Advertisement
ರಾಜ್ಯ ಸರಕಾರದ ಪ್ಲಾಸ್ಟಿಕ್ ನಿಷೇಧ ಅಧಿಸೂಚನೆಯಂತೆ ಯಾವುದೇ ವ್ಯಕ್ತಿ, ಅಂಗಡಿ ಮಾಲಕರು, ಮಾರಾಟಗಾರರು, ಸಗಟು ಮಾರಾಟಗಾರರು, ಚಿಲ್ಲರೆ ವ್ಯಾಪಾರಿಗಳು, ವ್ಯಾಪಾರಿ ಮತ್ತು ಮಾರಾಟಗಾರರು, ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಮ್ಸ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೂಲ್, ಪ್ಲಾಸ್ಟಿಕ್ ಮೈಕೋ ಬೀಡ್ಸ್‌ನಿಂದ ತಯಾರಾದ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧದ ವಿರುದ್ದ ನಗರಸಭೆಯು ಈಗಾಗಲೇ ಕಾರ್ಯಾಚರಣೆಗೆ 3 ತಂಡಗಳನ್ನು ಸಿದ್ದಗೊಳಿಸಿದೆ. ಮಣಿಪಾಲ, ಮಲ್ಪೆ, ಉಡುಪಿ (ಈಸ್ಟ್, ವೆಸ್ಟ್, ಸೆಂಟ್ರಲ್) ಭಾಗಗಳಲ್ಲಿ ಆ ತಂಡಗಳು ಕಾರ್ಯಾಚರಣೆ ನಡೆಸಲಿವೆ. ಈಗಾಗಲೇ ಒಂದೊಂದು ತಂಡಗಳ ಉಸ್ತುವಾರಿಗಳ ನೇಮಕವೂ ನಡೆದಿದ್ದು, ಪೂರ್ಣ ಜವಾಬ್ದಾರಿ ನೀಡಲಾಗಿದೆ. ಲೈಸನ್ಸ್ ರದ್ದು!
ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಕಂಡು ಬಂದರೆ ಅಪಾರ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಗೆ 1000ರೂ. ಎರಡನೇ ಬಾರಿಗೆ 2000 ರೂ. ಹಾಗೂ ಮತ್ತೂ ಪುನರಾವರ್ತನೆಯಾದರೆ ಅಂಗಡಿ ಮಾಲಕರ ಲೈಸನ್ಸ್ ರದ್ದುಗೊಳಿಸುವ ಅಧಿಕಾರವನ್ನೂ ನೀಡಲಾಗಿದೆ.
Related Articles
ನಗರಾದ್ಯಂತ ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈಗಾಗಲೆ 3 ತಂಡಗಳು ತಯಾರಾಗಿದ್ದು ಕಾರ್ಯಾಚರಣೆಗೆ ಇಳಿಯಲಿವೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಲಾಗುವುದು. ಪುನರಾವರ್ತನೆಯಾದರೆ ಅಂಗಡಿ ಲೈಸನ್ಸ್‌ನ್ನೂ ರದ್ದುಗೊಳಿಸಲಾಗುವುದು.
– ಆನಂದ ಕಲ್ಲೋಳಿಕರ್, ಪೌರಾಯುಕ್ತರು, ಉಡುಪಿ ನಗರಸಭೆ
Advertisement