Advertisement

ಬಾಳೆ ಬದುಕು

09:22 AM Jul 29, 2019 | keerthan |

ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿ ಬಾಳೆ ಬೆಳೆದು ಲಕ್ಷಾಂತರ ರೂ. ಲಾಭ ಗಳಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ದಯಾನಂದ ಅವರು ಇತರೆ ರೈತರಿಗೆ ಸ್ಫೂರ್ತಿಗಿದ್ದಾರೆ…

Advertisement

ರಬಕವಿ-ಬನಹಟ್ಟಿ ತಾಲೂಕಿನ ರೈತ ದಯಾನಂದ ಹೊರಟ್ಟಿಯವರು ತಮ್ಮ 4 ಎಕರೆ ಜಮೀನಿನಲ್ಲಿ ಕಬ್ಬು, ಹತ್ತಿ, ಕಾಳು ಬೆಳೆ ಸೇರಿದಂತೆ ಮೊಲ ಸಾಕಣಿಕೆಯನ್ನೂ ಮಾಡಿಕೊಂಡು ಬದುಕು ಬಂಗಾರವಾಗಿಸಿಕೊಂಡಿದ್ದಾರೆ. ವಿಶೇಷವೆಂದರೆ, ಒಂದು ಎಕರೆಯಲ್ಲಿ ಸಾವಯವ ಗೊಬ್ಬರವನ್ನೇ ಉಪಯೋಗಿಸಿ ಬಾಳೆ ಬೆಳೆಯುವುದರ ಮೂಲಕ ಆದರ್ಶಪ್ರಾಯರಾಗಿದ್ದಾರೆ. ಬೇವಿನ ಎಣ್ಣೆಯ ಸಾವಯವ ಗೊಬ್ಬರ ದಯಾನಂದ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ 700 ಬಾಳೆ ಸಸಿಗಳನ್ನು ನೆಟ್ಟಿದ್ದು, ಇದಕ್ಕೆ ಬೇವಿನ ಎಣ್ಣೆ, ಗೋಮೂತ್ರ ಹಾಗು ಸೆಣಬು(ಡ್ರೆಂಟಾ) ಸಾವಯವ ಗೊಬ್ಬರವನ್ನು ಹಾಕಿದ್ದಾರೆ. ಇದಕ್ಕೆ ಪೂರಕವಾಗಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದು, ಕಡಿಮೆ ನೀರನ್ನು ಬಳಸಿಕೊಂಡು ನೀರಿನ ದುಂದುವೆಚ್ಚಕ್ಕೂ ಕಡಿವಾಣ ಹಾಕಿದ್ದಾರೆ. ದಯಾನಂದ ಅವರು ಒಂದು ಎಕರೆ ಬಾಳೆ ಬೆಳೆಯಲು 45 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದಾರೆ. ಒಂದೇ ವರ್ಷದಲ್ಲಿ ಲಕ್ಷ ರೂ.ಗಳವರೆಗೂ
ಆದಾಯ ಗಳಿಸುತ್ತಿದ್ದಾರೆ. ಸಾಮಾನ್ಯವಾಗಿ, ರಾಸಾಯನಿಕ ಗೊಬ್ಬರ ಬಳಸಿದರೆ ಒಂದು ಗಿಡದಲ್ಲಿ 2 ಬೆಳೆಯನ್ನು ಮಾತ್ರ ಪಡೆಯಬಹುದು. ಆದರೆ, ದಯಾನಂದ ಅವರು ಸಾವಯವ ಗೊಬ್ಬರವನ್ನು ಬಳಸುತ್ತಿರುವುದರಿಂದ ಒಂದೊಂದು ಬಾಳೆ ಗಿಡದಲ್ಲಿ 3 ರಿಂದ 4 ಬೆಳೆ ತೆಗೆಯಬಹುದಾಗಿದೆ. ಬೆಳೆಯನ್ನು ಪಡೆದ ನಂತರ ಕಡಿದ ಬಾಳೆ ಗಿಡಗಳನ್ನು ಗೊಬ್ಬರವಾಗಿಸಿ
ಅದೇ ಜಮೀನಿಗೆ ಬಳಸುತ್ತಿದ್ದು, ಇದರಿಂದಾಗಿ ಜಮೀನಿನ ಮಣ್ಣಿನಲ್ಲಿ ಎರೆ ಹುಳುಗಳ ಸಂತತಿ ಹೆಚ್ಚಿ ಭೂಮಿ ಫಲವತ್ತತೆಯಿಂದ ಕೂಡಿದೆ.

ಮಣ್ಣಿಗೆ ಜೀವಾಮೃತ
ಸಾವಯವ ಬಾಳೆಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವಲ್ಲಿ ಜೀವಾಮೃತ ಮಹತ್ವ ಪಡೆದಿದೆ. 2 ಕೆ.ಜಿ. ಕಡಲೆ ಹಿಟ್ಟು, 2 ಕೆ.ಜಿ. ಸಾವಯವ ಬೆಲ್ಲ, 10 ಕೆ.ಜಿ. ಸಗಣಿ, 10 ಲೀ. ಗೋಮೂತ್ರ, 4- 5 ಕೆ.ಜಿ.ಯಷ್ಟು ಸಜೀವ ಮಣ್ಣು ಸೇರಿಸಿ ಬ್ಯಾರೆಲ್‌ನಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಎರಡು ಹೊತ್ತು ಕಲಸುತ್ತಾ ಒಂದು ವಾರ ಬಿಡಬೇಕು. ಹಾಗೆ ತಯಾರು ಮಾಡುವುದೇ ಜೀವಾಮತ ಸಾವಯವ ಗೊಬ್ಬರ. ಇದನ್ನು ಪ್ರತಿ ಬಾಳೆ ಗೊಣೆಯ ತುಂಬನ್ನು ಕತ್ತರಿಸಿ ಅದನ್ನು 50 ಮಿ.ಲೀ ನಷ್ಟು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಕಟ್ಟಬೇಕು. ಬಾಳೆ ಬೆಳೆಯುವ ತಿಂಗಳಲ್ಲಿ ಬೇವಿನ ಹಿಂಡಿಯನ್ನು ತಳದಲ್ಲಿ ಹಾಕುವುದರಿಂದ ಗಿಡಗಳು ಸದೃಢ ಹಾಗೂ ಸಮದ್ಧವಾಗಿ ಬೆಳೆಯಲು ಅನುಕೂಲ ವಾ ಗುತ್ತದೆ ಎನ್ನುವುದು ಅವರ ಅನುಭವದ ಮಾತು

ಸಾವಯವ ಕೃಷಿಯಿಂದಾಗಿ, ಹಳದಿ ರೋಗ ಸೇರಿದಂತೆ ಯಾವುದೇ ರೋಗಕ್ಕೂ ಬಾಳೆ ತುತ್ತಾಗುವುದಿಲ್ಲ. ಭೂಮಿ, ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಹೊಂದಿ ಎಲ್ಲ ರೋಗಗಳಿಂದ ದೂರವಾಗಲು ಸಾಧ್ಯವಿದೆ. ಈ ವರ್ಷದ ಬಿರು ಬಿಸಿಲಿನಲ್ಲಿಯೂ ಯಾವುದೇ ತೊಂದರೆ ಅನುಭವಿಸದೆ ಹನಿ ನೀರಾವರಿಯಿಂದ ಭೂಮಿಯನ್ನು ಉತ್ತಮ ಫಸಲನ್ನಾಗಿಸುವಲ್ಲಿ ಸಹಾಯವಾಗಿದೆ.

ಕಿರಣ ಶ್ರೀಶೈಲ ಅಳಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next