ರಾಯಚೂರು:ಪಿಎಫ್‌ಐ, ಎಸ್‌ಡಿಪಿಐ, ಭಜರಂಗದಳ ಸೇರಿದಂತೆ ಕೋಮು ಪ್ರಚೋದನೆ ಮಾಡುವ ಸಂಘಟನೆಗಳನ್ನು ಸರ್ಕಾರ ನಿಷೇಧಿ ಸಲಿ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಹ್ಮದ್ ನಲಪಾಡ್ ತಾಕೀತು ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಡಬಲ್ ಎಂಜಿನ್ ಸರ್ಕಾರವಿದ್ದರೂ ಏಕೆ ಇಂಥ ಸಂಘಟನೆ ನಿಷೇಧ ಮಾಡುತ್ತಿಲ್ಲ. ಎಂಟು ವರ್ಷದಿಂದ ಅ ಧಿಕಾರದಲ್ಲಿರುವ ಬಿಜೆಪಿ ಎಲ್ಲ ಕೋಮು ಪ್ರಚೋದಿತ ಸಂಘಟನೆಗಳನ್ನು ನಿಷೇ ಧಿಸಲಿ ಎಂಬುದೇ ಕಾಂಗ್ರೆಸ್ ಒತ್ತಾಯ. ಸರ್ಕಾರ ಶೇ.40 ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿರುವುದು ಗುತ್ತಿಗೆದಾರರ ಸಂಘದವರು.
ಸರ್ಕಾರ ಕಮಿಷನ್ ಪಡೆಯುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಅಭಿಯಾನ ನಡೆಸುತ್ತಿದೆ. ಭ್ರಷ್ಟಾಚಾರಕ್ಕೆ ಜಾತಿಯಿಲ್ಲ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ, ಶೇ.40 ಕಮಿಷನ್ ಪಡೆಯುತ್ತಿರುವ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲವೇ? ಬಿಜೆಪಿಯವರು ಮಠದ ಸ್ವಾಮಿಗಳಲ್ಲೇ ಕಮಿಷನ್ ತಿನ್ನುತ್ತಾರೆ. ಇನ್ನು ಸಾಮಾನ್ಯ ಜನರನ್ನು ಬಿಡುತ್ತಾರೆಯೇ? ಬೆಳಗಾವಿಯ ಸಂತೋಷ ಪಾಟೀಲ್ 40 ಪರ್ಸೆಂಟ್‌ಗೆ ಜೀವ ಕಳೆದುಕೊಂಡರು. ಅವರು ಲಿಂಗಾಯತರಲ್ಲವೇ ಎಂದರು.
“ಪೇ ಸಿಎಂ’ ಸುಳ್ಳಾಗಿದ್ದರೆ ಬಿಜೆಪಿಯವರು ಏಕೆ ಟೆನ್ಶನ್ ಮಾಡಿಕೊಳ್ಳುತ್ತಿದ್ದಾರೆ. ಅದು ನಿಜವಾಗಿರುವುದಕ್ಕೆ ಅವರಿಗೆ ಟೆನ್ಶನ್ ಆಗುತ್ತಿದೆ. ಸುಳ್ಳಾಗಿದ್ದರೆ ಸುಮ್ಮನಿರಲಿ. ಜನರೇ ಎಲ್ಲವನ್ನೂ ನಿರ್ಧರಿಸುತ್ತಾರೆ. “ಪೇ ಸಿಎಂ’ ಪೋಸ್ಟರ್ ಹಾಕಿದರೆ ನಮ್ಮ ಕಾರ್ಯಕರ್ತರನ್ನು ಬಂಧನ ಮಾಡುತ್ತಾರೆ. ರಾತ್ರೋರಾತ್ರಿ ನಮ್ಮ ಕಚೇರಿಗಳ ಮೇಲೆ ದಾಳಿ ಮಾಡುತ್ತಾರೆ. ಆದರೆ, ಇದಕ್ಕೆಲ್ಲ ನಾವು ಹೆದರುತ್ತೇವೆ ಎಂದುಕೊಂಡರೆ ಅದು ಶುದ್ಧ ತಪ್ಪು. ಎಲ್ಲವನ್ನು ಎದುರಿಸಲು ನಾವು ಸಿದ್ಧ ಎಂದರು.
ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಜೋಡೋ ಪಾದಯಾತ್ರೆ ನಿಮಿತ್ತ ರಾಜ್ಯಕ್ಕೆ ಆಗಮಿಸಲಿದ್ದಾರೆ. ಯುವಕರನ್ನು ಪಾದಯಾತ್ರೆಯಲ್ಲಿ ತೊಡಗಿಸಲು ಪೂರ್ವಸಿದ್ಧತೆ ಸಭೆ ನಡೆಸಲಾಗುತ್ತಿದೆ. ಯುವಕರಿಗೆ ಉದ್ಯೋಗವಿಲ್ಲ. ಕಾಂಗ್ರೆಸ್‌ನಿಂದ ಉದ್ಯೋಗ ಸೃಷ್ಟಿಸಿ ಅಭಿಯಾನ ನಡೆಸಲಾಗುತ್ತಿದೆ.
ಈಗಾಗಲೇ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಮೊದಲ ದಿನವೇ 16 ಸಾವಿರ ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಯುವ ಕಾಂಗ್ರೆಸ್ ಯುವ ಧ್ವನಿ ಅಭಿಯಾನದಲ್ಲಿ 41 ಸಾವಿರ ಯುವಕರು ನೋಂದಣಿ ಪಡೆದಿದ್ದಾರೆ. ಪ್ರತಿ ಬ್ಲಾಕ್‌ಗೂ ಹೋಗಿ ನಿರುದ್ಯೋಗಿಗಳು, ರೈತರು, ವಿದ್ಯಾರ್ಥಿಗಳು ಭೇಟಿ ಮಾಡಿ ಚರ್ಚಿಸಲಾಗುತ್ತಿದೆ. ಯುವಕರಿಗೆ ಉದ್ಯೋಗ ಸಿಗದಿರುವುದರಿಂದ ತಪ್ಪು ದಾರಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೆ, ಭಯೋತ್ಪಾದಕರಾಗುತ್ತಿದ್ದಾರೆ ಎಂದು ಹೇಳಿಲ್ಲ. ಉದ್ಯೋಗ ನೀಡಿದರೆ ಯುವಕರು ದಾರಿ ತಪ್ಪುವುದಿಲ್ಲ ಎಂದು ಹೇಳಿದ್ದೇನೆ ಎಂದರು.