Advertisement
ಬೇಕಾಗುವ ವಸ್ತುಗಳು:ಒಂದೇ ಬಣ್ಣದ ಎರಡು ಬಲೂನ್‌ಗಳು, ಒಂದು ಪೇಪರ್ ಬ್ಯಾಗ್, ಒಂದು ಸೂಜಿ
ಪೇಪರ್ ಬ್ಯಾಗನ್ನು ಪ್ರೇಕ್ಷಕರಿಗೆ ಒಳಗಡೆ ಏನೂ ಇಲ್ಲವೆಂದು ತೋರಿಸಲಾಗುತ್ತದೆ. ನಂತರ ಒಂದು ಬಲೂನ್ ಊದಿ ತಂದು ಪ್ರೇಕ್ಷಕರಿಗೆ ತೋರಿಸಲಾಗುತ್ತದೆ. ಅನಂತರ ಅದನ್ನು ಪೇಪರ್ ಚೀಲವೊಂದರಲ್ಲಿ ಇರಿಸಿ, ಉದ್ದನೆಯ ಸೂಜಿಯಿಂದ ಜಾದೂಗಾರ ಚುಚ್ಚುತ್ತಾನೆ. ಬಲೂನ್ ಡಬ್ ಎಂದು ಒಡೆದ ಶಬ್ದ ಕೇಳಿ ಬರುತ್ತದೆ. ಆದರೆ ಮತ್ತೆ ಕೈ ಎಳೆದಾಗ ಅದು ಒಡೆಯದೇ ಮೊದಲಿನಂತೆಯೇ ಇರುವುದು ಗೋಚರಿಸುತ್ತದೆ. ತಂತ್ರ:
ವಾಸ್ತವವಾಗಿ ಜಾದೂಗಾರ ಪ್ರೇಕ್ಷಕರಿಗೆ ತೋರಿಸುವ ಬಲೂನಿನ ಒಳಗೆ ಇನ್ನೊಂದು ಸ್ವಲ್ಪವೇ ಸಣ್ಣದಾದ ಬಲೂನಿದೆ. ಊದುವಾಗ ಮೊದಲು ಸಣ್ಣ ಬಲೂನನ್ನು ಚಿತ್ರದಲ್ಲಿ ತೋರಿಸಿರುವಂತೆ ಇನ್ನು ಸ್ವಲ್ಪ ಹೆಚ್ಚಾಗೆ ಊದಬೇಕು. ಈಗ ಎರಡು ಬಲ್ಲೂನುಗಳಿಗೂ ಮಧ್ಯದಲ್ಲಿ ಸ್ವಲ್ಪ ಜಾಗವಿದೆ. ಸೂಜಿ ಚುಚ್ಚುವುದು ಆ ಅಂತರದಲ್ಲಿ. ಮೆತ್ತಗೆ ಸೂಜಿಯಿಂದ ಚುಚ್ಚಬೇಕು. ಆಗ ಒಡೆಯುವುದು ಮೇಲಿನ ಬಲೂನ್. ಎರಡು ಬಲೂನ್ ಇರುವ ರಹಸ್ಯ ಗೊತ್ತಿರದ ಪ್ರೇಕ್ಷಕರು ಒಡೆಯದೇ ಹಾಗೆ ಇರುವ ಬಲೂನ್ ನೋಡಿ ಆಶ್ಚರ್ಯಗೊಳ್ಳುವರು. ಬಲೂನನ್ನು ಪೇಪರ್ ಚೀಲದಿಂದ ಹೊರಕ್ಕೆ ತೆಗೆಯುವಾಗ ಒಡೆದ ಚೂರುಗಳು ಕಾಣದಂತೆ ಎಚ್ಚರ ವಹಿಸಬೇಕು.
Related Articles
Advertisement