಪ್
ಕದಳಿ ಬಾಳೆಹಣ್ಣು: 5
ತೆಂಗಿನತುರಿ: ಕಾಲು ಕಪ್
ಉಪ್ಪು: ರುಚಿಗೆ ತಕ್ಕಷ್ಟು
ತುಪ್ಪ: ಸ್ವಲ್ಪ ಮಾಡುವ ವಿಧಾನ
ಅಕ್ಕಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿಟ್ಟ ಬಳಿಕ ಅದಕ್ಕೆ ತೆಂಗಿತುರಿ, ಬೆಲ್ಲ, ಬಾಳೆಹಣ್ಣು ಹಾಗೂ ಉಪ್ಪು ಸೇರಿಸಿ ಅರೆಯಬೇಕು. ಮಿಶ್ರಣ ತುಂಬಾ ತುಳುವಾಗಿರಬಾರದು. ನೀರು ಸೇರಿಸುವಾಗ ಎಚ್ಚರಿಕೆಯಿರಬೇಕು. ಅನಂತರ ಕಾವಲಿಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಸವರಿ ದೋಸೆಯನ್ನು ಹೊಯ್ಯ ಬೇ ಕು. ಎರಡೂ ಬದಿಯನ್ನು ಕೆಂಬಣ್ಣ ಬರುವವರೆಗೆ ಕಾಯಿಸಿದರೆ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧವಾಗುತ್ತದೆ. ಪ್ಯಾನ್ ಕೇಕ್
ಬೇಕಾಗುವ
ಸಾಮಗ್ರಿಗಳು
ಮೈದಾ: 1 ಕಪ್
ಬೇಕಿಂಗ್ ಸೋಡಾ: 1 ಚಮಚ
ಸಕ್ಕರೆ: 2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಏಲಕ್ಕಿ: ಸ್ವಲ್ಪ
ಮೊಟ್ಟೆ: 2
ಹಾಲು: 1 ಕಪ್
ಎಣ್ಣೆ: 2 ಚಮಚ
ಬೇಯಿಸಿದ ಬಾಳೆಹಣ್ಣು: 2 ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಮೈದಾ ಹಾಕಿಕೊಂಡು ಅದಕ್ಕೆ ಸಕ್ಕರೆ, ಬೇಕಿಂಗ್ ಸೋಡಾ, ಉಪ್ಪು ಹಾಗೂ ಏಲಕ್ಕಿ ಹುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನೀರು ಸೇರಿಸಬಾರದು. ಅನಂತರ ಇನ್ನೊಂದು ಪಾತ್ರೆಯಲ್ಲಿ ಎರಡು ಮೊಟ್ಟೆಗಳನ್ನು ಒಡೆದು ಹಾಕಿ ಅದಕ್ಕೆ ಹಾಲು, ಎಣ್ಣೆ ಸೇರಿಸಿ ಚೆನ್ನಾಗಿ ಕಲಸಬೇಕು. ಬೇಯಿಸಿದ ಬಾಳೆಹಣ್ಣನ್ನು ಸ್ಮಾಷ್ ಮಾಡಿ ಮೊಟ್ಟೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಬೇಕು. ಅನಂತರ ಮೈದಾವನ್ನು ಇದರ ಜತೆ ಸೇರಿಸಿ ಗಟ್ಟಿ ನಿಲ್ಲದಂತೆ ಮಿಶ್ರ ಮಾಡಬೇಕು. ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈ ದಪ್ಪ ಮಿಶ್ರಣವನ್ನು ಹೊಯ್ದು ಎರಡೂ ಬದಿಯನ್ನು ಕೆಂಬಣ್ಣ ಬರುವವರೆಗೆ ಬೇಯಿಸಿದರೆ ಪ್ಯಾನ್ ಕೇಕ್ ಸವಿಯಲು ಸಿದ್ಧವಾಗುತ್ತದೆ. ಬಾಳೆಹಣ್ಣಿನ ಪೋಡಿ
ಬೇಕಾಗುವ
ಸಾಮಗ್ರಿಗಳು
ನೇಂದ್ರ ಬಾಳೆಹಣ್ಣು: 3
ಮೈದಾ: 1 ಕಪ್
ಅರಿಸಿನ: ಕಾಲು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಸಕ್ಕರೆ: 4ಚಮಚ ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ತೆಳುವಾಗಿ ಉದ್ದಕ್ಕೆ ಕತ್ತರಿಸಿಕೊಳ್ಳಬೇಕು. ಅನಂತರ ಒಂದು ಪಾತ್ರೆಗೆ ಮೈದಾ, ಉಪ್ಪು, ಸಕ್ಕರೆ, ಅರಿಸಿನ,ನೀರು ಹಾಕಿ ಚೆನ್ನಾಗಿ ಮಿಶ್ರಮಾಡಬೇಕು. ಈ ಮಿಶ್ರಣದಲ್ಲಿ ಕತ್ತರಿಸಿದ ಬಾಳೆಹಣ್ಣನ್ನು ಅದ್ದಿ ಕುದಿಯುಯವ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದಾಗ ಬಾಳೆಹಣ್ಣಿನ ಪೋಡಿ ಸವಿಯಲು ಸಿದ್ಧವಾಗುತ್ತದೆ. - ಸುಶ್ಮಿತಾ ಶೆಟ್ಟಿ