ವಿಜಯಪುರ: ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪಿಎಫ್ಐ ನಂಥ ಸಂಘಟನೆಗಳಿಗೆ ಪಾಕಿಸ್ತಾನದಿಂದ ಹಣ ಬರುತ್ತಿದ್ದು, ಇಂಥ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಧೇಶದಿಂದ ಅಕ್ರಮ ಹಣ ಪಡೆದು, ಈ ದುಡ್ಡನ್ನೇ ಬಳಸಿಕೊಂಡು ದೇಶ ನಾಗರಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳನ್ನು ದುರ್ಬಲ ಗೊಳಿಸುವ ಕೃತ್ಯಗಳನ್ನು ನಡೆಸಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ವಿದೇಶಿ ಹಣ ಬರುವ ಎನ್.ಜಿ.ಓ. ಗಳನ್ನು ರದ್ದು ಮಾಡಿದೆ ಎಂದು ಕೇಂದ್ರದ ಕ್ರಮವನ್ನು ಸಮರ್ಥಿಸಿದರು.
ಪಿ.ಎಫ್.ಐ ಸೇರಿದಂತೆ ದೇಶವಿರೋಧಿ ಚಟುವಟಿಕೆ ಮಾಡುವ ಉದ್ದೇಶಕ್ಕೆ ಪಾಕಿಸ್ತಾನದಿಂದ ಹಣ ಬರ್ತಿದೆ.
ದೇಶವಿರೋಧಿ ಚಟುವಟಿಕೆ ನೋಡಿದ್ರೆ ಇವರಿಗೆಲ್ಲ ವ್ಯವಸ್ಥಿತವಾಗಿ ಹಣ ಬರ್ತಿದೆ ಎಂಬುದು ಗೊತ್ತಾಗುತ್ತಿದೆ.
ಈಗಾಗಲೇ ಕೇಂದ್ರದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಎನ್. ಐ.ಎ. ಯಿಂದ ದೇಶಾದ್ಯಂತ ಇಂತಹ ಅಕ್ರಮ ಖಾತೆಗಳನ್ನು ಸೀಜ್ ಮಾಡಿದೆ ಎಂದರು.
Related Articles
ಇಂತಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು. ಪಿ.ಎಫ್.ಐ, ಎಸ್.ಡಿ.ಪಿ.ಐ. ಸೇರಿದಂತೆ ದೇಶವಿರೋಧಿ ಇತರೆ ಸಂಘಟನೆಗಳನ್ನು ದೇಶದ ಕಾನೂನಿನ ಅಡಿಯಲ್ಲಿ ನಿಷೇಧ ಮಾಡಲೇಬೇಕು ಎಂದು ಆಗ್ರಹಿಸಿದರು.