ಕೊಟ್ಟೂರು: ಪ್ರತಿ ಹಳ್ಳಿ ಹಳ್ಳಿಗೂ ಜನರಿಗೆ ಆರೋಗ್ಯ ತಪಾಸಣೆ ಮಾಡಬೇಕು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ 250 ಫ್ಲೋಮೀಟರ್ ಹೊಂದಿರುವ ಆಕ್ಸಿಜನ್ ಸಿಲಿಂಡರ್‌ಗಳಿಗೆ ಸ್ವತಃ ಖರ್ಚು ಭರಿಸುವುದಾಗಿ ಶಾಸಕ ಎಸ್. ಭೀಮಾನಾಯ್ಕ ಭರವಸೆ ನೀಡಿದರು.
ಪಟ್ಟಣದಲ್ಲಿ ಶನಿವಾರ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ಕೊಟ್ಟೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಈ ಕೊರೊನಾ 2ನೇ ಅಲೆ ಅಬ್ಬರಿಸಿದ್ದರಿಂದ ಇಲ್ಲಿನ ಅ ಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಜಿಲ್ಲೆ ರೆಡ್ ಜೋನ್‌ನಲ್ಲಿದೆ. ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಏರಿಕೆ ಕಾಣುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಕಳೆದೊಂದು ತಿಂಗಳಿಂದ ಕಂಟ್ರೊಲ್‌ಗೆ ಸಿಗದಂತಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಲಾಕ್‌ಡೌನ್ ಅವಶ್ಯಕವಾಗಿ ಬೇಕು. ಆದರೆ ಯಾರು ಹೊರಗಡೆ ಬಾರದಂತೆ ಕ್ರಮ ವಹಿಸಬೇಕು. ಇದರ ಜವಾಬ್ದಾರಿಯು ತಾಲೂಕು ಆಡಳಿತ ಮತ್ತು ಬಿಗಿ ಭದ್ರತೆ ಒದಗಿಸುವ ಪೊಲೀಸ್ ಇಲಾಖೆಯದ್ದು. ಪ್ರತಿ ಗ್ರಾ.ಪಂ ಪಿಡಿಒಗಳು ಸಹ ಕೈ ಜೋಡಿಸಿ ಕೊರೊನಾ ಹಾವಳಿ ತಡೆಗಟ್ಟಲು ಮುಂದಾಗಬೇಕು ಎಂದರು.
ಆರೋಗ್ಯ ಇಲಾಖೆಯವರು ಕೊರೊನಾ ಗುಣಲಕ್ಷಣ ಹೊಂದಿದವರಿಗೆ ರ್ಯಾಪಿಡ್ ಟೆಸ್ಟ್ ಅವಶ್ಯಕವಾಗಿ ಮಾಡಿ ನಂತರ ಲಸಿಕೆಯನ್ನು ಎಲ್ಲರಿಗೂ ದೊರಕುವಂತೆ ಕ್ರಮ ವಹಿಸಿ ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾದ ಕೊರೊನಾ ರೋಗಿಗಳನ್ನು ಹತ್ತಿರದ 100ಬೆಡ್‌ಗಳನ್ನು ಹೊಂದಿರುವ ಮೊರಾರ್ಜಿ ದೇಸಾಯಿ ಶಾಲೆ ಕಂದಗಲ್ಲು ಇಲ್ಲಿಗೆ ಕಳುಹಿಸಲು ತಿಳಿಸಿದರು. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 3 ಹೊತ್ತು ಊಟ, ಆಕ್ಸಿಜನ್ ಸೌಲಭ್ಯ, ಮೆಡಿಸನ್ ಸೌಲಭ್ಯ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಲಾಕ್‌ಡೌನ್ ಇರುವುದರಿಂದ ಜನತೆಗೆ ತೊಂದರೆಯಾಗದಂತೆ ಪ್ರತಿ ವಾರ್ಡ್‌ಗಳಿಗೆ ತಳ್ಳುವ ಗಾಡಿ ಮೂಲಕ ಮನೆ ಬಾಗಿಲಿಗೆ ತರಕಾರಿ, ಹಣ್ಣುಗಳು, ಇತರೆ ದಿನಸಿ ಪದಾರ್ಥಗಳು ತಲುಪುವಂತೆ ಕ್ರಮವಹಿಸಲು ತಹಶೀಲ್ದಾರ್‌ರಿಗೆ ತಿಳಿಸಿದರು.
ಪಾಸಿಟಿವ್ ಹೊಂದಿರುವವರು ಹೊರಗಡೆ ಓಡಾಡುವುದು ಕಂಡು ಬಂದರೆ ಅವರನ್ನು ಕೂಡಲೇ ಚಿಕಿತ್ಸೆಗೆ ಕಂದಗಲ್ಲು ಮೊರಾರ್ಜಿ ದೇಸಾಯಿ ಶಾಲೆಗೆ ಕಳುಹಿಸಲು ತಿಳಿಸಿದರು. ಪಟ್ಟಣದಲ್ಲಿ ಪ್ರತಿ ವಾರ್ಡ್‌ಗಳಿಗೂ ಡಿ.ಡಿ.ಟಿ ಪೌಡರ್ ಸಿಂಪಡಣೆ ಮತ್ತು ಸೋಡಿಯಂ ಕ್ಲೋರೈಡ್ ಔಷ ಧ ಸಿಂಪಡಣೆ, ಫಾಗಿಂಗ್, ಚರಂಡಿಗಳ ಸ್ವತ್ಛತೆಗೆ ಮುಂದಾಗಬೇಕು ಪಪಂ ಮುಖ್ಯಾ ಧಿಕಾರಿಗಳಿಗೆ ಆದೇಶ ನೀಡಿದರು.
ಡಿಎಂಎಫ್ 20 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಸರ್ಕಾರಿ ಜಮೀನನ್ನು ನಿಗದಿಗೊಳಿಸುವಂತೆ ತಹಶೀಲ್ದಾರ್ ರಿಗೆ ತಿಳಿಸಿದರು. ಕೂಡಲೇ ಜಾಗ ಗುರುತಿಸಿ ತಿಳಿಸಿದರೆ ಈಗಾಗಲೇ ಬಿಡುಗಡೆಗೊಂಡಿರುವ ಮೊತ್ತವನ್ನು ಬೇಗನೇ ಕಾಮಗಾರಿ ಶುರುಮಾಡಿ ಕೊಟ್ಟೂರಿನಲ್ಲಿ ಮೊದಲ ಬಾರಿಗೆ ಮಲ್ಟಿ ಸ್ಪೆಷಾಲಿಟಿ 100 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ನಂತರ ಈಗಿರುವ ಕೊಟ್ಟೂರು ಸರ್ಕಾರಿ ಆಸ್ಪತ್ರೆಯನ್ನು ಹೆರಿಗೆ ಮತ್ತು ಮಕ್ಕಳ ಚಿಕಿತ್ಸೆ ಕೇಂದ್ರವಾಗಿ ಮಾಡಲು ನಿರ್ಧರಿಸಲಾಗಿದೆ ಎಂದರು. ಪಟ್ಟಣ ಮತ್ತು ಸುತ್ತಮುತ್ತಲಿನಲ್ಲಿ ನಕಲಿ ವೈದ್ಯರ ಹಾವಳಿ ಇರುವುದರಿಂದ ಕೂಡಲೇ ಅಂತಹವರನ್ನು ಗುರುತಿಸಿ ಅವರ ವಿರುದ್ಧ ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕೆಂದು ತಹಶೀಲ್ದಾರ್‌ರಿಗೆ ಕೂಡಲೇ ಆದೇಶ ಹೊರಡಿಸಿದರು.
ತಹಶೀಲ್ದಾರ್ ಜಿ. ಅನಿಲ್‌ಕುಮಾರ, ಟಿ.ಎಸ್. ಗಿರೀಶ್ ಪ.ಪಂ ತಾಲೂಕು ವೈದ್ಯಾಧಿಕಾರಿ ಮುಖ್ಯಾಧಿಕಾರಿ, ಷಣ್ಮುಖನಾಯ್ಕ, ಪಿ.ಎಸ್.ಐ ನಾಗಪ್ಪ ಹಾಗೂ ಎಲ್ಲಾ ವರ್ಗದ ಅಧಿ ಕಾರಿಗಳು ಭಾಗವಹಿಸಿದ್ದರು.