Advertisement

ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ರೆಡ್ಡಿ

09:39 PM Jul 11, 2021 | Team Udayavani |

ಹರಪನಹಳ್ಳಿ: ತಾಲೂಕಿನ ಗಡಿಭಾಗ ನಾಗತಿಕಟ್ಟಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನಾಗತಿಕಟ್ಟಿ ಗ್ರಾಮದಿಂದ ದಾವಣಗೆರೆ ತಾಲೂಕು ಗಡಿವರೆಗೆ ಒಟ್ಟು 2.44 ಕೋಟಿ ರೂ ಗಳ ವೆಚ್ಚದಲ್ಲಿ 2.71 ಕಿಮೀ ಉದ್ದದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಜಿ.ಕರುಣಾಕರ ರೆಡ್ಡಿ ಶನಿವಾರ ಭೂಮಿಪೂಜೆ ನೆರವೇರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ರಸ್ತೆ ಅಭಿವೃದ್ಧಿ ಕುರಿತು ಗ್ರಾಮಸ್ಥರು ಹಲವು ಬಾರಿ ನನ್ನ ಬಳಿ ಮನವಿ ಮಾಡಿಕೊಂಡಿದ್ದರು ಅದರಂತೆಯೇ ಅವರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಹೇಳಿದರು.

Advertisement

ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿರುವುದರಿಂದ ವಾಹನಗಳ ಓಡಾಟ ಹೆಚ್ಚಿರುತ್ತದೆ. ಆದ್ದರಿಂದ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಲೆಂದು ಗ್ರಾಮಸ್ಥರು ಶಾಸಕರಲ್ಲಿ ಕೇಳಿಕೊಂಡಾಗ ಪಕ್ಕದಲ್ಲೇ ಇದ್ದ ಇಂಜಿನಿಯರ್‌ ಮತ್ತು ಗುತ್ತಿಗೆದಾರರಿಗೆ ವಿವಿಧ ಯೋಜನೆಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್‌. ಮಹೇಶಪ್ಪ, ಎಇ ಕುಬೇಂದ್ರನಾಯ್ಕ, ಬಿ.ಆರ್‌. ಪ್ರಕಾಶ್‌ ನಾಯ್ಕ ಮಂಜುನಾಥ, ಕಿರಿಯ ಅಭಿಯಂತರ ಎ. ಮಂಜುನಾಥ, ಬಸವನಗೌಡ ಪಾಟೀಲ್‌, ವೈ. ಶ್ರೀನಿವಾಸರೆಡ್ಡಿ, ರಾಜಪ್ಪ ಭೋವಿ, ಸಂಪತ್‌ ಕುಮಾರ, ತಾಪಂ ಉಪಾಧ್ಯಕ್ಷ ಮಂಜನಾಯ್ಕ, ಮುಖಂಡರಾದ ಆರ್‌. ಲೋಕೇಶ, ಯು.ಪಿ. ನಾಗರಾಜ, ರಾಘವೇಂದ್ರಶೆಟ್ಟಿ, ಎಂ. ಸಂತೋಷ, ಲಿಂಗರಾಜ, ಶಶಿನಾಯ್ಕ ಇತರರು ಹಾಜರಿದ್ದರು.

ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಗ್ರಾಮಕ್ಕೆ ಶಾಸಕ ಜಿ. ಕರುಣಾಕರ ರೆಡ್ಡಿ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next