ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ಮದುವೆ, ತೊಟ್ಟಿಲು ಶಾಸ್ತ್ರ, ಸೀಮಂತ ಇನ್ನಿತರೆ ಧಾರ್ಮಿಕ ಶುಭ ಸಮಾರಂಭಗಳ ಛಾಯಚಿತ್ರ ಮತ್ತು ವೀಡಿಯೋ ಚಿತ್ರೀಕರಣ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ತಾಲೂಕಿನ ಛಾಯಗ್ರಾಹಕರ ಮತ್ತು ವೀಡಿಯೋ ಗ್ರಾಫರ್‌ಗಳ ಕುಟುಂಬ ಕೋವಿಡ್ 2ನೇ ಅಲೆಯ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಛಾಯಗ್ರಾಹಕರ ಮತ್ತು ವೀಡಿಯೋ ಗ್ರಾಫರ್‌ಗಳ ಬದುಕನ್ನೇ ಅತಂತ್ರ ಮಾಡಿದೆ. ಮದುವೆ ಸೇರಿದಂತೆ ಯಾವುದೇ ಶುಭ, ಸಮಾರಂಭಗಳಿಲ್ಲದೆ, ಕೆಲಸವಿಲ್ಲದೆ, ಸ್ಟುಡಿಯೋ ಬಾಡಿಗೆ ಕಟ್ಟಲಾಗದೆ, ಸಾಲ ಮಾಡಿ ಖರೀದಿಸಿದ ಕ್ಯಾಮರಾ ಸಾಲ ತೀರಿಸಲಾಗದೆ ಜೀವನ ನಡೆಸಲು ಸಾಧ್ಯವಾಗದೆ, ಕಷ್ಟದ ಸ್ಥಿತಿಯಲ್ಲಿದ್ದಾರೆ.
ಲಾಕ್‌ಡೌನ್ ಸಂಕಷ್ಟದಲ್ಲಿ ಸರ್ಕಾರ ಮತ್ತು ವೀಡಿಯೋ ಗ್ರಾಫರ್‌ಗಳಿಗೆ ಪ್ಯಾಕೇಜ್ ನೀಡದೆ ಕಡೆಗಣಿಸಿದೆ. ಮದುವೆ ಹಾಗೂ ಶುಭ, ಸಮಾರಂಭಗಳಲ್ಲಿ ಛಾಯಗ್ರಹಣ ಹಾಗೂ ವೀಡಿಯೋ ಚಿತ್ರೀಕರಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ, ವೀಡಿಯೋ ಗ್ರಾಫರ್‌ಗಳು ಸಾಲಮಾಡಿಕೊಂಡು ಅತ್ಯಾಧುನಿಕ ಕ್ಯಾಮರಾಗಳನ್ನು ಲಕ್ಷಾಂತರ ರೂ. ಗಳಲ್ಲಿ ಖರೀದಿಸಿ, ಸ್ಟುಡಿಯೋಗಳನ್ನು ಪ್ರಾರಂಭಿಸಿ ಅದರಿಂದ ಬರುವ ಲಾಭದಲ್ಲಿ ಜೀವನ ನಡೆಸುತ್ತಿದ್ದರು. ಅಲ್ಲದೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ, ಕಾಲೇಜುಗಳು ಸಹ ಮುಚ್ಚಿರುವುದರಿಂದ ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ಸಹ ತೆಗೆಸಿಕೊಳ್ಳುವವರಿಲ್ಲದೆ ಆದಾಯಕ್ಕೆ ಹೊಡೆತ ಬಿದ್ದಿದೆ. ವೀಡಿಯೋ ಗ್ರಾಫರ್ ಮತ್ತು ಛಾಯಗ್ರಾಹಕರ ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ ಕೆಲಸವಿರುತ್ತದೆ. ಈ ಸಂದರ್ಭದಲ್ಲಿಯೇ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.
ಮುಖ್ಯವಾಗಿ ಮಾರ್ಚ್ ತಿಂಗಳಿಂದ ಜೂನ್ ವರೆಗೆ ಮದುವೆ ಕಾರ್ಯಕ್ರಮಗಳಿದ್ದು, ವರ್ಷದ ಸಂಪಾದನೆಯನ್ನೆಲ್ಲಾ ಈ ಸಂದರ್ಭದಲ್ಲೇ ದುಡಿದುಕೊಳ್ಳಬೇಕು. ಮುಖ್ಯ ಆದಾಯ ಬರುವ ತಿಂಗಳುಗಳಲ್ಲೇ ಮನೆಯಲ್ಲಿಯೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೃತ್ತಿಯನ್ನು ನಂಬಿಕೊಂಡು ತಮ್ಮ ಕುಟುಂಬದ ನಿರ್ವಹಣೆ ಜತೆಗೆ ಮಕ್ಕಳ ವಿದ್ಯಾಭ್ಯಾಸ, ಜೀವನ ನಡೆಸುತ್ತಿದ್ದ ವೀಡಿಯೋ ಗ್ರಾಫರ್ ಮತ್ತು ಛಾಯಾಗ್ರಾಹಕರ ಕುಟುಂಬಗಳು ಇಂದು ತೀವ್ರ ಸಂಕಷ್ಟ ಎದುರಿಸುತ್ತಿವೆ. ಸರ್ಕಾರವು ಇತರೆ ಕಾರ್ಮಿಕರಿಗೆ ತೋರಿಸುತ್ತಿರುವ ಕಾಳಜಿಯನ್ನು ವೀಡಿಯೋ ಮತ್ತು ´ೋಟೋ ಗ್ರಾಫರ್‌ಗಳ ಮೇಲೂ ತೋರಿಸಬೇಕಾಗಿದೆ.
ಆಧುನಿಕತೆಯ ಭರಾಟೆಯಲ್ಲಿ ಮೊಬೈಲ್‌ಗಳ ಬಳಕೆ ಹೆಚ್ಚಾಗಿದ್ದು, ಮೊಬೈಲ್‌ನಿಂದಲೇ ´ೋಟೋ ಮತ್ತು ವೀಡಿಯೋ ತೆಗೆಯುವವರು ಹೆಚ್ಚಾಗಿದ್ದಾರೆ, ಅಲ್ಲದೆ ಬಹುತೇಕ ಮನೆಗಳಲ್ಲಿ ಕ್ಯಾಮರಾ ಇರುವ ಕಾರಣ ವೀಡಿಯೋ ಮತ್ತು ´ೋಟೋ ಗ್ರಾಫರ್ ಗಳಿಗೆ ಕೆಲಸವೇ ದೊರೆಯುತ್ತಿಲ್ಲವೆಂದು ವೀಡಿಯೋ ಮತ್ತು ´ೋಟೋ ಛಾಯಗ್ರಾಹಕ ಹೊನ್ನೂರ ನಾಯಕ ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.