Advertisement

ಸಂಕಷ್ಟದಲ್ಲೂ ರಾಜಕೀಯ ಬೇಡ

08:49 PM May 25, 2021 | Team Udayavani |

ಕಂಪ್ಲಿ: ಅಧಿಕಾರವಿಲ್ಲದೇ ಕೇವಲ ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ. ಕೊರೊನಾ ಸಂಕಷ್ಟದಲ್ಲಿ ರಾಜಕೀಯ ಮಾಡುವುದನ್ನು ವಿರೋಧ ಪಕ್ಷದವರು ಮೊದಲು ಬಿಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಕೊಟ್ಟಾಲ್‌ ರಸ್ತೆಯ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಸೋಮವಾರ ಎಸ್‌ಬಿ ಫೌಂಡೇಶನ್‌ ವತಿಯಿಂದ ಆಯೋಜಿಸಿದ್ದ ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ವ್ಯವಸ್ಥಿತ 50 ಹಾಸಿಗೆಯ ಉಚಿತ ಕೋವಿಡ್‌ ಕೇರ್‌ ಸೆಂಟರ್‌ ಉದ್ಘಾಟನೆ ಮಾಡಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಈಗಾಗಲೇ ಸಾಕಷ್ಟು ಜನರು ಕೊರೊನಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ, ಇಂತಹ ಕಷ್ಟದ ಕಾಲದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುವ ಬದಲು ವಿಪಕ್ಷ ನಾಯಕರು ಕೀಳು ರಾಜಕಾರಣ ಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ.

ಕೊರೊನಾವನ್ನು ದೇಶದಿಂದ ತೊಲಗಿಸಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಕೆಲ ಸಲಹೆ ಸೂಚನೆ ನೀಡಿರುವುದು ಸ್ವಾಗರ್ತಹವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಮಾಜಿ ಪ್ರಧಾನಿ ದೇವೇಗೌಡರ ಅವರ ಮನೋಭಾವ ಪಾಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆ ವಿಚಾರದಲ್ಲಿ ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸುವ ವಿಪಕ್ಷ ನಾಯಕರು ಪ್ರಾಥಮಿಕ ಹಂತದ ಲಸಿಕೆ ವಿತರಣೆ ವಿಚಾರದಲ್ಲೂ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು. ಜತೆಗೆ ವಿಪಕ್ಷ ನಾಯಕರೇ ಮಂಚೂಣಿಯಲ್ಲಿ ನಿಂತು ಲಸಿಕೆ ಪಡೆದುಕೊಂಡರು.

Advertisement

ಆದರೆ ಸಾರ್ವಜನಿಕರು ಲಸಿಕೆ ಪಡೆಯುವಾಗ ಇಲ್ಲಸಲ್ಲದ ಅಪಪ್ರಚಾರ ಮಾಡಿ ಜನರ ಹಾದಿ ತಪ್ಪಿಸುವ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಕೊರೊನಾ ಮಹಾಮಾರಿಯಿಂದ ಹೊರಬಂದ ನಂತರ ವಿಪಕ್ಷದವರಿಗೆ ಎಲ್ಲ ಅಂಕಿಸಂಖ್ಯೆಗಳನ್ನು ನೀಡಲಾಗುವುದು ಎಂದರು.

ಕೊರೊನಾ ನಡುವೆ ಬ್ಲಾಕ್‌ ಫಂಗಸ್‌ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು, ಇದರ ನಿಯಂತ್ರಣಕ್ಕೆ 1270 ವ್ಯಾಕ್ಸಿನ್‌ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಬರಾಜು ಮಾಡಿದೆ. ಮುಂದಿನ ದಿನದಲ್ಲಿ ಕೊರೊನಾ ಹಾಗೂ ಬ್ಲಾಕ್‌ ಫಂಗಸ್‌ ನಿಯಂತ್ರಣಕ್ಕೆ ಕೇಂದ್ರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಲಿದೆ ಎಂದು ಹೇಳಿದರು.

ಮಾಜಿ ಶಾಸಕ ಟಿ.ಎಚ್‌.ಸುರೇಶ್‌ ಬಾಬು, ಮಾಜಿ ಸಂಸದ ಸದಸ್ಯ ಸಣ್ಣ ಫಕ್ಕೀರಪ್ಪ, ಪುರಸಭೆ ಅಧ್ಯಕ್ಷೆ ಶಾಂತಲಾ ವಿ ವಿದ್ಯಾಧರ್‌, ತಹಶೀಲ್ದಾರ್‌ ಗೌಸಿಯಾಬೇಗಂ, ಉಪ ತಹಶೀಲ್ದಾರ್‌ ರವೀಂದ್ರ ಕುಮಾರ್‌, ಸಿಪಿಐ ಸುರೇಶ್‌ ಎಚ್‌.ತಳವಾರ್‌, ಪಿಎಸ್‌ಐ ಬಸಪ್ಪ ಲಮಾಣಿ, ಕೋವಿಡ್‌ ಉಚಿತ ಕೇಂದ್ರದ ಉಸ್ತುವಾರಿ ಡಾ| ಕೃಷ್ಣಕುಮಾರ್‌, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಧಿಕಾ, ತಾಪಂ ಸದಸ್ಯ ಸಿ.ಡಿ.ಮಹಾದೇವ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ. ಸುದರ್ಶನರೆಡ್ಡಿ, ಸದಸ್ಯರಾದ ಎಸ್‌.ಎಂ. ನಾಗರಾಜ, ರಾಮಾಂಜಿನೇಯಲು, ಸಿ.ಆರ್‌. ಹನುಮಂತ, ಹೂಗಾರ್‌ ರಮೇಶ, ಆರ್‌.ಆಂಜಿನೇಯ್ಯ, ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್‌, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ನಗರ ಘಟಕ ಅಧ್ಯಕ್ಷ ಕೊಡಿದಲ್‌ ರಾಜು, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎನ್‌.ಪುರುಷೋàತ್ತಮ, ವಿ.ವಿದ್ಯಾಧರ, ಬಳ್ಳಾರಿ ಮಾರುತಿ, ರಬಿಯಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next