ನಂಜನಗೂಡು: ನಿಮ್ಮೂರಿನ ಪುತ್ರನಿಗೆ ನೀವು ಅಧಿಕಾರದ ಭಾಗ್ಯ ನೀಡಿ ನಾವು ಅವರಿಗೆ ಶಾದಿ ಭಾಗ್ಯ ನೀಡುತ್ತೇವೆ ಎಂದು ಸಚಿವ ಡಾ. ಎಚ್.ಸಿ ಮಹದೇವಪ್ಪಹೇಳಿದರು. ಸಂಸದ ಆರ್. ಧ್ರುವನಾರಾಯಣ ಹಾಗೂ ಅವರು ಕೈ ಪಕ್ಷದ ಅಭ್ಯರ್ಥಿ ಕೇಶವ ಮೂರ್ತಿ ಪರ ಪ್ರಚಾರಕ್ಕೆ ಬೆಳಗ್ಗೆ ಕಳಲೆಗೆ ಆಗಮಿಸಿದ ಕೇಶವಮೂರ್ತಿ, ಮಹದೇವಪ್ಪ ಹಾಗೂ ಧ್ರುವನಾರಾಯಣ ಲಕ್ಷ್ಮೀಕಾಂತ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ದೇವಾಲಯದ ಆವರಣದ ಅರಳಿ ಕಟ್ಟೆಯನ್ನೇರಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತಯಾಚಿಸಿದರು.
ರಾಯಚೂರು, ಕಲಬುರಗಿ ಇದ್ದ ಹಾಗೆ: ಮಹದೇವಪ್ಪ ಮಾತನಾಡಿ, ನಂಜನಗೂಡಿನ ಗ್ರಾಮೀಣ ಭಾಗಗಳನ್ನು ನೋಡಿದರೆ ರಾಜ್ಯದ ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳನ್ನು ಕಂಡ ಹಾಗಿದೆ. ಅಭಿವೃದ್ಧಿಯನ್ನೇ ಕಾಣಲಾಗದ ಈ ಕ್ಷೇತ್ರದಲ್ಲಿ ಈಗ ಆರು ತಿಂಗಳಿಂದ ಮಾತ್ರ ಅಭಿವೃದ್ಧಿ ಆರಂಭವಾಗಿದೆ ಎಂದರು.
ಈ ತಾಲೂಕುನ್ನು ಅಭಿವೃದ್ಧಿ ಪಡಿಸ ಬೇಕು ಎಂಬ ಮಹದಾಸೆ ಯೊಂದಿಗೆ ತಾವು ಕಾಮಗಾರಿಗಳನ್ನು ಪ್ರಾರಂಭಿಸಿರುವುದಾಗಿ ಹೇಳಿದ ಅವರು ಆಗ ಪ್ರಸಾದ ಇನ್ನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಇರಲಿಲ್ಲ, ಈಗ ಬರಗಾಲದಲ್ಲೂ ಚುನಾವಣೆ ಬಂದಿದೆ ಮಳೆ ಇಲ್ಲದೆ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ ಆದ್ದರಿಂದ ಈಗ ಅನ್ನಭಾಗ್ಯದ ಅಕ್ಕಿ ಹೆಚ್ಚಿಸಲಾಗಿದೆ. ನಮ್ಮ ಸರ್ಕಾರ ಈ ನಿಮ್ಮ ಗ್ರಾಮಕ್ಕೆ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದ್ದು ಚುನಾವಣೆಯ ನಂತರ ಪ್ರಕಟಿಸ ಲಾಗುವುದು ಎಂದು ತಿಳಿಸಿದರು.
ನಂಜನಗೂಡು ಎಂದು ಕೋಮುವಾದಿ ಗಳಿಗೆ ಮಣೆ ಹಾಕಿಲ್ಲ ಹಾಕು ವುದು ಇಲ್ಲ. ನೀವೆಲ್ಲ ಸೇರಿ ಮತ ಹಾಕಿ ನಿಮ್ಮ ಮನೆ ಮಗನಿಗೆ ಅಧಿಕಾರ ಭಾಗ್ಯ ನೀಡಿ ನಂತರ ನಾವು ಈ ಬ್ರಹ್ಮಚಾರಿಗೆ ಶಾದಿ ಭಾಗ್ಯ (ಮದುವೆ) ಮಾಡಿಸುತ್ತೇವೆ. ಎಂದಾಗ ಗ್ರಾಮದ ಜನತೆ ಹರ್ಷೋದ್ಘಾರ ವ್ಯಕ್ತಪಡಿಸಿದರು .
ಅಭ್ಯರ್ಥಿ ಕಳಲೆ ಮಾತನಾಡಿ, ನಿಮ್ಮವನಾದ ನನಗೆ ಕಾಂಗ್ರೆಸ್ ಟಿಕೆಟ್ ನೀಡಿ ಕಳಲೆ ಗ್ರಾಮದ ಹೆಸರನ್ನು ಮುಗಿಲೆತ್ತರಕ್ಕೇರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
30 ವರ್ಷಗಳಿಂದ ತಾಲೂಕಿನ ಜನತೆಗೆ ತಮ್ಮದೆ ಆದ ರೀತಿಯಲ್ಲೆ ಸೇವೆ ಸಲ್ಲಿಸುತ್ತ ಬಂದಿರುವ ತಮಗೆ ಈ ಬಾರಿ ಶಾಸಕತ್ವ ದೊರಕಲು ಕಾರ ಣರು ನೀವಾಗಿ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ, ಮಾಜಿ ಅಧ್ಯಕ್ಷ ಧರ್ಮೇಂದ್ರ, ಮಾಜಿ ಉಪಾಧ್ಯಕ್ಷ ಮಡುವಿನ ಹಳ್ಳಿ ಶಂಕರಪ್ಪ, ಮಾಜಿ ಸದಸ್ಯರಾದ ಕೆ.ಬಿ. ಸ್ವಾಮಿ, ಮಾರುತಿ, ಚೋಳರಾಜು ತಾಪಂ ಮಾಜಿ ಅಧ್ಯಕ್ಷ ನಾಗೇಶ ರಾಜು, ಕಡಜೆಟ್ಟಿ ಬಸವರಾಜು ಹಾಡ್ಯ ಶಿವಣ್ಣ ಚಂದ್ರವಾಡಿ ನಾಗಣ್ಣ ಮತ್ತಿತರರು ಇದ್ದರು.