Advertisement
ಇತಿಹಾಸದಲ್ಲಿ ಅಚ್ಚಳಿಯದೆ ಉಳಿದವರು ಸ್ವಲ್ಪ ಜನರಾದರೆ, ಇನ್ನೂ ಸ್ವಲ್ಪ ಜನ, ಘಟನೆಗಳು ತೆರೆಮರೆಯಲ್ಲಿಯೆ ಉಳಿದುಕೊಂಡುಬಿಟ್ಟಿವೆ. ಇನ್ನೊಂದಷ್ಟು ಇತಿಹಾಸವು ಕಾರಣಾಂತರಗಳಿಂದ ಮುಚ್ಚಿ ಹೋಗಿದೆ. ಕರಾವಳಿಯ ಇತಿಹಾಸವು ಭವ್ಯವಾಗಿದ್ದು, ಇಂದು ಅವು ಮರೆತು ಹೋಗಿದೆ. ಅವುಗಳನ್ನು ಮತ್ತೆ ನೆನಪಿಸುವ ಪ್ರಯತ್ನದಲ್ಲಿ ಕಾದಂಬರಿಕಾರರು ಯಶಸ್ವಿಯಾಗಿದ್ದಾರೆ.
ಪಶ್ಚಿಮದ ಕರಾವಳಿಯ ವೀರಗಾಥೆಯ ಸುತ್ತ ಹೆಣೆದಿರುವ ಕಾದಂಬರಿ ಇದಾಗಿದೆ. ಇತಿಹಾಸಕಾರರು ಹೇಗೆ ಇತಿಹಾಸವನ್ನು ಕೆದಕುತ್ತಾರೆ, ಕಾಲಘಟ್ಟವನ್ನು ಅರಿಯುತ್ತಾರೆ, ಇತಿಹಾಸವನ್ನು ತಿಳಿಯಲು ಶಾಸನಗಳ ಮಹತ್ವವೇನು ಎನ್ನುವುದನ್ನು ಲೇಖಕರು ತಿಳಿಸುತ್ತಾ ಹೋಗುತ್ತಾರೆ. ಕರಾವಳಿಯು ಹೆಚ್ಚು ಶ್ರೀಮಂತವಾಗಿದ್ದು, ಹಿಂದೆ ಸಂಪತ್ತನ್ನು ಹೇಗೆ ಸಂಗ್ರಹಿಸಿಡುತ್ತಿದ್ದರು ಮತ್ತು ಅದನ್ನು ಒಂದೊಂದಾಗಿ ಹೇಗೆ ಬ್ರಿಟಿಷರು ವಶಪಡಿಸಿಕೊಂಡರು ಎನ್ನುವುದನ್ನೂ ಸೂಚ್ಯವಾಗಿ ತಿಳಿಸುತ್ತಾರೆ. ಘಟನೆ: 2
ಇದರಲ್ಲಿ ಬರುವ ಲಕ್ಷ್ಮೀ ಪೊದ್ದಾರ್ ಮತ್ತು ಪೂಜಾ ಪಾತ್ರಗಳು ಕಾದಂಬರಿಯುದ್ದಕ್ಕೂ ಇತಿಹಾಸದ ಕುರಿತು ಮಾಹಿತಿ ನೀಡುತ್ತಾ ಹೋಗುತ್ತವೆ. ಮಾಫಿಯಾ ಗ್ಯಾಂಗ್‌ನವರು ಭಾರತದಲ್ಲಿದ್ದ ಸಂಪತ್ತನ್ನು ವಶಪಡಿಸಿಕೊಳ್ಳಲು ಮಾಡುವ ಪ್ರಯತ್ನ, ಅವರ ಸುಳಿಯೊಳಗೆ ಬಿದ್ದ ಲಕ್ಷ್ಮೀ ಪೊದ್ದಾರ್ ಮತ್ತು ಪೂಜಾ ಮತ್ತು ಆ ಕಾರಣದಿಂದ ಇತಿಹಾಸವನ್ನು ಕೆದಕುವ ಪ್ರಯತ್ನ ನಡೆಸಿದ ರೀತಿಯನ್ನು ಸರಳ, ಸುಂದರವಾಗಿ ಚಿತ್ರಿಸಿದ್ದಾರೆ.
Related Articles
ಇತಿಹಾಸದ ಬೆನ್ನತ್ತಿ ಹೊರಟ ಕಾದಂಬರಿಯ ಪಾತ್ರಗಳಿಗೆ ಹೊಸ ಹೊಸ ಮಾಹಿತಿಗಳು ಸಿಗುತ್ತಾ ಹೋಗುತ್ತವೆ. ಇತಿಹಾಸ ಕುತೂಹಲಕಾರಿಯಾದುದು ಎನ್ನುವುದನ್ನು ಈ ಕಾದಂಬರಿಯ ಮೂಲಕ ಲೇಖಕರು ಸಾರುತ್ತಾರೆ. ಜತೆಗೆ ಕರಾವಳಿ ಇತಿಹಾಸ, ಇಲ್ಲಿದ್ದ ರಾಣೆಯರ ಪರಾಕ್ರಮ, ಸಾಹಸಗಳು ಇತಿಹಾಸದ ಪುಟಗಳಲ್ಲಿ ಹೆಚ್ಚು ಮಹತ್ವ ಪಡೆದಿಲ್ಲ. ಆದರೆ ಅವರ ಸಾಧನೆ, ಪರಾಕ್ರಮ ಪ್ರಮುಖವಾದದ್ದು ಎನ್ನುವುದನ್ನು ತಿಳಿಸುತ್ತಾರೆ. ಇಲ್ಲಿರುವ ಭೂತಾರಾಧನೆ, ದೇವಸ್ಥಾನ, ಬಸದಿಗಳ ಹಿಂದಿರುವ ಇತಿಹಾಸ, ಕಥೆಗಳನ್ನು ಕಾದಂಬರಿಯಲ್ಲಿ ತಿಳಿಸಿದ್ದಾರೆ. ನಮ್ಮ ದೇಶ, ರಾಜ್ಯದ ಇತಿಹಾಸದಲ್ಲಿ ಅನೇಕ ವ್ಯಕ್ತಿ, ಘಟನೆಗಳ ತುಂಬಾ ಲೇಖಕರು ಬರೆದಿದ್ದಾರೆ. ಆದರೆ ಇನ್ನೂ ಬೇಧಿಸದೇ ಇದ್ದ ಅನೇಕ ಹೊಸ ಸಂಗತಿಗಳನ್ನು ತಿಳಿಸುವ ಬಳ್ಳಿಕಾಳ ಬೆಳ್ಳಿ ಉಳಿದ ಇತಿಹಾಸ ಪುಸ್ತಕಗಳಿಗಿಂತ ಭಿನ್ನವಾಗಿದೆ.
Advertisement
- ರಂಜಿನಿ ಮಿತ್ತಡ್ಕ