Advertisement

ಬಿಜೆಪಿ ನಾಯಕನ ಸಹಿತ ಮೂವರ ಮೇಲೆ ಗುಂಡಿನ ದಾಳಿ

12:33 PM Jul 16, 2018 | udayavani editorial |

ಬಲ್ಲಿಯಾ : ಅಪರಿಚಿತ ಹಂತಕರು ಇಂದಿಲ್ಲಿ ಓರ್ವ ಸ್ಥಳೀಯ ಬಿಜೆಪಿ ನಾಯಕನ ಸಹಿತ ಮೂವರ ಮೇಲೆ ಗುಂಡಿನ ದಾಳಿ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೌ ಜಿಲ್ಲೆಯಲ್ಲಿ  32ರ ಹರೆಯದ ಮುರಲೀಧರ ವರ್ಮಾ ಅವರು ತಮ್ಮ ಪತ್ನಿಯೊಂದಿಗೆ ಮೋಟಾರ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅವರ ಮೇಲೆ ಹಂತರು ಗುಂಡಿನ ದಾಳಿ ನಡೆಸಿದರು. ವರ್ಮಾ ಅವರ ಪತ್ನಿ ಪ್ರಿಯಾಂಕಾ ಮಾತ್ರವಲ್ಲದೆ ಅಜಿತ್‌ ಯಾದವ್‌ ಎಂಬ ಇನ್ನೋರ್ವರು ಕೂಡ ಹಂತಕರ ಗುಂಡೇಟಿನಿಂದ ಗಾಯಗೊಂಡರು. 

ಈ ಮೂರೂ ಗಾಯಾಳುಗಳನ್ನು ಬೆಲ್ತಾರಾ ರಸ್ತೆಯಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಾರಾಣಸಿ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next