ಬಾಳೆ ಹೂ: ಒಂದು ಕಪ್
ಹೆಸರು ಕಾಳು: ಒಂದು ಕಪ್
ಅರಶಿಣ:ಒಂದು ಚಿಟಿಕೆ
ಬೆಳ್ಳುಳ್ಳಿ:ನಾಲ್ಕರಿಂದ ಐದು ಎಸಳು
ಈರುಳ್ಳಿ: ಒಂದು
ಖಾರದ ಪುಡಿ: ಎರಡು ಚಮಚ
ಧನಿಯಾ ಪುಡಿ: ಒಂದು ಚಮಚ
ತೆಂಗಿನ ತುರಿ: ಅರ್ಧ ಕಪ್
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಎರಡು ಚಮಚ
ಕರಿಬೇವು: ಸ್ವಲ್ಪ
ಸಾಸಿವೆ: ಸ್ವಲ್ಪ
ಜಜ್ಜಿದ ಬೆಳ್ಳುಳ್ಳಿ, ಸ್ವಲ್ಪ ಕಡ್ಲೆಬೇಳೆ, ಒಂದು
ಕೆಂಪು ಮೆಣಸಿನ ಕಾಯಿ.
Advertisement
ಮಾಡುವ ವಿಧಾನ: ಮೊದಲಿಗೆ ಬಾಳೆ ಹೂವನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಅರ್ಧ ಲೋಟ ನೀರು, ಸ್ವಲ್ಪ ಅರಿಶಿಣ ಮತ್ತು ಉಪ್ಪು ಹಾಕಿ ಮೂರು ವಿಶಲ್ ಬೇಯಿಸಿ ತೆಗೆದಿಟ್ಟುಕೊಳ್ಳಿ ಬಳಿಕ ಒಂದು ಬಾಣಲೆಯನ್ನು ಗ್ಯಾಸ್ ಮೇಲಿಟ್ಟು ಬಿಸಿಯಾದ ಬಳಿಕ ಎಣ್ಣೆ ಹಾಕಿ, ಕಾದ ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಮತ್ತು ಕಡ್ಲೆಬೇಳೆ, ಮೆಣಸಿಕಾಯಿ ಹಾಕಿಚೆನ್ನಾಗಿ ಹುರಿದುಕೊಳ್ಳಿ. ಅನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ವರೆಗೆ ಹುರಿದುಕೊಂಡು ಟೊಮೇಟೊ ಹಾಕಿ ಹತ್ತು ಸೆಕೆಂಡ್ ಚೆನ್ನಾಗಿ ಹುರಿಯಿರಿ. ಅನಂತರ ಧನಿಯಾ ಪುಡಿ ಮತ್ತು ಖಾರದ ಪುಡಿಯನ್ನು ಸೇರಿಸಿ ಹುರಿಯಿರಿ. ಇದಾದ ಬಳಿಕ ಬೇಯಿಸಿ ಸೋಸಿ ತೆಗೆದಿಟ್ಟಿರುವ ಬಾಳೆ ಹೂವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬೇಯಿಸಿದ ಹೆಸರು ಕಾಳು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ಬಳಿಕ ಅರ್ಧ ಕಪ್ ನೀರನ್ನು ಸೇರಿಸಿ ಬೇಯಲು ಬಿಡಿ. ಕೊನೆಯದಾಗಿ ತೆಂಗಿನ ತುರಿ ಸೇರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಾಳೆ ಹೂವಿನ ಪಲ್ಯ ಸವಿಯಲು ಸಿದ್ಧ.
– ಬಾಳೆ ಹೂವಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಫೈಬರ್ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ. – ಬಾಳೆ ಹೂವಿನಿಂದ ಮಧುಮೇಹ ಮತ್ತು ಒತ್ತಡವನ್ನು ನಿಯಂತ್ರಿಸಲು ಸಾಧ್ಯ ಹಾಗೆಯೇ ಪಚನಕ್ರಿಯೆ ಸರಾಗವಾಗಿ ಆಗಲು ಸಹಕರಿಸುತ್ತದೆ.
Related Articles
Advertisement