Advertisement

ಪ್ಲಾಸ್ಟಿಕ್‌ ನಿಷೇಧ; ಬಾಳೆ ಎಲೆಗೆ ಬೇಡಿಕೆಯ ನಿರೀಕ್ಷೆ

10:24 AM Oct 14, 2019 | Hari Prasad |

ಬೆಂಗಳೂರು: ಸಿಂಗಲ್‌ ಯ್ಯೂಸ್‌ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾದ ಬಳಿಕ ಅದಕ್ಕೆ ಪರ್ಯಾಯ ಹುಟುಕಾಟ ಆರಂಭವಾಗಿದೆ. ಸದ್ಯ ಅಂಗಡಿಗಳು ಸೇರಿದಂತೆ ಇತರ ಕಡೆಗಳಲ್ಲಿ ಪ್ಲಾಸ್ಟಿಕ್‌ ಮೂಲಕ ಆಹಾರವನ್ನು ಕಟ್ಟಿ ಕೊಡಲಾಗುತ್ತಿದೆ. ಈ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಗೊಂಡರೆ ಅವುಗಳ ಜಾಗವನ್ನು ಬಾಳೆ ಎಲೆಗಳು ತುಂಬುವ ಸಾಧ್ಯತೆಗಳಿವೆ.

Advertisement

ಈಗಾಗಲೇ ಕೆಲವು ಹೊಟೇಲ್‌ ಗ‌ಳಲ್ಲಿ ಬಾಳೆ ಎಲೆ ಮೂಲಕ ಆಹಾರ ಕೊಡುವ ಪದ್ದತಿ ಆರಂಭವಾಗಿದೆ. ಇನ್ನು ಮುಂಬರುವ ದಿನಗಳಲ್ಲಿ ಬಾಳೆ ಎಲೆಯನ್ನು ಪ್ಲಾಸ್ಟಿಕ್‌ ಗೆ ಪರ್ಯಾಯವಾಗಿ ಬಳಸುವ ಸಾಧ್ಯತೆ ಇದೆ. ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧದ ಬಳಿಕ ತಮ್ಮ ಪಾಲಿಗೆ ಭಾಗ್ಯದ ಬಾಗಲು ತೆರೆಯುವ ನಿರೀಕ್ಷೆಯಲ್ಲಿ ಬಾಳೆ ಬೆಳೆಗಾರರು ಇದ್ದಾರೆ.

ಇಂದಿನ ದಿನಗಳಲ್ಲಿ ಆನ್‌ ಲೈನ್‌ ಫ‌ುಡ್‌ ಮಾರಾಟ ಹೆಚ್ಚೆಚ್ಚು ಪ್ರಸಿದ್ಧವಾಗುತ್ತಿದ್ದು, ನಗರಗಳಲ್ಲಿ ಇದು ಒಂದು ಟ್ರೆಂಡ್‌ ಆಗಿ ಬದಲಾಗಿದೆ. ಈಗ ಹೊಟೇಲ್‌ ಗ‌ಳಿಗೆ ಬಂದು ತಿಂದು ಹೋಗುವವರಿಗಿಂತ ಫ‌ುಡ್‌ ಆರ್ಡರ್‌ ಮೂಲಕ ತರಿಸಿಕೊಂಡು ತಿನ್ನುವವರೇ ಹೆಚ್ಚು. ಫ‌ುಡ್‌ ಪಾರ್ಸೆಲ್‌ ಗ‌ಳಿಗೆ ಈಗ ಪ್ಲಾಸ್ಟಿಕ್‌ ಅನ್ನೇ ಹೆಚ್ಚು ಅವಲಂಭಿಸಲಾಗುತ್ತಿದೆ. ಪ್ಲಾಸ್ಟಿಕ್‌ ಬದಲು ಬಾಳೆ ಎಲೆಯನ್ನು ಬಳಸುವ ನಿರೀಕ್ಷೆ ಇದೆ. ಹೊಟೇಲ್ ಫುಡ್ ಪಾರ್ಸೆಲ್ ವಿಭಾಗದಲ್ಲೂ ಬಾಳೆ ಎಲೆಗಳು ಬಳಸಲ್ಪಟ್ಟು ಕ್ಲಿಕ್‌ ಆದರೆ ಭವಿಷ್ಯದಲ್ಲಿ ಭಾರೀ ಬೇಡಿಕೆ ಎದುರಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next