Advertisement

ಕೋವಿಡ್‌ ಸೋಂಕು ತಂದ ಆತಂಕ

09:54 PM May 27, 2021 | Team Udayavani |

„ವೆಂಕೊಬಿ ಸಂಗನಕಲ್ಲು

Advertisement

ಬಳ್ಳಾರಿ: ಕೋವಿಡ್‌ ಸೋಂಕು ಸೃಷ್ಟಿಸಿದ ಆತಂಕ, ಭಯದಿಂದಾಗಿ ಗ್ರಾಮೀಣ ಜನರು, ಸ್ಲಂ ಪ್ರದೇಶಗಳ ಮಹಿಳೆಯರು ದೇವರ ಮೊರೆಹೋಗಿ ಮೌಢಾÂಚರಣೆಗೆ ಮುಂದಾದರೆ, ಯುವಕರು ಮಾತ್ರ ಸಮಯ ಕಳೆಯಲು ಇಸ್ಪೀಟ್‌, ಕ್ರಿಕೆಟ್‌, ಮೊಬೈಲ್‌ಗ‌ಳಲ್ಲಿ ಗೇಮ್‌, ಕೇರಮ್‌ ಆಟಗಳನ್ನು ಆಡುವಲ್ಲಿ ಮಗ್ನರಾಗಿದ್ದಾರೆ. ಕೋವಿಡ್‌ ಸೋಂಕು ಎರಡನೇ ಅಲೆ ಬಳ್ಳಾರಿ/ ವಿಜಯನಗರ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಅಬ್ಬರಿಸುತ್ತಿದೆ. ಉಭಯ ಜಿಲ್ಲೆಗಳಲ್ಲಿ ಸಾವಿರಾರು ಜನರಲ್ಲಿ ಸೋಂಕು ಪತ್ತೆಯಾಗುವುದರ ಜತೆಗೆ 1200ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಎರಡನೇ ಅಲೆಯಲ್ಲಿ ಗ್ರಾಮೀಣ ಭಾಗಕ್ಕೂ ಆವರಿಸಿರುವ ಸೋಂಕು ಅಲ್ಲಿನ ಜನರಲ್ಲಿ ಆತಂಕ, ಭಯದ ವಾತಾವರಣ ಸೃಷ್ಟಿಸಿದೆ. ಕೊರೊನಾ ಸೋಂಕು ಗ್ರಾಮಗಳಿಂದ ದೂರವಾಗಲಿ ಎಂದು ಹಲವು ಗ್ರಾಮಗಳಲ್ಲಿನ ಜನರು, ನಗರದ ಸ್ಲಂ ಪ್ರದೇಶಗಳಲ್ಲಿನ ಮಹಿಳೆಯರು ದೇವರ ಮೊರೆ ಹೋಗುತ್ತಿದ್ದಾರೆ. ಗ್ರಾಮಗಳಲ್ಲಿ ನೂರಾರು ಕೆಜಿ ಅನ್ನ ಮಾಡಿಸಿಕೊಂಡು ಗ್ರಾಮದ ಸುತ್ತಲೂ ಚೆಲ್ಲಿದರೆ, ನಗರ ಪ್ರದೇಶಗಳಲ್ಲಿ ಮಹಿಳೆಯರು ಸುಂಕಲಮ್ಮ, ಮಾರೆಮ್ಮ, ತಾಯಮ್ಮ ದೇವರಿಗೆ ಮೊಸರನ್ನು ಎಡೆ ಕೊಟ್ಟು ತಮ್ಮ ಗ್ರಾಮ, ಏರಿಯಾಗಳನ್ನು ಕೋವಿಡ್‌ ಸೋಂಕಿನಿಂದ ದೂರವಾಗಿಸುವಂತೆ ಪ್ರಾರ್ಥಿಸುತ್ತಿದ್ದಾರೆ.

ನೂರಾರು ಕೆಜಿ ಅನ್ನ ಚೆಲ್ಲಿದ್ದ ಗ್ರಾಮಸ್ಥರು: ಕೋವಿಡ್‌ ಸೋಂಕಿನಿಂದ ಹೆಚ್ಚಿನ ಸಾವು, ನೋವು ಸಂಭವಿಸಿದ್ದ ತಾಲೂಕಿನ ಕೊಳಗಲ್ಲು, ಡಿ.ಕಗ್ಗಲ್ಲು, ದಮ್ಮೂರು ಸೇರಿ ವಿಜಯನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೂರಾರು ಕೆಜಿ ಅನ್ನ ಮಾಡಿಸಿಕೊಂಡು ಹೋಗಿ ಮಧ್ಯರಾತ್ರಿ ಗ್ರಾಮದ ಸುತ್ತಲೂ ಚೆಲ್ಲಿ ಮಣ್ಣುಪಾಲು ಮಾಡಿ ಮೌಢಾಚರಿಸಿದ್ದಾರೆ. ತಾಲೂಕಿನ ಡಿ. ಕಗ್ಗಲ್ಲು ಗ್ರಾಮದಲ್ಲಿ ಭೂತ-ಪ್ರೇತಗಳಿಗೆ ಬೃಹತ್‌ ಅನ್ನಸಂತರ್ಪಣೆ ಮಾಡಿದರೆ ಕೊರೊನಾ ದೂರವಾಗುವುದು ಎಂಬ ಮೌಡ್ಯವನ್ನು ಗ್ರಾಮಸ್ಥರಲ್ಲಿ ಭಿತ್ತಿರುವ ಮುಖಂಡರು, ಪ್ರತಿ ಮನೆಯಿಂದ ತಲಾ ಐದು ಕೆಜಿ ಅನ್ನ ಮಾಡಿಸಿಕೊಂಡು ಟ್ರಾಕ್ಟರ್‌ಗಳಲ್ಲಿ ತುಂಬಿಕೊಂಡು ಮಧ್ಯರಾತ್ರಿ ಗ್ರಾಮದ ಸುತ್ತಲೂ ಚೆಲ್ಲಲಾಗಿದೆ.

ದೇವತೆಯರಿಗೆ ಎಡೆ ಸಮರ್ಪಣೆ: ಆಧುನಿಕತೆಯಿಂದಾಗಿ ಕೈಬಿಡಲಾಗಿದ್ದ ಏರಿಯಾಗಳಲ್ಲಿನ ಪದ್ಧತಿಗಳನ್ನು ಕೋವಿಡ್‌ ಸೋಂಕಿನ ಪರಿಣಾಮ ಪುನಃ ಆಚರಿಸುವ ಮೂಲಕ ಮುನ್ನೆಲೆಗೆ ಬಂದಂತಾಗಿದೆ. ಬಳ್ಳಾರಿ ನಗರದ ವಿವಿಧ ಸ್ಲಂ ಪ್ರದೇಶಗಳಲ್ಲೂ ಕೋವಿಡ್‌ ಸೋಂಕು ದೂರವಾಗಿಸುವ ಸಲುವಾಗಿ ಮಹಿಳೆಯರು, ಸುಂಕಲಮ್ಮ, ಮಾರೆಮ್ಮ, ತಾಯಮ್ಮ, ದುರ್ಗಮ್ಮ ದೇವತೆಯರಿಗೆ “ಮೊಸರನ್ನ’ವನ್ನು ಎಡೆ ನೀಡಿ, ಹೊರಗೆ ಪಾದಗಟ್ಟೆಗೆ ಮೊಸರು ಹಾಕಿ ಸೋಂಕಿನಿಂದ ಮುಕ್ತಗೊಳಿಸುವಂತೆ ದೇವತೆಯರಲ್ಲಿ ಮೊರೆ ಇಟ್ಟಿದ್ದಾರೆ.

Advertisement

ಅಲ್ಲದೇ, ದಶಕಗಳ ಹಿಂದೆ ಕಾಲರಾಗಳಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾದಾಗ ಯಾವುದೇ ಕ್ಷುದ್ರ ಗ್ರಹಗಳ ದೃಷ್ಟಿ ಬೀಳದಿರಲಿ ಎಂದು ಗ್ರಾಮಗಳು ಮತ್ತು ಏರಿಯಾಗಳ ನಾಲ್ಕು ದಿಕ್ಕುಗಳಲ್ಲಿ ಬೇವು, ಮಾವಿನ ಎಲೆ, ಟೆಂಗಿನ ಕಾಯಿ, ಮೆಣಸಿನಕಾಯಿಗಳಿಂದ ಸಿದ್ಧಪಡಿಸಿದ್ದ ತೋರಣಗಳನ್ನು ಕಟ್ಟಿ, ಹೆಣ್ಣು ದೇವತೆಯರ ಗುಡಿಗಳ ಮುಂದೆ ರಾಗಿಗಂಜಿ ಸಿದ್ಧಪಡಿಸಿ ಎಲ್ಲರಿಗೂ ಹಂಚುತ್ತಿದ್ದ ಪದ್ಧತಿಯನ್ನು ಇದೀಗ ಕೋವಿಡ್‌ ಸೋಂಕು ಹಿನ್ನೆಲೆಯಲ್ಲಿ ಪುನಃ ಆಚರಣೆಗೆ ತಂದಿದ್ದು, ನಗರದ ಚಲುವಾದಿ ಬೀದಿ, ಬಾಪೂಜಿನಗರ ಸೇರಿ ಇನ್ನಿತರೆ ಸ್ಲಂ ಪ್ರದೇಶಗಳಲ್ಲಿನ ಜನರು ನಾಲ್ಕು ದಿಕ್ಕುಗಳಲ್ಲಿ ತೋರಣಗಳನ್ನು ಕಟ್ಟಿ ಗಂಜಿ ಹಂಚಿ ಕೋವಿಡ್‌ ನಿರ್ಮೂಲಿಸುವಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ ಎನ್ನುತ್ತಾರೆ ಸ್ಲಂ ಪ್ರದೇಶದ ಮುಖಂಡರು.

Advertisement

Udayavani is now on Telegram. Click here to join our channel and stay updated with the latest news.

Next