Advertisement

ಹೋಂ ಐಸೋಲೇಶನ್‌: ಪ್ರತಿನಿತ್ಯ ಮಾಹಿತಿ ಸಂಗ್ರಹಿಸಿ

09:23 PM Apr 28, 2021 | Team Udayavani |

ಸಿರುಗುಪ್ಪ: ಕೊರೊನಾ ಸೋಂಕಿನಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಯಾವುದೇ ಕಾರಣಕ್ಕೂ ಮರಣ ಹೊಂದದಂತೆ ಪ್ರತಿಯೊಬ್ಬ ಅ ಧಿಕಾರಿಯು ಮನೆಯಲ್ಲಿ ಚಿಕಿತ್ಸೆ ಪಡೆಯುವವರ ಮಾಹಿತಿಯನ್ನು ಪ್ರತಿನಿತ್ಯವೂ ಸಂಗ್ರಹಿಸಬೇಕು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುತಂದು ಚಿಕಿತ್ಸೆ ಕೊಡಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿ ತಿಳಿಸಿದರು.

Advertisement

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ನಡೆದ ತಾಲೂಕುಮಟ್ಟದ ಅ ಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.

ಕೊರೊನಾ ನಿಯಂತ್ರಣಕ್ಕಾಗಿ ರಚಿಸಿರುವ ತಾಲೂಕುಮಟ್ಟದ ಅಧಿಕಾರಿಗಳ, ವಿವಿಧ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ಹಾಗೂ ಆಕ್ಸಿಜನ್‌ ಪ್ರಮಾಣ 94ಕ್ಕಿಂತ ಕಡಿಮೆ ಇರುವವರನ್ನು ಗುರುತಿಸಿ ತಪಾಸಣೆ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಈ ಬಗ್ಗೆ ಮನೆ ಮನೆ ಸಮೀಕ್ಷೆ ಮಾಡುತ್ತಾರೆ.

ಸಮೀಕ್ಷೆ ಸಂದರ್ಭದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವವರನ್ನು ಮತ್ತು 60ವರ್ಷ ಮೇಲ್ಪಟ್ಟವರನ್ನು ಪರೀಕ್ಷೆಗೊಳಪಡಿಸಿ ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಲಾಗುತ್ತಿದೆ. ಇದರ ಜೊತೆಗೆ ಜನರಿಗೆ ಕೋವಿಡ್‌ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಹೇಳಿದರು. ತಾಲೂಕು ಆರೋಗ್ಯ ಅ ಧಿಕಾರಿ ಡಾ| ಈರಣ್ಣ ಮಾತನಾಡಿ, ತಾಲೂಕಿನಲ್ಲಿ ಕೋವಿಡ್‌ ಪಾಸಿಟಿವ್‌ ಒಟ್ಟು 419 ಪ್ರಕರಣ ದಾಖಲಾಗಿದ್ದು, ಇದರಲ್ಲಿ 107 ಜನರು ಗುಣಮುಖರಾಗಿದ್ದು, 220 ಜನರು ಹೊಂ ಐಸೋಲೇಷನ್‌ನಲ್ಲಿ, ಕೋವಿಡ್‌ ಕೇಂದ್ರದಲ್ಲಿ 20 ಜನ, ಸರ್ಕಾರಿ ಆಸ್ಪತ್ರೆಯಲ್ಲಿ 15 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಪ್ರಿಲ್‌ ತಿಂಗಳಲ್ಲಿಯೇ 177 ಪ್ರಕರಣಗಳು ದಾಖಲಾಗಿವೆ. 7 ಜನ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು. ಆನ್‌ಲೈನ್‌ನಲ್ಲಿ ಕೊರೊನಾ ಸೋಂಕಿತರ ಹೆಸರುಗಳು ಸಮರ್ಪಕವಾಗಿ ದಾಖಲಾಗಿ ಸರಿಯಾದ ಮಾಹಿತಿ ಬರುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಇದನ್ನು ಸರಿಪಡಿಸಬೇಕು. ಇದರಿಂದ ಚಿಕಿತ್ಸೆ ಪಡೆಯುವವರ ಸಮರ್ಪಕ ಮಾಹಿತಿ ದೊರೆಯುತ್ತದೆ ಎಂದು ತಹಶೀಲ್ದಾರ್‌ರು ಆರೋಗ್ಯಾ ಧಿಕಾರಿಗಳಿಗೆ ಸೂಚಿಸಿದರು. ನಗರದ ಕೋವಿಡ್‌ ಆರೈಕೆ ಕೇಂದ್ರದ ಡಾ| ರವಿಶಂಕರ್‌ರಾಯ್‌, ಪೌರಾಯುಕ್ತ ಪ್ರೇಮ್‌ ಚಾರ್ಲ್ಸ್‌, ಡಾ| ಸುಧಿಧೀಂದ್ರ, ನೋಡಲ್‌ ಅಧಿ ಕಾರಿ ಡಾ| ವಿದ್ಯಾಶ್ರೀ, ಆರ್‌ಆರ್‌ಟೀಂ ನೋಡಲ್‌ ಅಧಿ  ಕಾರಿ ಡಾ| ಚೆನ್ನಬಸವ ಮಾತನಾಡಿದರು. ತಾಪಂ ಇಒ ಶಿವಪ್ಪ ಸುಬೇದರ್‌, ತೆಕ್ಕಲಕೋಟೆ ಪಪಂ ಮುಖ್ಯಾ ಧಿಕಾರಿ ಅರುಣಕುಮಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next