Advertisement

ಅಭಿವೃದ್ಧಿ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಲಿ

10:31 PM Jun 25, 2021 | Team Udayavani |

ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ತಿಕ್ಕಾಟದಿಂದ ತಾಲೂಕಿನ ಅ ಧಿಕಾರಿಗಳು ಕೆಲಸ ಮಾಡಲು ಹಿಂದೇಟು ಹಾಕುವಂತಾಗಿದೆ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಟ್ಯಾಬ್‌ ವಿತರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಅಭಿವೃದ್ಧಿ ಕೆಲಸಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಅಧಿ ಕಾರಿಗಳಿಗೆ ಒತ್ತಡ ಹೇರಿದರೆ ಯಾವ ಕೆಲಸಗಳು ಆಗುವುದಿಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಬಂದವರು ಇಲ್ಲಿಂದ ಹೋಗುವಂತಾಗುತ್ತದೆ ಎಂದು ತಿಳಿಸಿದರು. ಶಾಸಕ ಎಸ್‌.ಭೀಮಾನಾಯ್ಕ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಸರಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು. ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಪಟ್ಟಣದ ಡಿಗ್ರಿ ಕಾಲೇಜು ಅಭಿವೃದ್ಧಿಗೆ 25ಕೋಟಿ ರೂ. ಅನುದಾನ ನೀಡಿದ್ದೇನೆ. ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಕಾಲೇಜಿನ ಎಲ್ಲ 960 ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಅಲ್ಲಾಭಕ್ಷಿ, ಹಂಚಿನಮನಿ ಹನುಮಂತಪ್ಪ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ,ಹಾಲ್ದಾಳ್‌ ವಿಜಯಕುಮಾರ್‌, ಮರಿರಾಮಪ್ಪ, ಗುಂಡ್ರು ಹನುಮಂತ, ಬಾಲಕೃಷ್ಣಬಾಬು, ಕೆ.ರಾಮಪ್ಪ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರ, ಉಪಾಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್‌, ಡಿಶ್‌ ಮಂಜುನಾಥ, ಕಾಲೇಜ್‌ ಪ್ರಾಂಶುಪಾಲ ಸತೀಶ್‌ ಪಾಟೀಲ್‌, ಉಪನ್ಯಾಸಕರಾದ ಅಣ್ಣೋಜಿರೆಡ್ಡಿ, ವೀರೇಶ್‌ ಬಡಿಗೇರ್‌, ಹಾರಾಳ್‌ ಬುಳ್ಳಪ್ಪ, ಸಂದ್ಯಾ, ಎಂ.ಮಲ್ಲಿಕಾರ್ಜುನ, ಯಮುನಾನಾಯ್ಕ, ಕೆ.ರೀಟಾ, ವೀರೇಶ್ವರ ನಾಯ್ಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next