ಬಳ್ಳಾರಿ: ರೈತ ವಿರೋಧಿ ಯಾಗಿರುವ ಕೃಷಿಗೆ ಸಂಬಂಧಿ ಸಿದ ಮೂರು ಕಾನೂನುಗಳನ್ನು ರದ್ದುಪಡಿಸಬೇಕು. ರೈತರಿಗೆ ಬೆಂಬಲ ಬೆಲೆ ನೀಡುವ ಕಾನೂನು ಖಾತರಿ ನೀಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ರೈತ ಸಂಘಟನೆಗಳು ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿ ಸಿ ದೆಹಲಿಯಲ್ಲಿ ಕಳೆದ ಏಳು ತಿಂಗಳಿಂದ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟವನ್ನು ಬೆಂಬಲ ಸೂಚಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಆರ್ಥಿಕತೆಯ ಇತರ ಕ್ಷೇತ್ರಗಳು ಕ್ಷೀಣಿಸಿದವು ಮತ್ತು ಕುಸಿದವು ಆದರೂ ಕೃಷಿಯಲ್ಲಿ ದಾಖಲೆಯ ಉತ್ಪಾದನೆಯನ್ನು ಸಾಧಿ ಸಿದೆ.
ಆದರೂ ಕೇಂದ್ರ ಸರ್ಕಾರ ಮೂರು ರೈತ ವಿರೋ ಧಿ ಕಾನೂನುಗಳನ್ನು ಹೇರಿದೆ. ಅವುಗಳು ನಮ್ಮ ಕೃಷಿಯನ್ನು ಮತ್ತು ನಮ್ಮ ಮುಂದಿನ ಪೀಳಿಗೆಗಳನ್ನು ನಾಶಪಡಿಸುತ್ತವೆ. ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿ ಸಿದ ಹೊಸ ಸುಗ್ರೀವಾಜ್ಞೆಯಲ್ಲಿ ಹುಲ್ಲನ್ನು ಸುಡುವುದಕ್ಕಾಗಿ ದಂಡ ಮತ್ತು ಜೈಲು ಶಿಕ್ಷೆ ವಿ ಧಿಸಲಾಗುತ್ತದೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ-2020ರ ಮೂಲಕ ಸಬ್ಸಿಡಿ ಹಿಂಪಡೆಯಲಾಗುತ್ತಿದೆ. ರೈತರ ಉತ್ಪನ್ನಗಳಿಗೆ ಬೆಲೆಗಳನ್ನು ನಿಗದಿ ಮಾಡುವ ಸಂದರ್ಭ ಬಂದಾಗ ಅಪಾರ ಶೋಷಣೆ ಮತ್ತು ಲೂಟಿಗೆ ಒಳಗಾಗುತ್ತಿದೆ.
ಅದಕ್ಕಾಗಿ ಸ್ವಾಮಿನಾಥನ್ ಆಯೋಗದ ಸೂತ್ರವನ್ನು ಬಳಸಿಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಮತ್ತು ಅಂಥ ಎಂಎಸ್‌ಪಿಯನ್ನು ಎಲ್ಲ ರೈತರಿಗೆ ಕಾನೂನಿನ ಚೌಕಟ್ಟಿನಲ್ಲಿ ಖಾತರಿಪಡಿಸಬೇಕು ಎಂದು ಒತ್ತಾಯಿಸಿದರು. ದೆಹಲಿ ಬಳಿ ನಡೆಯುತ್ತಿರುವ ಪ್ರತಿಭಟನಾಕಾರರಲ್ಲಿ ಸುಮಾರು 520 ಮಂದಿ ಈವರೆಗೆ ಹುತಾತ್ಮರಾಗಿದ್ದಾರೆ.
ಇದನ್ನು ನೋಡಿದರೆ 46 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿ ನೆನಪಿಗೆ ತರುತ್ತಿದೆ. ಕೇವಲ ರೈತರ ಚಳವಳಿ ಮಾತ್ರವೇ ಸರ್ಕಾರದ ದಬ್ಟಾಳಿಕೆಯನ್ನು ಅನುಭವಿಸುತ್ತಿಲ್ಲ. ಕಾರ್ಮಿಕರು, ಯುವಜನ, ವಿದ್ಯಾರ್ಥಿಗಳ, ಮಹಿಳೆಯರ, ಅಲ್ಪಸಂಖ್ಯಾತ ಸಮುದಾಯಗಳ, ದಲಿತರ ಹಾಗೂ ಆದಿವಾಸಿಗಳ ಚಳವಳಿಗಳು ಕೂಡ ಸರ್ಕಾರದ ಕಿರುಕುಳ ಎದುರಿಸುತ್ತಿವೆ. ಆಗಿನ ತುರ್ತು ಪರಿಸ್ಥಿತಿಯಂತೆ ಈಗಲೂ ಕೂಡ ಅನೇಕ ದೇಶಭಕ್ತ ಹೋರಾಟಗಾರರನ್ನು ಕಾರಾಗೃಹಗಳಲ್ಲಿ ಇರಿಸಲಾಗಿದೆ. ಸರ್ವಾಧಿ ಕಾರಿ ಆಡಳಿತವನ್ನು ವಿರೋಧಿ ಸುವವರ ವಿರುದ್ಧ ಯುಎಪಿಎಯಂತಹ ಕಠಿಣ ಕಾನೂನುಗಳನ್ನು ದುರುಪ ಯೋಗಪಡಿಸಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೂರು ರೈತ ವಿರೋ ಧಿ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ಎಲ್ಲ ರೈತರಿಗೆ ಶೇ. 50ರಷ್ಟು ಆದಾಯವನ್ನು ನೀಡುವ ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೆ ತರಲು ನೀವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರುಗಳಾದ, ಯು. ಬಸವರಾಜ್, ಹನುಮಂತಪ್ಪ, ಸಂಗನಕಲ್ಲು ಕೃಷ್ಣ, ಶಿವಶಂಕರ್ ಮೊದಲಾದವರು ಪಾಲ್ಗೊಂಡಿದ್ದರು.