Advertisement
ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಳ್ಳಾರಿ ನಗರದದಲ್ಲಿರುವ ಐತಿಹಾಸಿಕ ಬಳ್ಳಾರಿ ಗುಡ್ಡ/ಫೋರ್ಟ್ ಹಿಲ್‌ನ್ನು ಅಭಿವೃದ್ಧಿ ಪಡಿಸಲು, ಗುಡ್ಡದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ರೋಪ್ ವೇ (ಕೇಬಲ್ ಕಾರ್)ನ್ನು, ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ರೂ. 5 ಕೋಟಿಗಳನ್ನು ಪ್ರಾಧಿಕಾರಕ್ಕೆ ನೀಡಲು ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಅನುಮತಿಗಾಗಿ ಕೇಂದ್ರ ಪುರಾತತ್ವ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ತಿಳಿಸಿದರು.
ಬುಡಾ ವ್ಯಾಪ್ತಿಯಲ್ಲಿ ಬರುವ ಮಿಂಚೇರಿ ಗುಡ್ಡದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳು, ವಿಶ್ರಾಂತಿ ಕೊಠಡಿ, 5 ಪರಗೋಲು (ವೀವ್ ಪಾಯಿಂಟ್) ಗಳನ್ನು ನೀಡುವಂತೆ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
Related Articles
Advertisement
ವಿವಿಧ ಉದ್ಯಾನವನಗಳಿಗೆ ಸಾಧಕರ ಹೆಸರು ನಾಮಕರಣ: ಬಳ್ಳಾರಿ ನಗರದ ವಿವಿಧ ಉದ್ಯಾನವನಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಹೆಸರುಗಳನ್ನು ನಾಮಕರಣ ಮಾಡಲು ಹಾಗೂ ಮಹಾನಗರ ಪಾಲಿಕೆಗೆ ಶಿಫಾರಸ್ಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ನಾಡೋಜ ಡಾ| ಸುಭದ್ರಮ್ಮ ಮನ್ಸೂರ್, ಪಂಪಾಪತಿ ಸಾರಥಿ, ಕೋಗಳಿ ಪಂಪಣ್ಣ, ಸುಜಾತಮ್ಮ, ನಾಡೋಜ ಡಾ|ಬೆಳಗಲ್ಲು ವೀರಣ್ಣ, ಕಪ್ಪಗಲ್ ಪದ್ಮಮ್ಮ, ನಾಡೋಜ ದರೋಜಿ ಈರಮ್ಮ, ಕೂಡ್ಲಿಗಿ ಪದ್ಮಮ್ಮ, ಡಾ| ನಾಗರತ್ನಮ್ಮ, ಜಿಲಾನಿ ಬಾಷ, ಶಿಡಗಿನ ಮೊಳೆ ಚಂದ್ರಯ್ಯ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀಗಳು, ಸರ್ವದರ್ಶನತೀರ್ಥ ವೈ. ನಾಗೇಶ ಶಾಸ್ತ್ರಿಗಳು, ನಾಡೋಜ ಕೋ. ಚೆನ್ನಬಸಪ್ಪ, ಪ್ರೊ| ಇಟ್ಟಗಿ ಈರಣ್ಣ, ಪೈಲ್ವಾನ್. ಪಿ. ರಂಜಾನ್ ಸಾಬ್, ರೆವರೆಂಡ್ ಉತ್ತಂಗಿ ಚನ್ನಪ್ಪ, ಭೀಮಸೇನರಾವ್ ಚಿರಂಜೀವಿ ರಾಯಸಂ (ಬೀಚಿ), ಮುದೇನೂರುಸಂಗಣ್ಣ, ಏಲಿವಾಳ ಸಿದ್ದಯ್ಯ ಸ್ವಾಮಿ, ಜಾಲಿಬೆಂಚಿ ದೊಡ್ಡಬಸವ ಗವಾಯಿಗಳ ಹೆಸರುಗಳನ್ನು ನಾಮಕರಣ ಮಾಡಲು ಹಾಗೂ ಪಾಲಿಕೆಗೆ ಶಿಫಾರಸ್ಸು ಮಾಡುವ ನಿರ್ಣಯಕ್ಕೆ ಸಭೆ ಅನುಮೋದಿಸಿದೆ. ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ
ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಟಿಎಸ್ ಮತ್ತು ಆರ್‌ಎಸ್ ಕುರಿತು ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು. ಈ ಸಭೆಯಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಬುಡಾ ಆಯುಕ್ತ ವೀರೇಂದ್ರ ಕುಂದುಗೋಳ, ಪ್ರಾಧಿ ಕಾರದ ಕಾರ್ಯಪಾಲಕ ಅಭಿಯಂತರ ರವಿಶಂಕರ್, ಎಸ್‌ಪಿ ಸೈದುಲು ಅಡಾವತ್, ಜಿಲ್ಲಾ ಆರೋಗ್ಯಾಧಿಕಾರಿ
ಡಾ| ಎಚ್.ಎಲ್. ಜನಾರ್ಧನ್, ಪಿಡಬ್ಲ್ಯ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ಕೆ.ಯು.ಡಬ್ಲೂಎಸ್ ಮತ್ತು ಡಿ.ಬಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಪ್ರಾಧಿಕಾರದ ಸಿಬ್ಬಂದಿ ಇದ್ದರು. ಓದಿ : ಡಿಜೆ ಹಳ್ಳಿ ಗಲಭೆಯ ಎನ್‌ಐಎ ವರದಿ ಆಧಾರದಡಿ ಜಮೀರ್ ಮೇಲೆ ಕೇಸ್ ಹಾಕಿ: ಅಶ್ವತ್ಥ್ ನಾರಾಯಣ