Advertisement

ನೇತಾಜಿ ವಿಚಾರಧಾರೆಗಳಿಂದ ಬದಲಾವಣೆ ತನ್ನಿ

04:14 PM Jan 24, 2021 | |

ಹೊಸಪೇಟೆ: ತಾಲ್ಲೂಕಿನ ವಿವಿಧೆಡೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ 125ನೇ ಜನ್ಮದಿನಾಚರಣೆ (ಪರಾಕ್ರಮ ದಿವಸ)
ಶನಿವಾರ ಆಚರಿಸಲಾಯಿತು. ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ ವತಿಯಿಂದ ತಾಲೂಕಿನ ಬಸವನದುರ್ಗಾ ಗ್ರಾಮದಲ್ಲಿ ನಗರದ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣ ಮತ್ತು ಐಟಿಐ ಕಾಲೇಜಿನಲ್ಲಿ ಪರಾಕ್ರಮ ದಿವಸವನ್ನು ಆಚರಿಸುವ ಮೂಲಕ ಗೌರವ
ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ನಗರದ ವೈದ್ಯ ಡಾ| ಮಲ್ಲಿಕಾರ್ಜುನ ಕೆಂಚರೆಡ್ಡಿ, ನೇತಾಜಿ ಸುಭಾಷ ಚಂದ್ರ ಬೋಸ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿ ಜೀವಂತವಾಗಿರುವ ದೋಷಗಳನ್ನು ಅರ್ಥಮಾಡಿಕೊಂಡು ಸರಿಯಾದ ಚಿಕಿತ್ಸೆ ನೀಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಯುವಜನರು ಅಣಿಯಾಗಬೇಕು. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ವಿಚಾರಧಾರೆ ಆಧಾರದ ಸಮಾಜದಲ್ಲಿ ಬದಲಾವಣೆ ತರಬೇಕು ಎಂದರು.

ಎಐಡಿವೈಓ ಅಖೀಲ ಭಾರತ ಉಪಾಧ್ಯಕ್ಷ ಡಾ| ಪ್ರಮೋದ್‌ ಮಾತನಾಡಿ, ದೆಹಲಿ ಗಡಿಗಳಲ್ಲಿ ಸುಮಾರು 1 ತಿಂಗಳಿಗೂ ಅಧಿ ಕ ದಿನಗಳವರೆಗೆ ಯಾವುದೇ ರಾಜಿಯಿಲ್ಲದೇ ಹೋರಾಟ ಮಾಡುತ್ತಿರುವ ರೈತರು ನಿಜವಾದ ನೇತಾಜಿಯವರ ಉತ್ತರಾಧಿ ಕಾರಿಗಳು. ದುಡಿಯುವವರ ್ರಮವನ್ನು ಕೊಳ್ಳೆಹೊಡೆದುಶ್ರೀಮಂತರಿಗೆ ಹಂಚುವ ಸರ್ಕಾರದ ನೀತಿಗಳನ್ನು ಎಲ್ಲರೂ ಖಂಡಿಸಬೇಕಿದೆ. ತಕ್ಷಣವೇ ರೈತರ ಬೇಡಿಕೆಗಳನ್ನು
ಈಡೇರಿಸಬೇಕು ಎಂದರು.
ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಯರ್ರಿಸ್ವಾಮಿ ಎಚ್‌. ಮಾತನಾಡಿ, ನೇತಾಜಿ ಸುಭಾಷ್‌ ಚಂದ್ರ ಬೋಸ್‌ರವರು ಬಂಡವಾಳಶಾಹಿ ರಾಷ್ಟ್ರದ ಕಲ್ಪನೆಯನ್ನು ವಿರೋಧಿಸುತ್ತಿದ್ದರು. ಬಡವರ ರಕ್ತ ಹೀರುವ ಶ್ರೀಮಂತರವಿರುದ್ಧ, ಕಾರ್ಪೋರೇಟ್‌ ಶಕ್ತಿಗಳ ವಿರುದ್ಧ ಮತ್ತೂಮ್ಮೆ ಸ್ವಾತತ್ರ ಚಳವಳಿಯ ರೀತಿಯಲ್ಲಿ ಅಸಮಾನತೆಗಳ ವಿರುದ್ಧ ಹೋರಾಟಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.  ಮುಖಂಡರಾದ ಕಲ್ಮೇಶ್‌ ಗುದಿಗೇನವರ್‌, ಹುಲುಗಪ್ಪ, ಭಾಷಾ ಬೆನಕಾಪುರ, ಪ್ರಕಾಶ್‌ ನಾಯಕ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next