ದೊಡ್ಡ ಗಾತ್ರದ ಬಾಳೆಕಾಯಿ – 5-6, ಉದ್ದಿನಬೇಳೆ -250ಗ್ರಾಂ, ಸಕ್ಕರೆ- 500ಗ್ರಾಂ. ಜೇನುತುಪ್ಪ- 1 ಸಣ್ಣ ಲೋಟ, ಕರಿಯಲು ಎಣ್ಣೆ, ಉಪ್ಪು- ರುಚಿಗೆ ತಕ್ಕಷ್ಟು.
Advertisement
ತಯಾರಿಸುವ ವಿಧಾನ:ಬಾಳೆಕಾಯಿಯನ್ನು ಸಿಪ್ಪೆ ಸಮೇತ ಕಟ್ ಮಾಡಿ ಕುಕ್ಕರ್‌ನಲ್ಲಿ 12 ವಿಶಲ್ ಬರುವವರೆಗೆ ಬೇಯಿಸಬೇಕು. ಬೆಂದ ಬಾಳೆಕಾಯಿ ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಿ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಒಂದು ಬಿಳಿ ಬಟ್ಟೆಗೆ ರಂಧ್ರವನ್ನು ಮಾಡಿ ಹಿಟ್ಟನ್ನು ತುಂಬಿಕೊಂಡು ಜಿಲೇಬಿ ಥರ ಕರಿಯಿರಿ. ಒಂದು ಪಾತ್ರೆಯಲ್ಲಿ ಸಕ್ಕರೆಯ ಪಾಕವನ್ನು ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ, ಕರಿದ ಹಿಟ್ಟನ್ನು ಹಾಕಿ 5 ರಿಂದ 10 ನಿಮಿಷ ಬಿಟ್ಟು ತೆಗೆದರೆ ಬಾಳೆಕಾಯಿ ಜೇನು ಸಕ್ಕರೆ ತಿನ್ನಲು ರೆಡಿ.