Advertisement

ಮೂಲ ಕಸುಬಿಗೆ ಉತ್ತೇಜನ

08:30 PM Jul 09, 2021 | Team Udayavani |

ದೇವನಹಳ್ಳಿ: ಸಂಸಾರಿಕ ಜೀವನದಲ್ಲಿ ಮಹಿಳೆಯ ಪಾತ್ರ ಮುಖ್ಯ. ಕುಟುಂಬದ ಒಬ್ಬರದುಡಿಮೆಯಿಂದ ಜೀವನ ನಿರ್ವಹಣೆ ಕಷ್ಟ.ಬಿಡುವಿನ ವೇಳೆಯಲ್ಲಿ ಸಣ್ಣಪುಟ್ಟ ಕಸುಬಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿಮುಂ ದೆ ಬರಲು ಚಿಂತನೆ ಮಾಡಬೇಕು ಎಂದು ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್‌.ನಾಗೇಶ್‌ ತಿಳಿಸಿದರು.

Advertisement

ತಾಲೂಕಿನ ದೊಡ್ಡಪ್ಪನಹಳ್ಳಿ ಗ್ರಾಮದಲ್ಲಿ ಕನ್ನಮಂಗಲ ಗ್ರಾಪಂನಿಂದ ಅರ್ಹ ಮಹಿಳೆಯರಿಗೆಹೊಲಿಗೆ ಯಂತ್ರ ವಿತರಿಸಿ ಮಾತನಾಡಿ,ಹೊಲಿಗೆ ಯಂತ್ರ ಪಡೆದಿರುವ ಮಹಿಳೆಯರುಬೇರೆ ಯವರಿಗೆ ಮಾರಾಟ ಮಾಡಬಾರದು.ವೃತ್ತಿ ಕಸಬುದಾರರಲ್ಲಿ ಆರ್ಥಿಕ ಚೈತನ್ಯವಿಲ್ಲದೆ,ಪರಿಕರ ಖರೀದಿಸಲು ಕಷ್ಟ. ಸ್ವ ಉದ್ಯೋಗ ಕಲ್ಪಿಸಿಕೊಂಡು ಸ್ವಾವಲಂಬಿ ಜೀವನ ನಡೆಸಿ,ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತೆಆಗಬೇಕು ಎಂಬ ಪರಿಕಲ್ಪನೆಯಿಂದ ಸರ್ಕಾರಪರಿಕರಣ ನೀಡುತ್ತಿದೆ ಎಂದರು.

ಹೊಲಿಗೆ ವೃತ್ತಿಯಿಂದ ಆದಾಯ: ಜಿಪಂಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷಕೆ.ಸಿ. ಮಂಜುನಾಥ್‌ ಮಾತನಾಡಿ, ಮಹಿಳೆಯರು ಹೊಲಿಗೆ ವೃತ್ತಿಯಿಂದ ಉತ್ತಮ ಆದಾಯಗಳಿಕೆ ಸಾಧ್ಯ. ಪ್ರತಿಯೊಬ್ಬ ಮಹಿಳೆಯರೂತಮ್ಮ ಆಸಕ್ತಿಗೆ ಅನುಗುಣವಾದ ವೃತ್ತಿಯಲ್ಲಿತೊಡಗ ಬೇಕು. ಆಗ ಮಾತ್ರ ಜೀವನ ಮಟ್ಟಸುಧಾರಿಸಲು ಸಾಧ್ಯ. ಇಂದಿನ ಹೊಸ ಹಾಗೂಸರಳ ವಿಧಾನ ಅನುಸರಿಸುವ ಮೂಲಕಉದ್ಯಮ ದಲ್ಲಿ ಯಶಸ್ಸು ಕಾಣ ಬಹುದುಎಂದು ಹೇಳಿದರು.ಗ್ರಾಪಂ ಸದಸ್ಯರಾದ ಕೆ. ಸೋಮಶೇಖರ್‌,ಲಕ್ಷ್ಮೀ ಕಾಂತ್‌, ಪಿ. ನಾಗೇಶ್‌, ಪಿಡಿಒ ಮಲ್ಲೇಶ್‌, ಕಾರ್ಯದರ್ಶಿ ಚಂದ್ರಪ್ಪ, ಗ್ರಾಪಂ ಮಾಜಿಸದಸ್ಯ ನಸೀರ್‌ ಅಹಮದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next