ಹೊಸದಿಲ್ಲಿ: ತತ್‌ಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರವು ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು, ಕೆಲವು ಶ್ರೇಣಿಯ ಪರ್ಸನಲ್ ಕಂಪ್ಯೂಟರ್‌ಗಳನ್ನು ವಿದೇಶಗಳಿಂದ ಆಮದು ಮಾಡಿ, ದೇಶದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದೆ. ಈ ಬಗ್ಗೆ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ ಗುರುವಾರ ಆದೇಶ ಹೊರಡಿಸಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಮತ್ತು ಸ್ವಾವಲಂಬನೆ ಸಾಧಿಸಲು ಈ ತೀರ್ಮಾನ ನೆರವಾಗಲಿದೆ. ಜತೆಗೆ ಚೀನದ ಉತ್ಪನ್ನಗಳ ಹಾವಳಿಯನ್ನು ನಿಯಂತ್ರಿಸಲು ಹಾಗೂ ಅಲ್ಲಿಂದ ಎದುರಾಗುವ ಭದ್ರತ ಅಪಾಯವನ್ನು ತಪ್ಪಿಸಲು ಈ ಕ್ರಮ ಮಹತ್ವದ್ದಾಗಿದೆ.
-ಎಚ್‌ಎಸ್‌ಎನ್ 8741 ಕೆಟಗರಿ ವ್ಯಾಪ್ತಿಯಲ್ಲಿ ಬರುವ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್‌ಗಳನ್ನು ಆಮದು ಮಾಡಿ ದೇಶದಲ್ಲಿ ಮಾರಾಟಕ್ಕೆ ನಿಷೇಧ.
-ಸರ್ವರ್‌ಗಳು, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್‌ಗಳು, ಅಲ್ಟ್ರಾ ಸ್ಮಾಲ್ ಕಂಪ್ಯೂಟರ್‌ಗಳ ಮೇಲೆ ನಿರ್ಬಂಧ. ಪರವಾನಿಗೆ ಬೇಕು
-ಡೇಟಾ ಪ್ರೊಸೆಸಿಂಗ್ ವ್ಯವಸ್ಥೆಗೆ ಇರುವ ಮಷಿನ್‌ಗಳು, ಮೈಕ್ರೋ ಕಂಪ್ಯೂಟರ್‌ಗಳನ್ನು ತರಿಸಿಕೊಳ್ಳುವುದರ ಮೇಲೆ ನಿಷೇಧ ಇದೆ. ಆದರೆ ಪರವಾನಿಗೆ ಹೊಂದಿದ್ದರೆ ಆಮದು ಮಾಡಿಕೊಳ್ಳಬಹುದು.
-ಅವುಗಳ ಉದ್ದೇಶ ಈಡೇರಿದ ಬಳಿಕ ಅವುಗಳನ್ನು ನಾಶಪಡಿಸಬೇಕು. ಇಲ್ಲದಿದ್ದರೆ ಮೂಲ ರಾಷ್ಟ್ರಕ್ಕೆ ವಾಪಸ್ ಮಾಡಬೇಕು.
ಇಂಥ ಕ್ರಮವೇಕೆ?
01 ಚೀನದಲ್ಲಿ ಜೋಡಿಸಿದ ಕಂಪ್ಯೂಟರ್, ಟ್ಯಾಬ್ಲೆಟ್‌ಗಳ ಮೇಲೆ ನಿಷೇಧ. ಅವುಗಳನ್ನು ದೇಶದಲ್ಲಿಯೇ ಉತ್ಪಾದಿಸಲು ಇಂಥ ಕ್ರಮ.
02 ದೇಶದಲ್ಲಿಯೇ ಉತ್ತಮ ಗುಣಮಟ್ಟದ ಕಂಪ್ಯೂಟರ್ ಮತ್ತು ಇತರ ವಸ್ತುಗಳ ಉತ್ಪಾದನೆ ಮಾಡಲು ಉತ್ತೇಜನ.
03 ಚೀನ, ಕೊರಿಯಾಗಳಲ್ಲಿ ಜೋಡಿಸಿದ ಕಂಪ್ಯೂಟರ್ ಗಳಿಂದ ಭದ್ರತೆಗೆ ಆತಂಕ. ಹೀಗಾಗಿ ಈ ಕ್ರಮ.
ವಿನಾಯಿತಿಗಳೂ ಇವೆ
01 ಬ್ಯಾಗೇಜ್ ವ್ಯಾಪ್ತಿಯಲ್ಲಿ ಅಂದರೆ ವೈಯಕ್ತಿಕ ಬಳಕೆಗಾಗಿ ಕಂಪ್ಯೂಟರ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್‌ಗ್ಳನ್ನು ವಿದೇಶಗಳಿಂದ ಖರೀದಿಸಿ ತರಬಹುದು.
02ಸಂಶೋಧನೆ ಮತ್ತು ಅಭಿವೃದ್ಧಿ, ದುರಸ್ತಿ, ಪರೀಕ್ಷೆಗೆ ಒಳಪಡಿಸುವ ವ್ಯಾಪ್ತಿಯಲ್ಲಿ ಒಂದು ಕನ್‌ಸೈನ್‌ಮೆಂಟ್‌ಗೆ 20 ಕಂಪ್ಯೂಟರ್‌ಗಳ ವರೆಗೆ ರಿಯಾಯಿತಿ.
ಭದ್ರತೆಗೆ ಆದ್ಯತೆ
ವಿದೇಶದಿಂದ ಆಮದಿತಉತ್ಪನ್ನಗಳು ಖಾಸಗಿ ಮಾಹಿತಿಗೆ ಅಪಾಯ ಒಡ್ಡಬಹುದೆಂಬ ಕಾರಣದಿಂದ ಈ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭದ್ರತೆಗೆ ಆದ್ಯತೆ ನೀಡುವುದು ಮುಖ್ಯ ಉದ್ದೇಶ ಎನ್ನುತ್ತಾರೆ ಅವರು.