Advertisement

ಗಡಿನಾಡು ಬಳ್ಳಾರಿಯಲ್ಲಿ ಕೋವಿಡ್ ಸೋಂಕಿಗೆ 9 ಮಂದಿ ಬಲಿ! 461ಹೊಸ ಪ್ರಕರಣ ಪತ್ತೆ

04:30 PM Aug 13, 2020 | sudhir |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆದಿನೇ ದಿನೇ ಹೆಚ್ಚುತ್ತಿದೆ. ಬುಧವಾರವಷ್ಟೇ 9 ಜನರು ಬಲಿಯಾಗಿದ್ದ ಸೋಂಕಿಗೆ ಗುರುವಾರವೂ ಮತ್ತೆ 9 ಜನರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 139ಕ್ಕೆ ಏರಿಕೆಯಾಗಿದೆ.

Advertisement

ಬಳ್ಳಾರಿಯಲ್ಲಿ ಕೋವಿಡ್ ಆರ್ಭಟ ಒಂದು ಕಡೆಯಾದರೆ, ಇನ್ನೊಂದು ಕಡೆ ಮರಣ ಮೃದಂಗ ಮುಂದುವರೆಸಿದ್ದು, ಕೇವಲ ಎರಡು ದಿನಗಳಲ್ಲಿ 18 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು ಒಂದೇ ದಿನ 461 ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,527 ಕ್ಕೆ ಏರಿಕೆಯಾಗಿದೆ. 139 ಕ್ಕೇರಿದ ಸಾವಿನ ಸಂಖ್ಯೆ. 5310 ಸಕ್ರೀಯ ಪ್ರಕರಣಗಳಿವೆ. ಇಂದು ಒಂದೇ ದಿನ 440 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 7078 ಜನರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿಸಿ ಎಸ್.ಎಸ್. ನಕುಲ್ ಮಾಹಿತಿ ನೀಡಿದ್ದಾರೆ.

ತಾಲೂಕುವಾರು ವಿವರ :
ಬಳ್ಳಾರಿ- 226 , ಸಂಡೂರು- 48, ಸಿರುಗುಪ್ಪ- 17 ಕೂಡ್ಲಿಗಿ- 23, ಹೂವಿನ ಹಡಗಲಿ-19, ಹೊಸಪೇಟೆ- 84, ಎಚ್.ಬಿ. ಹಳ್ಳಿ- 29, ಹರಪನಹಳ್ಳಿ- 11 , ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ತಲಾ 02 ಕೇಸ್ ಪತ್ತೆ.

Advertisement

Udayavani is now on Telegram. Click here to join our channel and stay updated with the latest news.

Next