ವಾಷಿಂಗ್ಟನ್: ಅಮೆರಿಕದಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಆಗುತ್ತಿರುವ ಅವಮಾನ ಮುಂದುವರಿದಿದೆ. ವಾಷಿಂಗ್ಟನ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಪಾಕಿಸ್ಥಾನ- ಅಮೆರಿಕ ಸಮುದಾಯದವರನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಬಲೂಚಿ ಸ್ಥಾನಕ್ಕೆ ಸ್ವಾತಂತ್ರ್ಯ ನೀಡುವಂತೆ ಯುವಕರ ಗುಂಪು ಒತ್ತಾಯಿಸಿ, ಘೋಷಣೆ ಕೂಗಿದೆ. ಇಮ್ರಾನ್ ಭಾಷಣ ಮಾಡುತ್ತಿರು ವಂ ತೆಯೇ ಕ್ರೀಡಾಂಗಣದ ಆಸನ ಗಳಲ್ಲಿ ಕುಳಿತಿದ್ದ ಯುವಕರ ಗುಂಪು ಏಕಾಏಕಿ ಎದ್ದುನಿಂತು ಘೋಷಣೆ ಕೂಗಲಾರಂಭಿಸಿತು. ಮೂವರು ಯುವಕರು ಈ ಘೋಷಣೆ ಹಾಕಿ ಪಾಕ್ ಪಿಎಂಗೆ ತಬ್ಬಿಬ್ಟಾಗು ವಂತೆ ಮಾಡಿದ್ದಾರೆ. ಈ ಸಂದರ್ಭ ಇಮ್ರಾನ್ ಖಾನ್ ಬೆಂಬಲಿಗರು ಅವರನ್ನು ಸ್ಥಳ ದಿಂದ ಹೊರ ತಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.
ಎರಡು ದಿನಗಳ ಅವಧಿಯಿಂದ ಬಲೂಚಿ ಸ್ಥಾನದಲ್ಲಿ ಪಾಕಿಸ್ಥಾನ ನಡೆಸಿರುವ ಮಾನವ ಹಕ್ಕುಗಳ ಉಲ್ಲಂಘನೆ, ಸೇನಾ ಪಡೆಯ ಕ್ರೌರ್ಯದ ಬಗ್ಗೆ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ ದೇಶದಲ್ಲಿ ಆಂತರಿಕ ತೆರಿಗೆ ವ್ಯವಸ್ಥೆ ಸುಧಾರಿಸುವಂತೆ ಐಎಂಎಫ್
ಪಾಕ್‌ಗೆ ಮನವಿ ಮಾಡಿದೆ.