ಸಂಡೂರು: ಜೀವದ ಹಂಗುತೊರೆದು ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಂಗನವಾಡಿ, ಆಶಾ, ಪೊಲೀಸ್, ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಗೆ ಉಚಿತವಾಗಿ ನಿತ್ಯ ಮಜ್ಜಿಗೆ, ತಂಪು ಪಾನೀಯರ ನೀಡುವ ಮೂಲಕ ಅವರ ಕೆಲಸಕ್ಕೆ ಪ್ರೋತ್ಸಾಹಿಸೋಣ ಎಂದು ಶ್ರೀಶೈಲೇಶ್ವರ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಚಿದಂಬರ್ ನಾನಾವಟೆ ತಿಳಿಸಿದರು.
ಅವರು ಪಟ್ಟಣದಲ್ಲಿ ಪುರಸಭೆ ಸಿಬ್ಬಂದಿ ಉಚಿತ ತಂಪು ಮಜ್ಜಿಗೆ ವಿತರಿಸಿ ಮಾತನಾಡಿ, ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ಕರಬೂಜದ ಹಣ್ಣನ್ನು ಬೆಳೆದ ರೈತರ ಹಣ್ಣುಗಳನ್ನು ಖರೀದಿ ಮಾಡಿ ರೈತನಿಗೆ ಸಹಾಯ ಮಾಡುವುದರ ಮೂಲಕ ಖರೀದಿಸಿದ ಹಣ್ಣುಗಳನ್ನ ಬಡ, ಸಂತ್ರಸ್ಥರಿಗೆ ಮತ್ತು ಕೊರೋನಾ ವಾರಿಯರ್ಸ್‌ಗೂ ಉಚಿತವಾಗಿ ವಿತರಿಸುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತು ಸಹಾಯ ನೀಡಿತ್ತು.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ವಿಪರೀತವಾಗಿ ತನ್ನ ಪ್ರಭಾವವನ್ನು ಬೀರುತ್ತಿದ್ದು ಕೊರೊನಾ ವಾರಿಯರ್ಸ್ ಆದ ಆರಕ್ಷಕ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ನಗರಸಭೆ ಸಿಬ್ಬಂದಿಗಳು ಇನ್ನಿತರ ಅ ಧಿಕಾರಿಗಳು ಹಾಗೂ ಕೊರೊನಾ ವಾರಿಯರ್ಸ್ ಎಲ್ಲರೂ ತಮ್ಮ ಪ್ರಾಣವನ್ನು ಬದಿಗಿಟ್ಟು ಜನಸಾಮಾನ್ಯರ ರಕ್ಷಣೆ ಹಾಗೂ ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಕೊರೊನಾ ವಾರಿಯರ್ಸ್‌ಗೂ ಶ್ರೀಶೈಲೇಶ್ವರ ವಿದ್ಯಾಕೇಂದ್ರದಿಂದ ಸುಮಾರು ಒಂದು ವಾರದಿಂದ ಲಾಕ್‌ಡೌನ್ ಮುಗಿಯುವವರೆಗೂ ಉಚಿತ ಮಜ್ಜಿಗೆ ಸೇವೆಯನ್ನು ಕೊಡುವ ತನ್ನ ಅಳಿಲು ಸೇವೆಯನ್ನ ಸಾಮಾಜಿಕ ಕಳಕಳಿಯಿಂದ ಮುಂದೆ ಬಂದು ಮಾಡುತ್ತಿವುದು ಹರ್ಷದ ಸಂಗತಿಯಾಗಿದೆ.
ಮಜ್ಜಿಗೆಯನ್ನು ಪಡೆದ ಕೊರೊನಾ ವಾರಿಯರ್ಸ್ ಬಿಸಿಲಿನ ತಾಪದಿಂದ ಹಾಗೂ ಕೆಲಸದ ಒತ್ತಡದಿಂದ ದೈಹಿಕ ಮತ್ತು ಮಾನಸಿಕ ಆಯಾಸದಿಂದ ನಮಗೆ ಸುಸ್ತಾಗುತ್ತದೆ. ಮಜ್ಜಿಗೆ ಕುಡಿಯುವುದರಿಂದ ಮನಸ್ಸಿಗೆ ಆನಂದವನ್ನುಂಟು ಮಾಡುತ್ತದೆ. ಮಜ್ಜಿಗೆಯನ್ನು ಒದಗಿಸುವ ವಿದ್ಯಾಸಂಸ್ಥೆಗೆ ಕೊರೊನಾ ವಾರಿಯರ್ಸ್ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿತು.
ಸಂಡೂರು ಠಾಣೆ ಪಿಎಸ್‌ಐ ಬಸವರಾಜ್ ಅಡವಿ ಬಾವಿ ಪ್ರತಿಕ್ರಿಯಿಸಿ ಸಂಡೂರು ವಿದ್ಯೆ ನೀಡುವಂಥ ವಿದ್ಯಾ ಸಂಸ್ಥೆಯವರು ನಮ್ಮಂಥ ಕೊರೊನಾ ವಾರಿಯರ್ಸ್‌ಗೆ ಹಾಗೂ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯವರಿಗೆ ಪ್ರತಿದಿನ ಮಜ್ಜಿಗೆ ಕೊಡುವುದರ ಮೂಲಕ ಸಾಮಾಜಿಕ ಕಳಕಳಿಯ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.