ದೇವನಹಳ್ಳಿ: ಮೈತ್ರಿ ಸರ್ಕಾರದ ಅವಧಿಯಲ್ಲಿ120ಕೋಟಿ ಅನುದಾನವನ್ನು ತಾಲೂಕಿಗೆ ಬಿಡುಗಡೆಮಾಡಿತ್ತು. ಬಿಜೆಪಿ ಸರ್ಕಾರ ಅನುದಾನವನ್ನುತಡೆಹಿಡಿದಿತ್ತು.
ಬಿಜೆಪಿ ಮುಖಂಡ ಬಿಜೆಪಿಮುಖಂಡ ಕೆ. ನಾಗೇಶ್ ಅನುದಾನವನ್ನು ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಲಿಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕುಜೆಡಿಎಸ್‌ನಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು. ನನ್ನ ಜನ್ಮಭೂಮಿಹೊಸಕೋಟೆಯಾಗಿದ್ದು, ಕರ್ಮಭೂಮಿದೇವನಹಳ್ಳಿಯಾಗಿದೆ. ನನ್ನ ಜೀವ ಇರುವ ತನಕನಾನು ದೇವನಹಳ್ಳಿ ಬಿಟ್ಟು ಎಲ್ಲಿಗೂ ಹೋಗಿಲ್ಲ.ನನಗೆ ಮತ ನೀಡಿರುವ ಜನರ ಪಾದ ತೊಳೆದುನೀರು ಕುಡಿಯುತ್ತೇನೆ.
ಕೋವಿಡ್‌ಗೆತುತ್ತಾಗಿದ್ದರಿಂದ ವೈದ್ಯರ ಸಲಹೆಯ ಮೆರೆಗೆ 21ದಿನ ಕ್ಷೇತ್ರಕ್ಕೆ ಬಂದಿರುವುದಿಲ್ಲ. ನನ್ನ ಮನೆಯಲ್ಲಿನಕುಟುಂಬ ಸದಸ್ಯರಿಗೂ ಕೊರೊನಾ ಪಾಸಿಟಿವ್‌ಆಗಿತ್ತು. ಈಗಿರುವಾಗ ಕ್ಷೇತ್ರಕ್ಕೆ ಬಂದು ಪಾಸಿಟಿವ್‌ಸೋಂಕು ಹರಡಿಸಬೇಕಿತ್ತೇ, ಇದನ್ನೇ ದೊಡ್ಡಅಸ್ತ್ರವನ್ನಾಗಿಸಿಕೊಂಡ ರಾಷ್ಟ್ರೀಯ ಪಕ್ಷಗಳು ತಮಗೆಬೇಕಾದ ರೀತಿಯಲ್ಲಿ ನನ್ನನ್ನು ಅಲ್ಲಗೆಳೆಯಲುಮುಂದಾಗಿದ್ದಾರೆ. ನಾನು ಯಾರನ್ನು ಇದುವರೆಗೂ ದ್ವೇಷಿಸಿಲ್ಲ. ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ.ಪ್ರಸನ್ನಕುಮಾರ್ ಅವರು ಆರೋಪ ಮಾಡಿರುವುದಕ್ಕಿಂತ ಮುಂಚೆ ತಿಳಿದುಕೊಂಡು ಆರೋಪಿಸಬೇಕು. ಎಕೆಪಿ ನಾಗೇಶ್ ಅವರೇ, ನೀವುಆರೋಪಿಸಿರುವುದು ಸರಿಯಲ್ಲ. ನನ್ನ ಜೊತೆ ಬನ್ನಿಹೋಗಿ ನಿಮ್ಮ ಮುಖ್ಯಮಂತ್ರಿಯೊಂದಿಗೆಮಾತನಾಡಿ ಅನುದಾನ ತರೋಣ ಅಭಿವೃದ್ಧಿಮಾಡೋಣ ಎಂದರು.