Advertisement
ರೂ. 2.50 ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್‌ನಿಲ್ದಾಣದ ಕಾಮಗಾರಿಗೆಅಂದಿನ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮಾ.13, 2018ರಂದು ಭೂಮಿಪೂಜೆ ನೆರವೇರಿಸಿದ್ದರು.ಆದರೆ ರಾಜಕೀಯ ನಾಯಕರ ಒಳಜಗಳದಿಂದ18 ತಿಂಗಳಲ್ಲಿಯೇ ಮುಗಿಯಬೇಕಿದ್ದ ನಿಲ್ದಾಣದಕಾಮಗಾರಿ ಮೂರು ವರ್ಷಕ್ಕೆ ಮುಗಿದಿದ್ದು,ಬಸ್ಸಿಗಾಗಿ ಕಾಯುವ ಜನ ನಿಲ್ದಾಣದಲ್ಲಿಯೇಕುಳಿತುಕೊಳ್ಳಲು ಅನುಕೂಲವಾಗಿದೆ.
ಕಾಮಗಾರಿ ಮುಗಿದಿದ್ದು ರಸ್ತೆಯಲ್ಲಿ ನಿಂತು ಬಸ್ಸಿಗಾಗಿಕಾಯುವ ಪರಿಸ್ಥಿತಿ ತಪ್ಪಿದಂತಾಗಿದೆ. ಬಸ್‌ನಿಲ್ದಾಣದಕಾಮಗಾರಿ ಮುಗಿದಿದ್ದು, ಸಣ್ಣಪುಟ್ಟ ಕಾಮಗಾರಿಗಳುಬಾಕಿ ಇದೆ. ಬಾಕಿ ಕಾಮಗಾರಿಗಳನ್ನು ಮುಗಿಸಿಶೀಘ್ರವೇ ಬಸ್‌ನಿಲ್ದಾಣವನ್ನು ಲೋಕಾರ್ಪಣೆಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಬಳ್ಳಾರಿಸಾರಿಗೆ ವಿಭಾಗದ ನಿಯಂತ್ರಣಾಧಿ ಕಾರಿ ಎಸ್.ಆರ್.ಚಂದ್ರಶೇಖರ್ ತಿಳಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿರೂ. 2.50ಕೋಟಿ ವೆಚ್ಚದಲ್ಲಿನಿರ್ಮಾಣವಾಗಿರುವ ನೂತನ ಬಸ್‌ನಿಲ್ದಾಣವನ್ನು ಫೆಬ್ರವರಿ ತಿಂಗಳ ಅಂತ್ಯದೊಳಗೆಲೋಕಾರ್ಪಣೆ ಮಾಡಲು ಸಾರಿಗೆ ಇಲಾಖೆಯಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
ಎಂ.ಎಸ್. ಸೋಮಲಿಂಗಪ್ಪ, ಶಾಸಕ
Related Articles
Advertisement