Advertisement
ಮಸ್ಕಿ: ರಾಯಚೂರು, ಕೊಪ್ಪಳ, ಬಳ್ಳಾರಿ ಮೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಾಯವಾಗಿ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿದ ಸಮಾನಾಂತರ ಜಲಾಶಯಕ್ಕೆ ಮರುಜೀವ ಬಂದಿದೆ!. ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಶುಕ್ರವಾರ ನೀರಾವರಿ ಇಲಾಖೆ ಅ ಧಿಕಾರಿಗಳು ಹಾಗೂ ತಜ್ಞರ ಸಭೆ ನಡೆದಿದ್ದು, ಕನಕಗಿರಿ, ಗಂಗಾವತಿ ಕ್ಷೇತ್ರದ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
Related Articles
Advertisement
ಈ ಸಮಾನಾಂತರ ಜಲಾಶಯದ ಮೂಲಕ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ನೆರೆಯ ಆಂಧ್ರ ತೆಲಂಗಾಣ ರಾಜ್ಯದ ನೀರಾವರಿ ವಂಚಿತ ಪ್ರದೇಶಗಳಿಗೆ ನೀರು ಒದಗಿಸುವುದು ಯೋಜನೆ ಉದ್ದೇಶ. ಇದಕ್ಕಾಗಿ ರೂಟ್ಸ್, ಎ ಆ್ಯಂಡ್ ಕಂಪನಿ ಸೇರಿ ಹಲವು ಖಾಸಗಿ ಏಜೆನ್ಸಿಗಳು ಸರ್ವೇ ನಡೆಸಿ ಪ್ರಾಥಮಿಕ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ ವರದಿ ಪ್ರಕಾರ ಈ ಯೋಜನೆಗೆ 12 ಸಾವಿರ ಕೋಟಿ ರೂ. ಅಗತ್ಯವಿದೆ ಎನ್ನುವ ಅಂಶ ಪ್ರಸ್ತಾಪಿಸಲಾಗಿದ್ದು, ಲಕ್ಷಾಂತರ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕೆಂದು ವರದಿ ಸಲ್ಲಿಸಿವೆ.
ಸರ್ಕಾರ ಇದಕ್ಕೆ ಅಸ್ತು ಎಂದಿದ್ದು ಯೋಜನೆಯ ಸಂಪೂರ್ಣ ಡಿಪಿಆರ್ ತಯಾರಿಕೆಗೆ ಸೂಚನೆ ನೀಡಿದೆ. ಪ್ರಕಾರ ಎ ಆ್ಯಂಡ್ ಟೆಕ್ನಾಲಜಿ ಕಂಪನಿಗೆ ಸರ್ವೇ ಕಾರ್ಯದ ಉಸ್ತುವಾರಿ ವಹಿಸಲಾಗಿದೆ. ಈಗಾಗಲೇ ಎರಡೂ¾ರು ಸುತ್ತಿನ ಸರ್ವೇ ಕಾರ್ಯವೂ ಪೂರ್ಣವಾಗಿದ್ದು, ಯೋಜನೆ ನೀಲನಕ್ಷೆ ನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ.
ಎದುರಾಗುವ ಸವಾಲು: ಯೋಜನೆ ಕುರಿತಾಗಿಯೇ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂ ಸ್ವಾಧಿಧೀನ ಪ್ರಕ್ರಿಯೆ, ಮುಳುಗಡೆಯಾಗುವ ಪ್ರದೇಶ, ನೀರಿನ ಹಂಚಿಕೆ, ಪ್ರತ್ಯೇಕ ಕಾಲುವೆಗಳ ನಿರ್ಮಾಣದ ನಕಾಶೆ ಸೇರಿ ಇತರೆ ಕಾರ್ಯಗಳಿಗೆ ಎದುರಾಗುವ ಅಡ್ಡಿ ಆತಂಕ, ತಜ್ಞರು ಎತ್ತುವ ಪ್ರಶ್ನೆಗಳಿಗೆ ಬೇಕಾದ ಸಮಗ್ರ ಉತ್ತರ ಒದಗಿಸುವುದು, ಟಿಬಿ ಬೋರ್ಡ್ ಹಾಗೂ ಅಂತಾರಾಜ್ಯಗಳನ್ನು ಈ ಯೋಜನೆಗೆ ಒಪ್ಪಿಗೆ ಪಡೆಯಲು ಬೇಕಾದ ಪೂರ್ವ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದವು.
ಕೆಲವೇ ದಿನಗಳಲ್ಲಿ ಈ ಯೋಜನೆ ಒಪ್ಪಿಗೆ ಪಡೆಯಲು ಅಂತಾರಾಜ್ಯ ಸಭೆ ನಡೆಯಲಿದ್ದು, ಇದಕ್ಕೆ ಸಂಬಂಧಿ ಸಿದ ಎಲ್ಲ ವರದಿ ತಯಾರಿಸಿಕೊಳ್ಳಲು ಅಧಿ ಕಾರಿಗಳಿಗೆ ಈ ವೇಳೆ ಸೂಚನೆ ನೀಡಲಾಯಿತು.