Advertisement
ಕಾಸರಗೋಡು ಜಿಲ್ಲೆಯನ್ನು “ಬ್ಯಾಂಬು ಕ್ಯಾಪಿಟಲ್’ ಆಗಿ ಪರಿವರ್ತಿಸುವ ಉದ್ದೇಶದ ಹಿನ್ನೆಲೆಯಲ್ಲಿ 60 ಸಾವಿರ ಬಿದಿರಿನ ಸಸಿಗಳನ್ನು ವಿತರಿಸಲಾಗುವುದು. “ನನ್ನ ಮರ, ನಮ್ಮ ಮರ, ಹಸಿರು ತೀರ, ದಾರಿ ಬದಿ ಮರದ ತಂಪು, ಹೊಳೆ ಬದಿಯ ರಕ್ಷಣೆ, ಇನ್‌ಸ್ಟಿಟ್ಯೂಷನ್ ಪ್ಲಾಂಟಿಂಗ್’ ಎಂಬ ಸಂದೇಶದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ಯುವಜನ ಸಂಘಟನೆಗಳನ್ನು ಬಳಸಿಕೊಳ್ಳಲಾಗುವುದು. ಜೂನ್ 5 ರಂದು ಕಾಂಞಂಗಾಡ್ ಪೊಯಿಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.
ಪ್ರಕೃತಿ ಮತ್ತು ಪರಿಸರದ ಸಮಸ್ಯೆಗಳನ್ನು ಪರಿಹರಿಸುವ ಜತೆಯಲ್ಲಿ ಅಸಮತೋಲನವನ್ನು ನಿವಾರಿಸುವುದು ಈ ಮಹತ್ವದ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಾರಂಭಿಕ ಪ್ರಕ್ರಿಯೆಗಳು ಆರಂಭಗೊಂಡಿವೆೆ. ಕಾಸರಗೋಡು ಜಿಲ್ಲಾಡಳಿತ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತ್‌ಗಳಲ್ಲಿ ಈ ಯೋಜನೆಗೆ ರೂಪುರೇಶೆ ಸಿದ್ಧªಪಡಿಸಲಾಗಿದೆ. ಬಿದಿರಿನ ಸಸಿಗಳನ್ನು ನೆಟ್ಟು ಬೆಳೆಸಿ ಜಿಲ್ಲೆಯ ಪ್ರಕೃತಿ-ಪರಿಸರದ ಸಮಸ್ಯೆಗಳನ್ನು ದೂರ ಮಾಡುವ ಬೃಹತ್ ಯೋಜನೆ ಸಿದ್ಧವಾಗಿದ್ದು, ಬಿದಿರು ನೆಟ್ಟು ಬೆಳೆಸುವುದರಿಂದ ಭೂಮಿಯ ಅಂತರ್ಜಲ ಮಟ್ಟ ಗಣನೀಯ ಹೆಚ್ಚಳವಾಗಲಿದೆ ಮಾತ್ರವಲ್ಲ ಬಿದಿರು ಬೆಳೆಸಲ್ಪಡುವ ಪ್ರತಿ ಗ್ರಾಮ ಪಂಚಾಯತ್‌ಗಳಿಗೂ ಇದರಿಂದ ವರಮಾನ ಸಾಧ್ಯವಿದೆ ಎಂದು ನಿರೀಕ್ಷಿಸಲಾಗಿದೆ. ಯೋಜನೆಯು ಜೂ.5 ರಂದು ನಡೆಯುವ ಅಂತಾರಾಷ್ಟ್ರೀಯ ಪರಿಸರ ದಿನದಂದು ಉದ್ಘಾಟನೆಗೊಳ್ಳಲಿದ್ದು, ಬಿದಿರು ನೆಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮತ್ತು ಕಾಸರಗೋಡು ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಜಾರಿಗೆ ಬರಲಿರುವ ಯೋಜನೆಯ ಬಗ್ಗೆ ತಜ್ಞರ ತಂಡದಿಂದ ಬಿದಿರು ನೆಡುವ ಮತ್ತು ಪೋಷಿಸುವ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ. ಕೃಷಿ ಇಲಾಖೆ, ಗ್ರಾಮ ಪಂಚಾಯತ್, ಗ್ರಾಮಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಬಿದಿರು ನೆಡುವ ಬೃಹತ್ ಯೋಜನೆ ಸಿದ್ಧಗೊಂಡಿದೆ.
Related Articles
22 ಲಕ್ಷದಷ್ಟು ಜೈವಿಕ ವಸ್ತು ಬಿದಿರಿನಿಂದ ಭೂಮಿಗೆ ಸೇರುತ್ತದೆ. ಹೀಗೆ ಬೀಳುವ ಬಿದಿರಿನ ಎಲೆ ತೊಗಟೆಯಿಂದ ಕೆಮ್ಮಣ್ಣಿನ ಭೂನೆಲವು ಫಲ ಸಮೃದ್ಧಿಯಾಗುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚು ಪಾಳು ಬಾವಿಗಳಿರುವ ಕಾಸರಗೋಡು ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೂ ಬಿದಿರು ಬೆಳೆ ಸಹಾಯಕವಾಗಲಿದ್ದು, ಪಾಳು ಬಾವಿಗಳಲ್ಲಿ ನೀರು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ನೀರು ಸಿಗದೆ ಪಾಳು ಬಿದ್ದಿರುವ ಸಾವಿರದಷ್ಟು ಬಾವಿಗಳು ಮತ್ತು ಬೋರ್‌ವೆಲ್‌ಗಳಿರುವ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಹೆಚ್ಚು ನೀರು ಲಭ್ಯತೆಯು ಬಿದಿರು ಬೆಳೆಯಿಂದ ಸಾಧ್ಯವಿದೆ. ಬಿದಿರಿನ ಬೇರುಗಳು ಸುಲಭವಾಗಿ ಗಟ್ಟಿ ಮಣ್ಣಿನ ಆಳಕ್ಕೆ ಇಳಿಯುತ್ತವೆ. ಇದರಿಂದ ಮಳೆಗಾಲದ ಅವ ಧಿಯಲ್ಲಿ ಹೆಚ್ಚಿನ ನೀರು ಭೂಮಿಯ ಅಡಿಪದರಕ್ಕೆ ಇಳಿಯುವಂತೆ ಆಗುತ್ತದೆ. ಹಲವು ವರ್ಷಗಳ ಕಾಲ ನಡೆಯುವ ಧನಾತ್ಮಕ ಪ್ರಕ್ರಿಯೆಯು ಬಿದಿರಿನ ಮೂಲಕ ಅಂತರ್ಜಲ ಹೆಚ್ಚಳವಾಗುತ್ತದೆ ಎಂಬುವುದು ತಜ್ಞರ ಅಭಿಪ್ರಾಯ.
Advertisement
ಗಿಡ ನೆಡಲು ಉದ್ಯೋಗ ಖಾತರಿ ಸದಸ್ಯರುಜಿಲ್ಲಾಧಿಕಾರಿ ಡಾ|ಡಿ ಸಜಿತ್‌ಬಾಬು ನೇತೃತ್ವದಲ್ಲಿ ಯೋಜನೆಯನ್ನು ಮುನ್ನಡೆಸಲಾಗುತ್ತಿದೆ. ಎರಡು ತಾಲೂಕುಗಳ 13 ಗ್ರಾಮ ಪಂಚಾಯತ್‌ಗಳಲ್ಲಿ ಯೋಜನೆಯ ಜಾರಿ ಉದ್ದೇಶವನ್ನು ಇರಿಸಲಾಗಿದ್ದು, ಬಿದಿರು ನೆಡುವ ನಿರ್ದಿಷ್ಟ ಸ್ಥಳಗಳನ್ನು ಗೊತ್ತು ಪಡಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಈ ನಿಮಿತ್ತ ಸ್ಥಳದ ನಕ್ಷೆಯನ್ನು ತಯಾರಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿನ ಪರಂಬೋಕು ಹಾಗೂ ಸರಕಾರಿ ಸ್ವಾಮ್ಯದ ಬಂಜರು ಪ್ರದೇಶಗಳಲ್ಲಿ ಬಿದಿರನ್ನು ಬೆಳೆಸಲಾಗುವುದು ಎಂದು ಅ ಧಿಕೃತರು ತಿಳಿಸಿದ್ದಾರೆ. ಬಿದಿರು ಯಾವುದೇ ಭೌಗೋಳಿಕತೆಯಲ್ಲೂ ಬೆಳೆಯುವ ಗುಣ ಹೊಂದಿರುವುದು ಇದರ ವಿಶೇಷತೆಯಾಗಿದೆ. ಪ್ರಸ್ತುತ ಜಿಲ್ಲೆಯ ಉತ್ತರದಲ್ಲಿರುವ ಹಲವು ಕಲ್ಲು ಪಾರೆ ಪ್ರದೇಶಗಳಲ್ಲಿ ಇದನ್ನು ಬೆಳೆಸುವ ಸದುದ್ದೇಶವಿರಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಿದಿರು ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದ್ದು, ಮಳೆಗಾಲದ ಸಮಯ ಉದ್ಯೋಗ ಖಾತರಿ ಸದಸ್ಯರಿಗೂ ಕೆಲಸ ಸಿಗಲಿದೆ. ಬಿದಿರು ಮೌಲ್ಯವ ರ್ಧಿತ ಉತ್ಪನ್ನವಾದ್ದರಿಂದ ಆಹಾರ ವಸ್ತುವಾಗಿ, ಕೊಳಲು ನಿರ್ಮಾಣಕ್ಕೆ, ಕರಕುಶಲ ವಸ್ತು ತಯಾರಿಕೆ ಸಹಿತ ಕಟ್ಟಡ, ಸೇತುವೆ ನಿರ್ಮಾಣದಲ್ಲೂ ಇದನ್ನು ಬಳಸಬಹುದಾಗಿದೆ. ನರ್ಸರಿ ಆರಂಭ
ಮಣ್ಣಿನಲ್ಲಿರುವ ಹಲವು ವಿಷಕಾರಿ ಲವಣಾಂಶಗಳನ್ನು ಹೀರುವ ಬಿದಿರಿನ ಗಿಡಗಳು ಭೂ ಶುದ್ಧಿಗೂ ಕಾರಣವಾಗಿವೆ. ಒಂದು ವಾರ್ಡಿನಲ್ಲಿ ಸರಾಸರಿ 1500 ಬಿದಿರು ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಯೋಜನೆಯನ್ನು ಸಾಕಾರಗೊಳಿಸಲು ಪ್ರತಿ ಗ್ರಾಮ ಪಂಚಾಯತ್ ಅಧೀನದಲ್ಲಿ ನರ್ಸರಿಗಳನ್ನು ಆರಂಭಿಸಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ. ಒಟ್ಟು 60,000 ಬಿದಿರಿನ ಗಡ್ಡೆಗಳನ್ನು ಅರಣ್ಯ ಇಲಾಖೆ ಮೂಲಕ ಪಡೆಯಲಾಗುತ್ತದೆ. ಲಾಭದಾಯಕ ಉದ್ಯಮ
ಕಾಸರಗೋಡು ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವ ಜೊತೆಯಲ್ಲಿ ಬಿದಿರು ಬೆಳೆಯುವುದರಿಂದ ಲಾಭದಾಯಕ ಉದ್ಯಮವನ್ನು ಆರಂಭಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿರುವ ಸಾವಿರ ಎಕರೆಗಿಂತ ಹೆಚ್ಚಿನ ಭೂ ಪ್ರದೇಶ ಕಲ್ಲು ಪಾರೆಯಿಂದಾವೃತವಾಗಿದ್ದು, ಕೃಷಿ ಯೋಗ್ಯವಲ್ಲದ ರೀತಿಯಲ್ಲಿದೆ. ಇಂತಹ ಪ್ರದೇಶಗಳಲ್ಲಿ ನೆಟ್ಟು ಬೆಳೆಸುವ ಬಿದಿರಿನ ಸಸಿಗಳು ಪರಿಸರ ಸಂರಕ್ಷಣೆ ಸಹಿತ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಬೇಸಿಗೆ ಕಾಲದಲ್ಲಿ ಜಿಲ್ಲೆಯನ್ನು ಆವರಿಸುವ ತೀವ್ರ ಬರಗಾಲ ಮತ್ತು ಜಲ ಕ್ಷಾಮವನ್ನು ಬಹುತೇಕ ನಿವಾರಿಸಲು ಬಿದಿರು ಬೆಳೆ ಸಹಾಯಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಡಾ|ಡಿ.ಸಜಿತ್ ಬಾಬು ಕಾಸರಗೋಡು ಜಿಲಾಧಿಕಾರಿ