Advertisement

ಮಧುರೈ ದೇಗುಲದಲ್ಲಿ ಮೊಬೈಲ್‌ ನಿಷೇಧ

06:00 AM Mar 01, 2018 | Team Udayavani |

ಮಧುರೈ: ಜಗದ್ವಿಖ್ಯಾತ ಮಧುರೈ ಮೀನಾಕ್ಷಿ ಸುಂದರೇಶ್ವರರ್‌ ದೇಗುಲದಲ್ಲಿ ಮಾ. 3ರಿಂದ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ. ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ, ಈ ಕುರಿತಂತೆ ನೀಡಿದ್ದ ತೀರ್ಪಿನ ಮೇರೆಗೆ ದೇಗುಲದ ಆಡಳಿತ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ವಿವರಣೆ ನೀಡಿದ ದೇಗುಲದ ಜಂಟಿ ಆಯುಕ್ತ ಎನ್‌. ನಟರಾಜನ್‌, “”ಮಾ. 3ರಿಂದ ದೇಗುಲಕ್ಕೆ ಬರುವ ಭಕ್ತಾದಿಗಳ ಮೊಬೈಲ್‌ಗ‌ಳನ್ನು ದೇಗುಲದ ಉತ್ತರ ಹಾಗೂ ಪಶ್ಚಿಮ ದ್ವಾರಗಳ ಬಳಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುವುದು. ಸುಮಾರು 1 ಸಾವಿರ ಮೊಬೈಲ್‌ಗ‌ಳನ್ನು ಸಂಗ್ರಹಿಸಲು ಯೋಜಿಸಿದ್ದು, ಪ್ರತಿ ಮೊಬೈಲ್‌ಗೆ ರು. 10 ಶುಲ್ಕ ವಿಧಿಸಲಾಗುತ್ತದೆ” ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next