Advertisement

ಇಂದು ಆರೈಕೆ ಕೇಂದ್ರ ಉದ್ಘಾಟನೆ

09:10 PM May 24, 2021 | Team Udayavani |

ಕಂಪ್ಲಿ: ಪಟ್ಟಣದ ಕಮ್ಮವಾರಿ ಭವನ ಹಿಂಭಾಗದಲ್ಲಿರುವ ಕಲ್ಗುಡಿ ಲೇಔಟ್‌ ಬಳಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಎಸ್‌ಬಿ ಫೌಂಡೇಶನ್‌ ಸಂಸ್ಥೆಯಿಂದ ಮೇ 24ರ ಸೋಮವಾರ ಆರಂಭಗೊಳ್ಳುವ ಆಕ್ಸಿಜನ್‌ ಕಾನ್ಸಂಟ್ರೇಟರ್‌ ವ್ಯವಸ್ಥಿತ 50 ಹಾಸಿಗೆಯ ಉಚಿತ ಕೋವಿಡ್‌ ಕೇರ್‌ ಸೆಂಟರ್‌ಗೆ ಮಾಜಿ ಶಾಸಕ ಟಿ.ಎಚ್‌.ಸುರೇಶ್‌ ಬಾಬು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಮಾಜಿ ಶಾಸಕ ಟಿ.ಎಚ್‌.ಸುರೇಶ್‌ಬಾಬು ಮಾತನಾಡಿ, ಕೊರೊನಾ ಎರಡನೇ ಅಲೆಯು ಜನರ ಪ್ರಾಣದ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಸಾಕಷ್ಟು ಜನರು ಸರಿಯಾದ ಚಿಕಿತ್ಸೆಗಾಗಿ ಹರಸಾಹಸ ಪಡುತ್ತಿದ್ದಾರೆ. ಕೊರೊನಾ ನಿಯಂತ್ರಣ ಜತೆಗೆ ಕೋವಿಡ್‌ ಸೋಂಕಿತರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಂಪ್ಲಿಯ ಕಲ್ಗುಡಿ ಲೇಔಟ್‌ ಬಳಿಯಲ್ಲಿರುವ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಎಸ್‌ಬಿ ಫೌಂಡೇಶನ್‌ ವತಿಯಿಂದ ಸಜ್ಜಾಗಿರುವ ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ವ್ಯವಸ್ಥಿತ 50 ಹಾಸಿಗೆಗಳ ಉಚಿತ ಕೋವಿಡ್‌ ಕೇರ್‌ನ್ನು ಮೇ 24ರಂದು ಸಚಿವರಾದ ಬಿ.ಶ್ರೀರಾಮುಲು, ಆನಂದ್‌ಸಿಂಗ್‌ ನೇತೃತ್ವದಲ್ಲಿ ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಸಂಸದ ದೇವೇಂದ್ರಪ್ಪ, ಸ್ಥಳೀಯ ಶಾಸಕರು, ಜನ ಪ್ರತಿನಿಧಿ ಗಳು ಹಾಗೂ ಅ ಧಿಕಾರಿಗಳು ಭಾಗವಹಿಸಲಿದ್ದಾರೆ. ಜನರು ಕೊರೊನಾಗೆ ಭಯಪಡದೇ, ಜಾಗೃತಿ ವಹಿಸಿ, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೊನಾದಿಂದ ದೂರ ಉಳಿಯಬೇಕು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ.ಸುದರ್ಶನರೆಡ್ಡಿ, ಸದಸ್ಯ ಎಸ್‌.ಎಂ.ನಾಗರಾಜ, ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್‌, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ, ನಗರ ಘಟಕ ಅಧ್ಯಕ್ಷ ಕೊಡಿದಲ್‌ ರಾಜು, ವಿಮ್ಸ್‌ ಮಾಜಿ ನಿರ್ದೇಶಕ ಡಾ.ದೇವನಂದ್‌, ಉಚಿತ ಕೋವಿಡ್‌ ಕೇರ್‌ ಸೆಂಟರ್‌ನ ಉಸ್ತುವಾರಿ ಡಾ.ಕೃಷ್ಣಕುಮಾರನಾಯಕ್‌, ಬಾಲಕರ ವಸತಿ ನಿಲಯ ಪಾಲಕ ವಿರೂಪಾಕ್ಷಿ, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎನ್‌.ಪುರುಷೋತ್ತಮ, ಭಾಸ್ಕರ್‌ ರೆಡ್ಡಿ, ಮರಿಯಪ್ಪ ನಾಯಕ, ವಿರೂಪಾಕ್ಷಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next