ಬಳ್ಳಾರಿ: ಕಾಂಗ್ರೆಸ್ ಒಳಜಗಳದಿಂದಬಳಲುತ್ತಿದೆ. ಅವರು ಏನೇ ಪ್ರಯತ್ನಮಾಡಿದರೂ ಬಿಜೆಪಿಗೆ ಯಾವುದೇಹಾನಿಯಾಗಲ್ಲ ಎಂದು ಸಾರಿಗೆ ಸಚಿವಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕಾಂಗ್ರೆಸ್ ಪಕ್ಷ ಒಡೆದಮನೆಯಾಗಿದೆ.ಮಾಜಿ ಸಿಎಂಸಿದ್ದರಾಮಯ್ಯ,ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್‌ದೆಹಲಿಗೆ ಹೋದಾಗ ಮಾತ್ರಒಂದಾಗಿರುತ್ತಾರೆ. ನಂತರ ಬೇರೆಬೇರೆಯಾಗುತ್ತಾರೆ. ಇವರೆಲ್ಲಫೋಟೋ ನಾಯಕರು ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷೆಸೋನಿಯಾ ಗಾಂಧಿ ತೃತೀಯ ರಂಗರಚನೆಗೆ ಮುಂದಾಗಿದ್ದಾರೆ. ಆದರೆಅದು ಸಫಲವಾಗಲ್ಲ. ಅಲ್ಲದೇತೃತೀಯ ರಂಗದಿಂದ ಬಿಜೆಪಿಗೆಯಾವುದೇ ಹಾನಿಯಾಗಲ್ಲ. ಯಾರುಎಷ್ಟೇ ಪ್ರಯತ್ನಪಟ್ಟರೂ ಪ್ರಧಾನಿನರೇಂದ್ರ ಮೋದಿಯವರು ಇನ್ನು20 ವರ್ಷ ಪ್ರಧಾನಿಯಾಗಿರುತ್ತಾರೆಎಂದರು.
ಸಚಿವ ಆನಂದ್‌ಸಿಂಗ್‌ಅವರು ಖಾತೆ ಬದಲಾವಣೆವಿಚಾರದಲ್ಲಿ ಪಕ್ಷಕ್ಕೆ ಮುಜುಗರಮಾಡಲ್ಲ ಎಂದಿದ್ದಾರೆ. ಕೇಳ್ಳೋದು ನನ್ನಧರ್ಮ. ಕೊಡೋದು ಬಿಡೋದುಪಕ್ಷಕ್ಕೆ ಬಿಟ್ಟಿದ್ದು ಎಂದು ಅವರೇತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಸೂಕ್ತನಿರ್ಧಾರ ಕೈಗೊಳ್ಳಲಿದ್ದಾರೆ. ಬಳ್ಳಾರಿನನ್ನ ಜನ್ಮಭೂಮಿ. ಉಳಿದ ಜಿಲ್ಲೆಗಳುನನ್ನ ಕರ್ಮಭೂಮಿ. ಹಾಗಾಗಿ ಬಳ್ಳಾರಿಜಿಲ್ಲಾ ಉಸ್ತುವಾರಿಯಾಗಿ ಕೆಲಸಮಾಡೋ ಆಸೆಯಿದೆ ಎಂದು ಬಳ್ಳಾರಿಜಿಲ್ಲಾ ಉಸ್ತುವಾರಿ ಸಚಿವರಾಗುವಇಂಗಿತ ವ್ಯಕ್ತಪಡಿಸಿದರು.
ಬಳ್ಳಾರಿಗೆಬಂದಿರುವ ಮಾಜಿ ಸಚಿವಜಿ.ಜನಾರ್ದನರೆಡ್ಡಿಯವರನ್ನುಬೆಂಗಳೂರಿನಲ್ಲಿ ಸಾಕಷ್ಟು ಬಾರಿಭೇಟಿಯಾಗಿದ್ದೇನೆ. ಸಮಯ ಸಿಕ್ಕಾಗಬಳ್ಳಾರಿಯಲ್ಲೂ ಭೇಟಿಯಾಗುತ್ತೇನೆಎಂದರು.