ಬನಹಟ್ಟಿ: ನಗರದ ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿಯಮೇಲಿರುವ ಒಂದೇ ಮನೆಯ ಏಳುಜನರಿಗೆ ಕೋವಿಡ್-19 ದೃಢಪಟ್ಟಹಿನ್ನೆಲೆಯಲ್ಲಿ ಮಿನಿ ಕಂ ಟೈನ್ಮೆಂಟ್ ಝೋನ್ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯ ನಗರಸಭೆಯಹಿರಿಯ ಆರೋಗ್ಯಾಧಿಕಾರಿ ಎಂ.ಎಂ. ಮುಗಳಖೋಡ ಹೇಳಿದರು.
ಈ ಸಂದರ್ಭದಲ್ಲಿ ಕಂದಾಯನಿರೀಕ್ಷಕ ಬಸವರಾಜ ತಾಳಕೋಟಿಮಾತನಾಡಿ, ನಿರ್ಬಂಧಿತಪ್ರದೇಶದಲ್ಲಿರುವ ಯಾವುದೆ ವ್ಯಕ್ತಿಗಳು ಹೊರಗೆ ಬರಬಾರದು. ಬೇರೆ ಯಾವುದೆ ವ್ಯಕ್ತಿಗಳು ಆಪ್ರದೇಶದಲ್ಲಿ ಹೋಗದಂತೆ ನಿರ್ಬಂಧಹಾಕಲಾಗಿದೆ ಎಂದರು. ಕಿರಿಯಆರೋಗ್ಯ ಸಹಾಯಕ ರಾಜಕುಮಾರ ಹೊಸೂರ ಇದ್ದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ,ರಬಕವಿ ಬನಹಟ್ಟಿಯ ವ್ಯಾಪ್ತಿಯಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರುಕಡ್ಡಾಯವಾಗಿ ಸರ್ಕಾರಿಆಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್‌ಪಡೆದುಕೊಳ್ಳಬೇಕು. ಕೋವಿಡ್-19ತಡೆಗಟ್ಟುವಲ್ಲಿ ಸಾರ್ವಜನಿಕರಸಹಕಾರ ಮುಖ್ಯವಾಗಿದೆ ಎಂದುಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
110 ಜನರಿಗೆ ಕೋವಿಶೀಲ್ಡ್ ಲಸಿಕೆ :
ಜಮಖಂಡಿ: ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಹುಲ್ಯಾಳ ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ 45 ವರ್ಷ ವಯೋಮಾನ ಮೇಲ್ಪಟ್ಟ 110 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡುವ ಮೂಲಕ 25ಜನರ ಕೋವಿಡ್ ಪರೀಕ್ಷೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಉಮೇಶ ಕೋರಿ, ಸದಸ್ಯರಾದ ನಿಂಗಪ್ಪ ಮಂಡಾಗಣಿ,ಹನುಮಂತ ಗಚ್ಚಿನಮನಿ, ಆರೋಗ್ಯಮೇಲ್ವಿಚಾರಕ ಎಂ..ಎಚ್.ಕಡ್ಲಿಮಟ್ಟಿ, ವಿಜಯಲಕ್ಷ್ಮೀ, ಮಯೂರಿಸಹಿತ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಇದ್ದರು.