Advertisement
ಸಿರುಗುಪ್ಪ: ನಗರದ ಒಂದು ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಪೂರೈಕೆ ಮಾಡುವ ಜಲಮೂಲವಾದ ತುಂಗಭದ್ರಾ ನದಿಯು ಅನೇಕ ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಸಂಪೂರ್ಣ ಬತ್ತಿ ಹೋಗುತ್ತಿರುವುದರಿಂದ ನಗರಕ್ಕೆ ಹರಿಗೋಲ್ ಘಾಟ್‌ನಿಂದ ತುಂಗಭದ್ರಾ ನದಿಯಲ್ಲಿರುವ ಜಾಕ್ ವೆಲ್‌ಗೆ ನೀರು ಹರಿಸಿ ಅಲ್ಲಿಂದ ನೀರು ಪೂರೈಕೆ ಮಾಡುವುದು ಇಂದಿಗೂ ಮುಂದುವರೆದಿದೆ.
Related Articles
Advertisement
ಆದರೆ ಬಾಕಿ ಇರುವ ಕಾಮಗಾರಿಯನ್ನು ಮುಗಿಸಲು ಇನ್ನೂ ಹೆಚ್ಚುವರಿ ಅನುದಾನವನ್ನು ನೀಡಬೇಕೆಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲನ್ನು ಗುತ್ತಿಗೆದಾರರು ತುಳಿದಿದ್ದಾರೆ. ಆದರೆ ಕಾಮಗಾರಿಯನ್ನು ಮುಗಿಸಿಕೊಡಿ ಹೆಚ್ಚುವರಿ ಹಣವನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ಗುತ್ತಿಗೆದಾರರೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಆದರೆ ಗುತ್ತಿಗೆದಾರರು ಬಾಕಿ ಇರುವ ಕಾಮಗಾರಿಯನ್ನು ಮುಗಿಸಲು ಮುಂದಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಬೇಸಿಗೆ ಸಮಯದಲ್ಲಿ ತುಂಗಭದ್ರಾ ನದಿಯಲ್ಲಿ ನೀರು ಬತ್ತಿಹೋಗುವುದು, ಬೋರ್‌ವೆಲ್‌ಗಳಲ್ಲಿಯೂ ನೀರು ಕಡಿಮೆಯಾಗುವುದು ಸಾಮಾನ್ಯವಾಗಿದೆ. ಇದನ್ನೆಲ್ಲ ಮನಗಂಡ ಶಾಸಕ ಎಂ.ಎಸ್. ಸೋಮಲಿಂಗಪ್ಪ ಕೆರೆ ನಿರ್ಮಾಣ ಕಾರ್ಯಕ್ಕೆ ಬೇಕಾದ ಅನುದಾನವನ್ನು ಮಂಜೂರು ಮಾಡಿಸಿದ್ದರು.
ಆದರೆ ನಿರ್ಮಾಣ ಕಾರ್ಯ ಆರಂಭವಾಗಿ 4 ವರ್ಷ ಮುಗಿದರೂ ಕೆರೆ ನಿರ್ಮಾಣದ ಕಾಮಗಾರಿ ಮುಗಿದಿಲ್ಲ. ಪ್ರತಿ ಬೇಸಿಗೆಯಲ್ಲಿ ಕೆರೆ ನಿರ್ಮಾಣದ ಬಗ್ಗೆ ನಗರ ನಿವಾಸಿಗಳು ಚರ್ಚಿಸುವುದು ಸಾಮಾನ್ಯವಾಗಿದೆ.
ಸಿರುಗುಪ್ಪ ನಗರಕ್ಕೆ ನೀರು ಪೂರೈಕೆ ಮಾಡುವ ಕೆರೆ ನಿರ್ಮಾಣದ ಬಾಕಿ ಕಾರ್ಯವನ್ನು ಮುಗಿಸಿಕೊಡುವಂತೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಆದರೆ ಗುತ್ತಿಗೆದಾರರು ಕಾಮಗಾರಿ ಮುಗಿಸಲು ಮುಂದಾಗಿಲ್ಲ. ಕೆರೆಯಿಂದ ನಗರಕ್ಕೆ ನೀರು ಪೂರೈಕೆ ಮಾಡುವ ಪೈಪ್ ಲೈನ್ ಹಾಗೂ ನೀರು ಶುದ್ಧೀಕರಣ ಘಟಕ, ನೀರು ಸಂಗ್ರಹ ಟ್ಯಾಂಕ್‌ಗಳ ನಿರ್ಮಾಣಕ್ಕೆ ರೂ. 10ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಎಂ.ಎಸ್. ಸೋಮಲಿಂಗಪ್ಪ, ಶಾಸಕ