ರಾಮನಗರ: ಮೇ 12ರಂದು ನಡೆಯುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ನಿರ್ದೇಶಕ ಸ್ಥಾನ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಪಿ.ನಾಗರಾಜು ಅವರನ್ನು ಕಣಕ್ಕಿಳಿಸಿದ್ದು, ಎಂಪಿಸಿಎಸ್ ಅಧ್ಯಕ್ಷರು ಅವರಿಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮನವಿ ಮಾಡಿದರು.
2 ಬಾರಿ ಅವಿರೋಧ ಆಯ್ಕೆ: ಪಿ.ನಾಗರಾಜು ಅವರು ಇದು 5ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಎರಡು ಬಾರಿ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಕಳೆದ ನಾಲ್ಕು ಅವಧಿಯಲ್ಲಿ ಹೈನುಗಾ ರಿಕೆಯ ಅಭಿವೃದ್ಧಿಗೆ ಮತ್ತು ಹೈನುಗಾರ ಕುಟುಂ ಬಗಳಿಗೆ ಆರ್ಥಿಕವಾಗಿ ಸಬಲರಾಗುವಲ್ಲಿ ಶ್ರಮಿಸಿದ್ದಾರೆ. ಅವರ ಕಾರ್ಯ ವೈಖರಿ, ಕ್ರಿಯಾ ಶೀಲತೆಯನ್ನು ಜನಸಾಮಾನ್ಯರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೆಚ್ಚಿಕೊಂಡಿದ್ದಾರೆ ಎಂದರು. ಹಾಲು ಸಹಕಾರ ಕ್ಷೇತ್ರಕ್ಕೆ ಅವರ ಸೇವೆ ಇನ್ನೂ ಅಗತ್ಯವಿದೆ. ಹೀಗಾಗಿ ಎಲ್ಲಾ ಡೇರಿಗಳ ಅಧ್ಯಕ್ಷರು ಪಿ.ನಾಗರಾಜು ಅವರನ್ನು ಬಮೂಲ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆರೋಪ ನಿರಾಧಾರ: ರಾಮನಗರ ಕ್ಷೇತ್ರ ದಿಂದ ನಿರ್ದೇಶಕ ಸ್ಥಾನದ ಚುನಾವಣೆಗೆ ಕರಡು ಮತದಾರರ ಪಟ್ಟಿಯಲ್ಲಿ ವಿವಿಧ ಕಾರಣಗಳಿಗೆ 74 ಎಂಪಿಸಿಎಸ್ ಅಧ್ಯಕ್ಷರ ಮತ ದಾನಕ್ಕೆ ಅನರ್ಹರು ಎಂದು ಘೋಷಿಸಲಾಗಿತ್ತು. ಮತದಾನದಿಂದ ವಂಚಿತವಾಗಿರುವ ಸಂಘದ ಅಧ್ಯಕ್ಷರಿಗೆ ಆಗಿರುವ ಅನ್ಯಾಯವನ್ನು ನಾಗರಾಜ್ ಮಾರ್ಗದರ್ಶನದಲ್ಲಿ ಚಿಕ್ಕಕುಂಟನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಮುನಿಸ್ವಾಮಯ್ಯ ಸೇರಿದಂತೆ 58 ಸಂಘಗಳ ಅಧ್ಯಕ್ಷರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಾಧೀಶ ಎಸ್.ಎನ್.ಸತ್ಯನಾರಾಯಣ ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಆದೇಶದ ಮೂಲಕ ಎಲ್ಲಾ 58 ಸಂಘಗಳ ಅಧ್ಯಕ್ಷರಿಗೂ ಮತದಾನಕ್ಕೆ ಅವಕಾಶ ನೀಡಿದ್ದಾರೆ.
159 ಸಂಘದ ಅಧ್ಯಕ್ಷರಿಗೆ ಅವಕಾಶ: ಆದರೆ ಈ ವಿಚಾರದಲ್ಲಿ ಬಿಡದಿ ಹೋಬಳಿ ರಾಮನಹಳ್ಳಿ ಎಂಪಿಸಿಎಸ್‌ನ ಅಧ್ಯಕ್ಷ ಆರ್.ಎ. ಗೋಪಾಲ್ ಹಾಗೂ ಇಟ್ಟಮಡು ಎಂಪಿಸಿಎಸ್‌ನ ಮಾಜಿ ಕಾರ್ಯದರ್ಶಿ ಎನ್.ಪುಟ್ಟಪ್ಪ ಅವರು ಪಿ.ನಾಗರಾಜು ಅವರ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಸಂಘಗಳ ಅಧ್ಯಕ್ಷರ ವಕಾಲತ್ತಿಗೆ ಸಹಿ ಹಾಕಿಸಿಕೊಂಡಿದ್ದರು, ನ್ಯಾಯಾ ಲಯಕ್ಕೆ ಕೊಡಲಿಲ್ಲ ಎಂಬಿತ್ಯಾದಿ ಆರೋಪ ಗಳೆಲ್ಲ ನಿರಾಧಾರ. ಅಸಲಿಗೆ ಪಿ.ನಾಗರಾಜ್ ಅವರ ಮಾರ್ಗದರ್ಶನದಂತೆ 58 ಅಧ್ಯಕ್ಷರ ರಿಟ್ ಅರ್ಜಿ ಏ.15ರಂದೇ ಹೈಕೋರ್ಟಿಗೆ ಸಲ್ಲಿಕೆಯಾಗಿತ್ತು ಎಂದು ಪಿ.ನಾಗರಾಜ್‌ರನ್ನು ಸಮರ್ಥಿಸಿ ಕೊಂ ಡರು. ಇದೀಗ ರಾಮನಗರ ತಾಲೂಕಿನ 159 ಸಂಘಗಳ ಅಧ್ಯಕ್ಷರಿಗೆ ಮತದಾನಕ್ಕೆ ಅವಕಾಶ ಸಿಕ್ಕಂತಾಗಿದ ಎಂದು ಮಾಹಿತಿ ನೀಡಿದರು.
Advertisement
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಈಗಾಗಲೇ ಪಿ.ನಾಗರಾಜು ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಎಂದರು.
Related Articles
Advertisement
ಅಧ್ಯಕ್ಷರಿಗೆ ಮತದಾನ ಮಾಡಲು ಅವಕಾಶ:
ಮೇ 12ರಂದು ನಡೆಯುವ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಈ ಎಂ.ಪಿ.ಸಿ.ಎಸ್‌ಗಳ ಅಧ್ಯಕ್ಷರಿಗೆ ಮತಾದನಕ್ಕೆ ಅವಕಾಶ ಸಿಕ್ಕಿದೆ. ಚಿಕ್ಕಕುಂಟನಹಳ್ಳಿ, ಕರಡೀಗೌಡನ ದೊಡ್ಡಿ, ಮೊಟ್ಟೆದೊಡ್ಡಿ, ನಿಜಿಯಪ್ಪನದೊಡ್ಡಿ, ಹೆಗ್ಗಡ ಗೆರೆ, ಅರಳೀಮರದದೊಡ್ಡಿ, ಬಿಲ್ಲಕೆಂಪನ ಹಳ್ಳಿ, ಐಜೂರು, ಬಿ.ಗೊಲ್ಲಳ್ಳಿ, ಅರಳಾಳು ಸಂದ್ರ, ಹರಳೀಮರದದೊಡ್ಡಿ, ಗಾಣಕಲ್, ಮದರ್‌ಸಾಬರದೊಡ್ಡಿ, ಕೊಡಿಯಾಲ, ತಡಿಕವಾಗಿಲು, ಅಂಚೀಪುರ, ಜೆ.ಕುರುಬರಹಳ್ಳಿ, ವೀರೇಗೌಡನ ದೊಡ್ಡಿ, ಅರ್ಚಕರಹಳ್ಳಿ, ಬೋರೇಹಳ್ಳಿ, ಕಲ್ಲುಗೋ ಪಳ್ಳಿ, ಮನಗನಹಳ್ಳಿ, ಅವ್ವೇರಹಳ್ಳಿ, ನಾಗೋ ಹಳ್ಳಿ, ವಾಜರಹಳ್ಳಿ, ತೆಂಗಿನಕಲ್ಲು, ಹುಣಸೆ ದೊಡ್ಡಿ, ಪಾದರಹಳ್ಳಿ, ಮೇಡನಹಳ್ಳಿ, ಗುನ್ನೂರು, ತಿಮ್ಮಸಂದ್ರ, ಲಕ್ಷ್ಮೀಪುರ, ನಂಜೇಗೌಡನದೊಡ್ಡಿ, ಚಾಮುಂಡಿಪುರ, ಪೇಟೆ ಕುರುಬರಹಳ್ಳಿ, ಕೃಷ್ಣಪ್ಪನ ದೊಡ್ಡಿ, ಬಿಳಗುಂಬ, ತುಂಬೇನಹಳ್ಳಿ, ಸಂಜೀವಯ್ಯನದೊಡ್ಡಿ, ಜೋಗನಪಾಳ್ಯ, ಜಿ.ಅಂಕನಹಳ್ಳಿ, ನಾಗರಕಲ್ಲುದೊಡ್ಡಿ, ಎಂ.ಜಿ.ಪಾಳ್ಯ, ಚಿಕ್ಕಬೈರಮಂಗಲ, ಅಂಚೀ ಪುರ ಕಾಲೋನಿ, ಚನ್ನಮಾರೇ ಗೌಡನ ದೊಡ್ಡಿ, ಕದಲೀಗೌಡನದೊಡ್ಡಿ, ಜಡೇನ ಹಳ್ಳಿ, ಶ್ಯಾನುಭೋಗನಹಳ್ಳಿ, ಕಾಂಚೀ ದೊಡ್ಡಿ, ಕೆಂಚನಕುಪ್ಪೆ, ಬಿ.ಬನ್ನಿಕುಪ್ಪೆ, ಹುಣ ಸನಹಳ್ಳಿ, ಕೂಟಗಲ್, ಲಕ್ಕೋಜನಹಳ್ಳಿ, ಕೃಷ್ಣರಾಜಪುರ, ತಾಳವಾಡಿ, ವಡ್ಡರಹಳ್ಳಿ.