ಸಿರುಗುಪ್ಪ: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು. ತಾಲೂಕಿನ ಬಾಗೇವಾಡಿ ಕಾಲುವೆಯ ಕೊನೆಯಂಚಿನ ರೈತರಿಗೂ ನೀರು ಮುಟ್ಟಿಸಲು ಪ್ರತಿಯೊಬ್ಬ ಅಧಿ ಕಾರಿಯೂ ಮುತುವರ್ಜಿವಹಿಸಿ ಕಾರ್ಯನಿರ್ವಹಿಸಬೇಕೆಂದು ತಹಶೀಲ್ದಾರ್ ಮಂಜುನಾಥ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಬಾಗೇವಾಡಿ ಕಾಲುವೆ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕಾಲುವೆಗೆ ನೀರು ಬಿಡುತ್ತಿದ್ದಂತೆ ಕೃಷಿ ಚಟುವಟಿಕೆ ಆರಂಭವಾಗುತ್ತವೆ. ಕಾಲುವೆ ಮೇಲ್ಭಾಗದ ರೈತರು ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಪ್ರಾರಂಭಿಸುತ್ತಾರೆ. ಆದರೆ ಕಾಲುವೆ ಕೊನೆಯಂಚಿನ ರೈತರಿಗೆ ನೀರು ಸಿಕ್ಕರೆ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲ ಅಧಿಕಾರಿಗಳು ಒಮ್ಮತದಿಂದ ಕಾರ್ಯನಿರ್ವಹಿಸಿ ರೈತರ ಜಮೀನುಗಳಿಗೆ ನೀರು ಮುಟ್ಟಿಸುವ ಕಾರ್ಯವನ್ನು ಮಾಡಬೇಕೆಂದು ಸೂಚಿಸಿದರು. ಬಾಗೇವಾಡಿ ಕಾಲುವೆ ಅಕ್ಕಪಕ್ಕದಲ್ಲಿ ಅಕ್ರಮವಾಗಿ ನೀರು ಹರಿಸಲು ಹಾಕಲಾಗಿದ್ದ ಪೈಪ್‌ಲೈನ್‌ಗಳನ್ನು ತೆರವು ಮಾಡಲಾಗಿದೆ.
ಕಾಲುವೆಯಲ್ಲಿ ನೀರು ಹರಿಯಲು ಸುಗಮವಾಗುವಂತೆ ಕಾಲುವೆಯಲ್ಲಿ ಬಿದ್ದಿರುವ ಮಣ್ಣು ಮತ್ತಿತರ ವಸ್ತುಗಳನ್ನು ಮೂರು ಜೆಸಿಬಿಗಳ ಮೂಲಕ ತೆರವು ಮಾಡುವ ಕಾರ್ಯ ಪ್ರಾರಂಭಿಸಿದ್ದೇವೆ ಎಂದು ನೀರಾವರಿ ಇಲಾಖೆಯ ಪ್ರಭಾರಿ ಎಇಇ ಹನುಮಂತಪ್ಪ ತಿಳಿಸಿದರು. ಕಾಲುವೆಗೆ ನೀರು ಬಿಡುತ್ತಿದ್ದಂತೆ ಸೈಫನ್ ಪೈಪ್‌ಗ್ಳ ಮೂಲಕ ಕೆಲವು ರೈತರು ಅಕ್ರಮವಾಗಿ ನೀರನ್ನು ಬಳಕೆ ಮಾಡಿಕೊಂಡು ಬೆಳೆ ಬೆಳೆಯುತ್ತಾರೆ.
ಆದ್ದರಿಂದ ಕಾಲುವೆ ಅಂಚಿನಲ್ಲಿ ಸೈಫನ್ ಪೈಪ್‌ಗ್ಳ ಮೂಲಕ ನೀರು ಹರಿಸುವವರ ಮೇಲೆ ನಿಗಾವಹಿಸಬೇಕು. ನೀರಾವರಿ ಇಲಾಖೆ ಮತ್ತು ನಮ್ಮ ಇಲಾಖೆಯ ಅ ಕಾರಿಗಳು ಕಾಲುವೆ ಮೇಲೆ ನಿರಂತರ ಗಸ್ತು ತಿರುಗಿದರೆ ಮಾತ್ರ ಕಾಲುವೆ ಕೊನೆಯಂಚಿನ ರೈತರ ಹೊಲಗಳಿಗೆ ನೀರು ಹರಿಯಲು ಸಾಧ್ಯವಾಗುತ್ತದೆ ಎಂದು ಸಿಪಿಐಗಳಾದ ಕಾಳಿಕೃಷ್ಣ ಮತ್ತು ಟಿ.ಆರ್. ಪವಾರ್ ತಹಶೀಲ್ದಾರ್ ಗಮನಕ್ಕೆ ತಂದರು.
ಪೊಲೀಸರು ಮತ್ತು ನೀರಾವರಿ ಇಲಾಖೆ ಅಧಿ ಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ರೈತರು ತಾಲೂಕು ಕಚೇರಿ ಹತ್ತಿರ ಬರದಂತೆ ಅವರ ಜಮೀನುಗಳಿಗೆ ನೀರು ಹರಿಸಲು ಸೂಕ್ತ ಬಂದೋಬಸ್ತ್ನಲ್ಲಿ ಗಸ್ತು ತಿರುಗಬೇಕೆಂದು ತಹಶೀಲ್ದಾರ್‌ರು ಪೊಲೀಸರು ಮತ್ತು ನೀರಾವರಿ ಇಲಾಖೆ ಅ ಧಿಕಾರಿಗಳಿಗೆ ಸೂಚಿಸಿದರು.
ಸಿಪಿಐಗಳಾದ ಟಿ.ಆರ್. ಪವಾರ್, ಕಾಳಿಕೃಷ್ಣ, ಜೆಸ್ಕಾಂ ಎಇಇ ಶ್ರೀನಿವಾಸರಾವ್, ಕಂದಾಯ ಅಧಿಕಾರಿಗಳಾದ ಮಂಜುನಾಥ, ಬಸವರಾಜ, ಶೆûಾವಲಿ, ಶಿರಸ್ತೇದಾರ ಬಿ.ಎನ್ .ಬಾಬು, ವಿ.ಬಿ.ಪಾಟೀಲ್, ಪರಶುರಾಮ, ಗ್ರಾಮಲೆಕ್ಕಾಧಿ ಕಾರಿ ವಿರುಪಾಕ್ಷಪ್ಪ, ನೀರಾವರಿ ಇಲಾಖೆ ಸಿಬ್ಬಂದಿ ಇದ್ದರು.