Advertisement

ಪ್ರೇಮಿಗಳ ದಿನಕ್ಕೆ ‘ಬಾನ ದಾರಿಯಲಿ’ ಟೀಸರ್‌

04:07 PM Feb 13, 2023 | Team Udayavani |

ನಟ ಗಣೇಶ್‌ ನಾಯಕರಾಗಿರುವ “ಬಾನದಾರಿಯಲಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಮಾರ್ಚ್‌ ನಲ್ಲಿ ತೆರೆಕಾಣಲಿದೆ. ಈಗ ಮೊದಲ ಹಂತವಾಗಿ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಪ್ರೇಮಿಗಳ ದಿನಕ್ಕೆ (ಫೆ.14) ರಂದು ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

Advertisement

ಇನ್ನು, “ಬಾನದಾರಿಯಲಿ’ ಚಿತ್ರಕ್ಕೆ “ನೋಡು ಎಂಥ ಚೆಂದ’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. ಈ ಚಿತ್ರವನ್ನು ಶ್ರೀವಾರಿ ಟಾಕೀಸ್‌ ನಿರ್ಮಿಸುತ್ತಿದೆ. ಈಗಾಗಲೇ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ “ಮಳೆಯಲಿ ಜೊತೆಯಲಿ’, “ದಿಲ್‌ ರಂಗೀಲಾ’ ಹಾಗೂ “99′ ಚಿತ್ರಗಳು ಬಂದಿವೆ. ಈಗ ನಾಲ್ಕನೇ ಬಾರಿ ಜೊತೆಯಾಗಿದ್ದಾರೆ.

ಚಿತ್ರದಲ್ಲಿ ರುಕ್ಮಿಣಿ ವಸಂತ್‌ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸಿದ್ದಾರೆ. “ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಲೀಲಾ ಎಂಬ ಸ್ವಿಮ್ಮಿಂಗ್‌ ಕೋಚ್‌ ಪಾತ್ರದಲ್ಲಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next