Advertisement

“ಉತ್ಸವ ದಿ ಹಂಪಿ’ : ಇಂದಿನಿಂದ ಕಾರು-ಬೈಕ್‌ ರೇಸ್‌

05:07 PM Jan 29, 2021 | |

ಹೊಸಪೇಟೆ: ನಗರದಲ್ಲಿ “ಉತ್ಸವ ದಿ ಹಂಪಿ’ ಹೆಸರಿನಲ್ಲಿ ಕಾರು ಹಾಗೂ ಬೈಕ್‌ ರೇಸ್‌ ನಡೆಸಲು ಫೆಸ್ಟಿವಲ್‌ ಆಫ್‌ ಮೋಟರ್ ನ್ಪೋರ್ಟ್ಸ್ ಆಸೋಶಿಯೇಷನ್‌ ನಿರ್ಧರಿಸಿದ್ದು, ಜ.29ರಿಂದ ಒಂದು ವಾರಗಳ ಕಾಲ ನಡೆಯಲಿದೆ ಎಂದು ಆಯೋಜಕ ಗಿರೀಜ್‌ ಶಂಕರ ಜೋಶಿ ತಿಳಿಸಿದರು.
ನಗರ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಮೋಟರ್‌ ನ್ಪೋರ್ಟ್ಸ್ ಅಕಾಡೆಮಿ, ಫೆಡರೇಶನ್‌ ಆಫ್‌ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್ಸ್ ಆಫ್‌ ಇಂಡಿಯಾ ಸಂಸ್ಥೆ ವತಿಯಿಂದ ತಾಲೂಕಿನ ರಾಜಪುರ, ಜಂಬುನಾಥ ಹಳ್ಳಿ, ಧರ್ಮಸಾಗರ ಗ್ರಾಮದಲ್ಲಿ ಬೈಕ್‌, ಕಾರ್‌ ಹಾಗೂ ಜೀಪ್‌ ರೇಸ್‌ ನಡೆಯಲಿದೆ ಎಂದರು.

Advertisement

ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ, ಟೈಮ್‌ ಸ್ಪೀಡ್‌ ಡಿಸ್ಟನ್ಸ್‌ ರ್ಯಾಲಿ, ಸಿಂಗಲ್‌ ಟ್ರಾಕ್‌ ಆಟೋಕ್ರಾಸ್‌ ಸ್ಪರ್ಧೆಗೆ ದೇಶದ ವಿವಿಧೆಡೆಯ 250ಕ್ಕೂ ರಾಷ್ಟ್ರೀಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮಂಗಳೂರು, ಬೆಂಗಳೂರು, ಕೊಯಮತ್ತೂರನಲ್ಲಿ ಕ್ರೀಡೆ ಆಯೋಜಿಸಲಾಗಿದೆ. ಅಂತಿಮವಾಗಿ ಹಂಪಿ ಭಾಗದಲ್ಲಿ ಆಯೋಜಿಸಲಾಗಿದೆ. 120ರಿಂದ 2450 ಸಿಸಿ ಬೈಕ್‌ಗಳು ರೇಸ್‌ ನಲ್ಲಿ ಭಾಗಿಯಾಗಲಿವೆ ಎಂದರು.

ಜ.29ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ಸಚಿವ ಆನಂದ ಸಿಂಗ್‌ ಉತ್ಸವ ದಿ ಹಂಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿ, ಪರಂಪರೆಯನ್ನು ಆಚರಿಸುವ ಹಂಪಿ ಉತ್ಸವದಿಂದ ಸ್ಪೂರ್ತಿ ಪಡೆದಿದೆ. ಇದರಿಂದ ಹಂಪಿ ಪ್ರದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಮತ್ತು ವಿಶ್ವ ಭೂಪಟದಲ್ಲಿ ಮತ್ತೂಂದು ಗುರುತನ್ನು ನೀಡುವ ಗುರಿ ಹೊಂದಿದೆ ಎಂದರು.

ಶ್ಯಾಮ್‌ ಕೋಠಾರಿ, ಐಶ್ವರ್ಯ, ಜಿ.ಎಸ್‌. ಜೋಶಿ, ಸಂತೋಷ್‌ ಎಚ್‌. ಎಂ. ರೋಹಿತ್‌ ಗೌಡ, ಸಿ.ಕೆ. ಚಿನ್ನಪ್ಪ, ದರ್ಪನ್‌ ಗೌಡ ಇನ್ನಿತರರಿದ್ದರು.

ಓದಿ : ಏಳು-ಬೀಳು ಸಹಜ ಮೆಟ್ಟಿ ನಿಲ್ಲುವುದೇ ಜೀವನ..!; ಇದು ಇನ್ಫಿ ನಾರಾಯಣಮೂರ್ತಿ ಅವರ ಬದುಕಿನ ಪಾಠ

Advertisement
Advertisement

Udayavani is now on Telegram. Click here to join our channel and stay updated with the latest news.

Next