ಚಿಕ್ಕಮಗಳೂರು : ಕೋಮು ಭಾವನೆ ಬಿತ್ತುವ ಎಲ್ಲಾ ಸಂಘಟನೆಗಳನ್ನ ಬ್ಯಾನ್ ಮಾಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪರೋಕ್ಷ ವಾಗಿ ಆರ್ ಎಸ್ ಎಸ್, ಬಜರಂಗದಳ , ಶ್ರೀರಾಮಸೇನೆ ಸಂಘಟನೆ ನಿಷೇಧಕ್ಕೆ ಒತ್ತಾಯ ಮಾಡಿದರು.
ಪರೋಕ್ಷವಾಗಿ ಬಿಜೆಪಿಗೆ ಸಹಕಾರ ನೀಡುತ್ತಿರುವ ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳನ್ನ ಮೊದಲು ಬ್ಯಾನ್ ಮಾಡಿ, ಪ್ರಚೋದನಾ ಹೇಳಿಕೆ ನೀಡುವ ಹಿಂದೂ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದರು.
ಇದನ್ನೂ ಓದಿ : ಅಸ್ಸಾಂ: ಶಾಲೆಗೆ ಗೋಮಾಂಸ ತಂದ ಮುಖ್ಯೋಪಾಧ್ಯಾಯಿನಿಯ ಬಂಧನ
ಕಾಂಗ್ರೆಸ್ ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳಂತೆ ವರ್ತಿಸಲು ಸಾಧ್ಯವಿಲ್ಲ. ಕೋಮು ಭಾವನೆಗಳನ್ನ ಬಿತ್ತುವಂತಹ ಎಲ್ಲಾ ಸಂಘಟನೆಗಳನ್ನು ಮುಲಾಜಿಲ್ಲದೇ ಬ್ಯಾನ್ ಮಾಡಬೇಕು. ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳು ಮಾಡುತ್ತಿರುವುದನ್ನೇ ಹಿಂದೂ ಸಂಘಟನೆ ಮಾಡುತ್ತಿವೆ. ಕೋಮು ಭಾವನೆ ಬಿತ್ತುವ ಯಾವ ಸಂಘಟನೆಯೂ ಇರಬಾರದು ಎಂದರು.