Advertisement

ಗೋವಾದಲ್ಲಿ ರಾತ್ರಿ 10ರ ಬಳಿಕ ಪಾರ್ಟಿಗೆ ನಿರ್ಬಂಧ ; ಶಾಸಕ ವಿಜಯ್ ಸರ್ದೇಸಾಯಿ ಆಕ್ರೋಶ

05:36 PM Dec 14, 2022 | Team Udayavani |

ಮಡಗಾಂವ್ : ಗೋವಾ ರಾಜ್ಯದಲ್ಲಿ ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಸಂಗೀತ ಪಾರ್ಟಿ ಅಥವಾ ಅಬ್ಬರದ ಕಾರ್ಯಕ್ರಮಗಳನ್ನು ಹೈಕೋರ್ಟ್ ನಿಷೇಧಿಸಿದೆ. ಪರಿಣಾಮವಾಗಿ, ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಸಂಗೀತ ಪಾರ್ಟಿ ನಡೆದರೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಗೋವಾ ಫಾರ್ವರ್ಡ್ ಪಾರ್ಟಿ ಶಾಸಕ ವಿಜಯ್ ಸರ್ದೇಸಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಮಡಗಾಂವ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಬೀಚ್ ಹೋಟೆಲ್ ಗಳು ಅಥವಾ ಅಂತಹುದೇ ವ್ಯವಹಾರಗಳಿಗೆ ತೆಗೆದುಕೊಂಡ ನಿರ್ಧಾರಗಳು ಸ್ವಾಗತಾರ್ಹ ಎಂದ ಅವರು,ಮದುವೆ ಸಮಾರಂಭಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸ್ಥಳೀಯ ನಾಗರಿಕರ ಖಾಸಗಿ ಕಾರ್ಯಕ್ರಮಗಳಿಗೆ ವಿನಾಯತಿ  ನೀಡಬೇಕು. ಅಂತಹ ಕಾರ್ಯಕ್ರಮಗಳಿಗೆ ರಾತ್ರಿ 10 ರ ನಂತರ ಕನಿಷ್ಠ ಒಂದು ಗಂಟೆ ಯಾದರೂ ಕಾಲಾವಕಾಶ ನೀಡಬೇಕು. ಸಾಮಾನ್ಯ ನಾಗರಿಕರು ಪ್ರತಿದಿನ ಕಾರ್ಯಕ್ರಮ ನಡೆಸುವುದಿಲ್ಲ. ತಮ್ಮ ತಮ್ಮ ಕಾರ್ಯಕ್ರಮದಲ್ಲಿ ಒಂದು ದಿನ ಮಾತ್ರ ನಡೆಸುತ್ತಾರೆ.   ಇದು ಗೋವಾದ ಸಂಸ್ಕೃತಿಯ ಭಾಗವಾಗಿದೆ, ಇದನ್ನು ಪರಿಗಣಿಸಬೇಕಾಗಿದೆ ಎಂದು ಶಾಸಕ ವಿಜಯ್ ಸರ್ದೇಸಾಯಿ ಹೇಳಿದರು.

ಗೋವಾ ರಾಜ್ಯದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.  ಇದು ಉತ್ಸವಗಳು, ಯಾತ್ರೆಗಳು, ಜಾತ್ರೆಗಳನ್ನು ಒಳಗೊಂಡಿದೆ. ಇದರೊಂದಿಗೆ ಕೆಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಇದು ಗೋವಾದವರ ಜೀವನದ ಭಾಗವಾಗಿದೆ.ಇದರಿಂದಾಗಿಯೇ ಗೋವಾದ ವಿಶಿಷ್ಟತೆ ಉಳಿದುಕೊಂಡಿದೆ.  ಇದರ ಪ್ರಾಮುಖ್ಯತೆಯನ್ನು ಪರಿಗಣಿಸಿ, ಗೋವಾ ಸರ್ಕಾರವು ಈ ನಿಟ್ಟಿನಲ್ಲಿ ನ್ಯಾಯಾಲಯವನ್ನು ಕೋರಬೇಕು ಮತ್ತು ಸ್ಥಳೀಯ ನಾಗರಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ನಿರ್ಬಂಧಗಳನ್ನು ಸಡಿಲಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next