Advertisement

ಪಾಲಿಕೆ ಪರಿಷ್ಕೃತ ಆಸ್ತಿ ತೆರಿಗೆ ಹಿಂಪಡೆಯಿರಿ

09:40 PM Jun 24, 2021 | Team Udayavani |

ಬಳ್ಳಾರಿ: ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೆ„ರತಿ ಬಸವರಾಜ್‌ ಅವರನ್ನು ಈಚೆಗೆ ಭೇಟಿಯಾಗಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶ್ವಂತ್‌ ರಾಜ್‌ ಅವರು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಪರಿಷ್ಕೃತ ಆಸ್ತಿ ತೆರಿಗೆಯನ್ನು ಹಿಂಪಡೆಯಬೇಕು ಎಂದು ಅವರು ಮನವಿ ಮಾಡಿದರು.

Advertisement

ಕೋವಿಡ್‌ ಸೋಂಕು ಸತತ ಎರಡು ವರ್ಷದಿಂದ ನಮ್ಮೆಲ್ಲರನ್ನು ಕಾಡುತ್ತಿರುವ ಪರಿಣಾಮ ವರ್ತಕರು, ವ್ಯಾಪಾರಸ್ಥರು, ಉದ್ಯಮಿಗಳು ಮತ್ತು ಸಾರ್ವಜನಿಕರು ವಿಪರೀತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಆಸ್ತಿ ತೆರಿಗೆಯನ್ನು ಮನಬಂದಂತೆ ಏರಿಕೆ ಮಾಡಿ ಕಟ್ಟಡದ ಸುತ್ತ ಇರುವ ಖಾಲಿ ಜಾಗದ ಮೇಲೂ ತೆರಿಗೆಯನ್ನು ವಿಧಿಸಿ ಆದೇಶ ಹೊರಡಿಸಿತ್ತು.

ಸರ್ಕಾರದ ಈ ನಿರ್ಧಾರವನ್ನು ವಿರೋ ಧಿಸಿ ಕಳೆದ ಕೆಲವು ದಿನಗಳಿಂದ ಪತ್ರದ ಮುಖೇನ ಪರಿಷ್ಕೃತ ಆದೇಶವನ್ನು ಹಿಂಪಡೆಯಲು ಕೋರಿದ್ದೇವು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ನಗರಾಭಿವೃದ್ಧಿ ಸಚಿವ ಭೆ„ರತಿ ಬಸವರಾಜ್‌ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಸಮಸ್ಯೆ ಗಮನಕ್ಕೆ ತಂದು ಆಸ್ತಿ ತೆರಿಗೆ ಕುರಿತಾಗಿ ಹೊರಡಿಸಿದ ಪರಿಷ್ಕೃತ ಆದೇಶವನ್ನು ಹಿಂಪಡೆದು ಹಿಂದಿನ ಪದ್ಧತಿಯನ್ನೆ ಇನ್ನೂ ಎರಡು ವರ್ಷ ಮುಂದುವರಿಸಬೇಕು ಎಂದು ಕೋರಿದ್ದಾರೆ.

ಜತೆಗೆ ಪ್ರಸಕ್ತ 2021-2022ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಲು 31ನೇ ಡಿಸೆಂಬರ್‌ 2021ರವರೆಗೆ ದಂಡರಹಿತ ಕಾಲಾವ ಧಿಯನ್ನು ವಿಸ್ತರಿಸಲು ರಾಜ್ಯದ ಸಮಸ್ತ ವರ್ತಕರು, ವ್ಯಾಪಾರಸ್ಥರು, ಉದ್ಯಮಿಗಳು ಮತ್ತು ಸಾರ್ವಜನಿಕರ ಪರವಾಗಿ ಮಾನ್ಯ ಸಚಿವರಲ್ಲಿ ಮನವಿ ಮಾಡಲಾಯಿತು ಎಂದು ಸಂಸ್ಥೆಯ ಅಧ್ಯಕ್ಷ ವಿ.ರವಿಕುಮಾರ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿದ ಸಚಿವ ಭೆ„ರತಿ ಬಸವರಾಜ್‌ ಅವರು, ಈಗಾಗಲೇ ದಂಡ ರಹಿತವಾಗಿ ಆಸ್ತಿ ತೆರಿಗೆಯನ್ನು ಪಾವತಿಸಲು ಜುಲೈ 31ರ ವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು, ಜುಲೈ ನಂತರ ಪಾವತಿಸುವ ತೆರಿಗೆಗೆ ಪ್ರತೀ ತಿಂಗಳಿಗೆ ಶೇ. 2% ದಂಡ ವಿಧಿ ಸುತ್ತಾ ಆದೇಶಿಸಲಾಗಿದೆ. ಜಾರಿಯಲ್ಲಿರುವ ಆದೇಶವನ್ನು ಹಿಂಪಡೆಯುವುದು ಕಷ್ಟ. ಆದ್ದರಿಂದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮುಖ್ಯಸ್ಥಿಕೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಕರೆಯಲು ಸೂಚಿಸಿ ಅದರಲ್ಲಿ ಮಂತ್ರಿಗಳು ಕೂಡ ಭಾಗವಹಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ಅವರು ವಿವರಿಸಿದರು.

Advertisement

ಸಂಸ್ಥೆಯ ಈ ಪ್ರಯತ್ನದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ, ಬೆಂಗಳೂರಿನ ಅಧ್ಯಕ್ಷರು ಮತ್ತು ಪದಾಧಿ ಕಾರಿಗಳು ಮತ್ತು ಅಶ್ವಿ‌ನ್‌ ಕೊತಂಬ್ರಿ, ಅಧ್ಯಕ್ಷರು, ಹೊಸಪೇಟೆ ತಾಲೂಕು ಚೇಂಬರ್‌ ಆಫ್‌ ಕಾಮರ್ಸ್‌ ಬೆಂಬಲವಾಗಿ ನಮ್ಮ ಜೊತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next