Advertisement

2027ರ ವೇಳೆಗೆ ಡೀಸೆಲ್‌ ಚಾಲಿತ 4 ಚಕ್ರ ವಾಹನಗಳ ನಿಷೇಧ?

10:32 PM May 08, 2023 | Team Udayavani |

ನವದೆಹಲಿ: ಭಾರತದಲ್ಲಿ 2027ರ ವೇಳೆಗೆ ಡೀಸೆಲ್‌ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು. ಜತೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಮಾಲೀಕರು ತಮ್ಮ ವಾಹನಗಳನ್ನು ವಿದ್ಯುತ್‌ಚಾಲಿತ ಮತ್ತು ಸಿಎನ್‌ಜಿ ವಾಹನಗಳಿಗೆ ಬದಲಾಯಿಸಬೇಕು ಎಂದು ತೈಲ ಸಚಿವಾಲಯದ ಸಮಿತಿ ಶಿಫಾರಸು ಮಾಡಿದೆ. “2024ರ ನಂತರ ನಗರ ಸಾರ್ವಜನಿಕ ಸಾರಿಗೆಗಾಗಿ ಡೀಸೆಲ್‌ ಬಸ್‌ಗಳ ಖರೀದಿಯನ್ನು ನಿರ್ಬಂಧಿಸಬೇಕು. 2030ರ ವೇಳೆಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಮಾತ್ರ ಖರೀದಿಸಬೇಕು,” ಎಂದು ಶಿಫಾರಸು ಮಾಡಿದೆ. ತೈಲ ಸಚಿವಾಲಯದ ಮಾಜಿ ಕಾರ್ಯದರ್ಶಿ ತರುಣ್‌ ಕಪೂರ್‌ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next