ಬಳ್ಳಾರಿ: ರಾಜ್ಯ ಸರ್ಕಾರವು ಉಚಿತವಾಗಿ ನೀಡಿರುವ ಟ್ಯಾಬ್‌ಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ನಗರ ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಕೊರತೆ ಅನುಭವಿಸದಂತೆ ಇತರೆ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಯನ್ನು ಮಾಡಬೇಕಾದರೆ ಅವರಿಗೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುವ ಕೆಲಸ ಮಾಡುತ್ತಿದೆ.
ಈಗಾಗಲೇ ಕಳೆದ ಬಾರಿ ಲ್ಯಾಪ್‌ಟಾಪ್‌ಗ್ಳನ್ನು ವಿತರಿಸಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ವ್ಯಾಸಂಗ ಮಾಡಿ ಉನ್ನತಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ಕಾಲೇಜಿಗೆ ಅಗತ್ಯವಿರುವ ಆಡಿಟೋರಿಯಂ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ದೇಶದಲ್ಲಿ 14ನೇ ಸ್ಥಾನಗಳಿಸಿರುವ ಈ ಸರಳಾದೇವಿ ಕಾಲೇಜು ಭವಿಷ್ಯದಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನಕ್ಕೇರಲಿ ಎಂದು ಆಶಯ ವ್ಯಕ್ತಪಡಿಸಿದ ಶಾಸಕರು, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಲ್ಲಿರುವವರನ್ನು ಸನ್ಮಾನಿಸಿ ಇತರೆ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ|ಎ. ಹೇಮಣ್ಣ ಮಾತನಾಡಿ, ಕಾಲೇಜಿಗೆ 1415 ಟಾಬ್ಲೆಟ್‌ಗಳು ಬಂದಿದ್ದು, ಇಂದು ಸಾಂಕೇತಿಕವಾಗಿ ವಿವಿಧ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಲಾಗಿದೆ. ಕಾಲೇಜು ಸಂಪೂರ್ಣವಾಗಿ ಆರಂಭವಾದ ಮೇಲೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಚಿ ವೀರಶೇರರೆಡ್ಡಿ, ಸದಸ್ಯರಾದ ಮಾಜಿ ಮೇಯರ್ ಇಬ್ರಾಹಿಂ ಬಾಬು, ಶ್ರೀನಿವಾಸಮೋತ್ಕರ್, ಅಶೋಕ್ ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ತಿಪ್ಪೇಸ್ವಾಮಿ, ಕುರುಬರ ಮಹೇಶ್, ಅಮೀರ್ ಬಾಷ, ವೀರೇಶ್, ರಿಂದೂ, ಹರ್ಷವರ್ಧನ, ಅಜಯ್ ಕುಮಾರ್, ಗಣೇಶ್ ಡಿ.ಎಸ್, ರಾಮಾಂಜನೇಯಲು, ನೂರ್‌ಜಹಾನ್, ಲತೀಫ್, ಶಾರದ, ದಶಗುಣ ಇವರಿಗೆ ಟ್ಯಾಬ್‌ಗಳನ್ನು ವಿತರಿಸಲಾಯಿತು. ಪ್ರೊ| ಬಿ. ನಾಗರಾಜ್, ಡಾ| ಇಸ್ಮಾಯಿಲ್ ಮಕಾಂದರ್, ಪ್ರೊ| ಆರ್. ಮನೋಹರನ್, ಡಾ| ವೀರರಾಘವುಲು, ಡಾ| ಆರ್.ಎಂ. ಶ್ರೀದೇವಿ, ಶೋಭಾರಾಣಿ, ಎಂ.ಎಂ. ಈಶ್ವರ್, ಡಾ| ಅಣ್ಣಪ್ಪಸ್ವಾಮಿ ಎಚ್.ಡಿ. ಪಂಚಾಕ್ಷರಿ, ಪಂಪನಗೌಡ, ಕಲ್ಯಾಣಬಸವ, ಗುರುಬಸಪ್ಪ, ಜಿ.ಕೊಟ್ರಪ್ಪ, ಡಾ| ಶಶಿಕಾಂತ, ಐಟಿ ಸಂಚಾಲಕ ಡಾ| ಹರೀಶ್‌ಗುಜ್ಜಾರ್, ಡಾ| ದುರುಗಪ್ಪ ಟಿ, ಸಿದ್ದೇಶ್, ಡಾ| ಕೆ.ಬಸಪ್ಪ ಇದ್ದರು. ಗಣೇಶ್ ಪ್ರಾರ್ಥಿಸಿದರು.
ಡಾ| ತಿಪ್ಪೇರುದ್ರ ಸ್ವಾಗತಿಸಿದರು. ಪ್ರೊ| ಸಿ. ದೇವಣ್ಣ ನಿರೂಪಿಸಿದರು. ಡಾ| ಟಿ. ವೀರಭದ್ರಪ್ಪ ವಂದಿಸಿದರು.