Advertisement

ಬಡವರಿಗೆ ಖಾತ್ರಿ ಯೋಜನೆ ವರದಾನ

10:19 PM Jun 28, 2021 | Team Udayavani |

„ಕೆ. ನಾಗರಾಜ್‌

Advertisement

ಕೂಡ್ಲಿಗಿ: ಕೊರೊನಾದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಇಂಥ ಪರಿಸ್ಥಿತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಬರುವ 25 ಗ್ರಾಪಂಗಳಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಅದರಲ್ಲಿ ಹುಡೇಂ, ಜುಮ್ಮೊಬನಹಳ್ಳಿ, ಆಲೂರುಬಡೇಲಡಕು, ಚೌಡಪುರ, ಚಿರತಗುಂಡು ಒಂದಾಗಿದ್ದು, ಇಲ್ಲಿನ ಅಧ್ಯಕ್ಷರು ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ ತಮ್ಮ ಗ್ರಾಮ ಪಂಚಾಯಿತಿಗೆ ಒಳಪಡುವ ಹಳ್ಳಗಳ ಹೂಳು, ಬದು ನಿರ್ಮಾಣ ತೋಟಗಾರಿಕೆಯಿಂದ ವಿವಿಧ ಗಿಡಗಳಿಗೆ ಆದ್ಯತೆ ಕೆಲಸವನ್ನು ಮಾಡಿಸುವ ಮೂಲಕ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದಾರೆ. ತಾಲೂಕು ಪಂಚಾಯಿತಿಯಡಿ ಉದ್ಯೋಗ ಖಾತ್ರಿ ತಾಲೂಕಿನವಾರು ಅಂಕಿ ಸಂಖ್ಯೆಯನ್ನು ಗಮನಿಸಿದಾಗ ಒಂದು ವರ್ಷಕ್ಕೆ 10 ಲಕ್ಷ ಗುರಿಯನ್ನು ನೀಡಿದ್ದಾರೆ.

ಈಗಾಗಲೇ 56700 ಗುರಿಯನ್ನು ತಲುಪಿದ್ದೇವೆ. ಆದರೆ ಹುಡೇಂ ಗ್ರಾಮ ಪಂಚಾಯಿತಿಯಲ್ಲಿ ಮೂರು ತಿಂಗಳ ಗುರಿ-23174 ಇದರಲ್ಲಿ 18311 ಒಳಗೊಂಡಿದ್ದು, ಮಾನವನ ದಿನಗಳ ಶೇಕಡಾವಾರು 51.36% ಒಳಗೊಂಡಂತೆ ಮಾನವದಿನಗಳ ಸೃಜನೆಯಾಗಿದೆ. ಒಟ್ಟಾರೆ ಕಾರ್ಮಿಕರ ವಾರ್ಷಿಕ ಗುರಿ- 35,653 ಶೇಕಡಾವಾರು 3 ತಿಂಗಳಿಗೆ 79.% ಆಗಿದೆ. ಕುಟುಂಬಕ್ಕೆ 100 ದಿನದ ಕೆಲಸ ದಿನಕ್ಕೆ 289+10 ರೂ ಸಲಕರಣೆಗಳಿಗೆ ನೀಡಲಾಗುತ್ತಿದ್ದು, ಒಟ್ಟಾರೆ ತಿಂಗಳಿಗೆ 2999ರೂ ಸಿಗುತ್ತದೆ. ಕೂಡ್ಲಿಗಿ ತಾಪಂ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಗ್ರಾಪಂನ ಖಾತ್ರಿ ಯೋಜನೆಯಡಿ ಇನ್ನೂರಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇದರಿಂದ ಒಂದೆಡೆ ಕೆರೆ ಹೂಳೆತ್ತುವ ಕೆಲಸ ಮತ್ತೂಂದೆಡೆ ಬಡ ಕಾರ್ಮಿಕರಿಗೆ ಕೆಲಸವೂ ಸಿಕ್ಕಂತಾಗಿದೆ. ಸದ್ಯ ಪಿಡಿಒ ಮಾರಪ್ಪ ಅವರು ಸ್ಥಳದಲ್ಲಿದ್ದು ಕಾರ್ಯ ನಿರ್ವಹಣೆಯನ್ನು ಗಮನಿಸುತ್ತಿದ್ದಾರೆ.

Advertisement

ಈ ನಡುವೆ ಹಳ್ಳಗಳಿಗೆ ಸಂಬಂಧಿ ಸಿದಂತೆ ನಾಳಗಳು, ಕೆರೆ ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿಗೊಳಿಸುವುದು, ಬದು ನಿರ್ಮಾಣ, ಹಲವು ಕಾರ್ಯಗಳಿಗೆ ಉದ್ಯೋಗ ಖಾತ್ರಿ ಮೂಲಕ ಇಲಾಖೆವಾರು ಕಾಮಗಾರಿಗಳನ್ನು ಜನರಿಗೆ ಎಟಕುವ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳು ಅಡೆತಡೆಗೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಗ್ರಾಪಂ ಪಿಡಿಓ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ಹಲವು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೇ ಹಳ್ಳಗಳಲ್ಲಿ ಹೂಳಿನಿಂದ ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದು ಖಾತ್ರಿ ಯೋಜನೆಯಲ್ಲಿ ರೈತರಿಗೆ ಅನೂಕೂಲವಾಗುವ ದೃಷ್ಟಿಯಿಂದ ಬದುಗಳ ನಿರ್ಮಾಣಕ್ಕೆ ಒತ್ತು, ಕೃಷಿ ಹೊಂಡಕ್ಕೆ ರೈತರು ಮುಂದಾದರೆ ಅವಕಾಶ ಕಲ್ಪಿಸುವುದು, ಒಟ್ಟಾರೆ ಬೇಡಿಕೆಗೆ ಅನುಗುಣವಾಗಿ ಕಾರ್ಯವನ್ನು ಮಾಡುವುದು.

ಹುಡೇಂ ಪಿಡಿಓ ಅ ಧಿಕಾರಿ ಮಾರಪ್ಪ ಅವರು ಉದ್ಯೋಗಖಾತ್ರಿ ಅಡಿಯಲ್ಲಿ ಗ್ರಾಮದ ಜನರಿಗೆ ಕೆಲಸಕ್ಕೆ ಮುಂದಾಗಿರುವುದರಿಂದ ಮಳೆಗಾಲದಲ್ಲಿ ಮಳೆನೀರು ತುಂಬಿ ರೈತರಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next