ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆನಡೆದು ಹತ್ತು ತಿಂಗಳು ಕಳೆದರೂ ಮೇಯರ್-ಉಪಮೇಯರ್, ಸ್ಥಾಯಿ ಸಮಿತಿಗಳಿಗೆಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಕೊನೆಗೂಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಮುಖಂಡರುನ್ಯಾಯಾಲಯದ ಮೊರೆ ಹೋಗಿದ್ದಾರೆ. ಕಾಂಗ್ರೆಸ್‌ನ ಯುವ ಮುಖಂಡ ನಾರಾ ಭರತ್‌ರೆಡ್ಡಿನೇತೃತ್ವದಲ್ಲಿ ಇಬ್ಬರು ಸದಸ್ಯರು ನ್ಯಾಯಾಲಯದಲ್ಲಿದಾವೆ ಹೂಡಿದ್ದು ಫೆ. 28ರಂದು ವಿಚಾರಣೆನಿಗದಿಯಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಕಳೆದ 2021ಏಪ್ರಿಲ್ 27 ರಂದು ಚುನಾವಣೆ ನಡೆದು, ಏ.30ರಂದು ಫಲಿತಾಂಶ ಪ್ರಕಟವಾಗಿದ್ದು, ಭರ್ಜರಿಜಯಭೇರಿ ಬಾರಿಸಿದ ಕಾಂಗ್ರೆಸ್ 39ರಲ್ಲಿ 21ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪಾಲಿಕೆ ಮೇಲೆಸತತ ಎರಡನೇ ಬಾರಿಗೆ ಕಾಂಗ್ರೆಸ್ ಬಾವುಟಹಾರಿಸಿತು. ಐವರು ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆಬೆಂಬಲಿಸುವ ಮೂಲಕ ಕಾಂಗ್ರೆಸ್ ಸದಸ್ಯರಸಂಖ್ಯೆ 26ಕ್ಕೆ ಹೆಚ್ಚಳವಾಗಿದ್ದು, ಬಿಜೆಪಿ ಕೇವಲ 13ಸ್ಥಾನಗಳಲ್ಲಿ ಜಯಗಳಿಸಿತು.
ಆದರೆ, ಪಾಲಿಕೆಯಲ್ಲಿಅ ಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತ ಹೊಂದಿದ್ದರೂ, 10 ತಿಂಗಳಾದರೂಮೇಯರ್-ಉಪಮೇಯರ್, ಸ್ಥಾಯಿಸಮಿತಿಗಳಿಗೆ ಚುನಾವಣೆ ನಡೆಸದ ಸಂಬಂಧಪಟ್ಟಅ ಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿಮುಂದೂಡುತ್ತಿರುವುದು ಅಧಿಕಾರದಿಂದದೂರ ಉಳಿದ ನೂತನ ಸದಸ್ಯರ ಅಸಮಾಧಾನಕ್ಕೆಕಾರಣವಾಗಿದೆ.
ಮೇಯರ್-ಉಪಮೇಯ್‌ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿಬಿಜೆಪಿಯವರು ಆಪರೇಷನ್ ಕಮಲನಡೆಸುತ್ತಿದ್ದಾರೆ ಎಂಬ ಗುಮಾನಿ ಕೇಳಿ ಬಂದಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಕಾಂಗ್ರೆಸ್‌ನ ಹಿರಿಯಮುಖಂಡರು, ಸಂಸದರು, ಶಾಸಕರು, ಸದಸ್ಯರುಒಗ್ಗೂಡಿ ಬಿಜೆಪಿಯವರು ಕೋಟ್ಯಾಂತರಹಣದ ಆಮಿಷವೊಡ್ಡಿ ಕಾಂಗ್ರೆಸ್ ಸದಸ್ಯರನ್ನುಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದುಆರೋಪಿಸಿದ್ದರು. ಇನ್ನಷ್ಟು ದಿನ ವಿಳಂಬ ಮಾಡದೆಕೂಡಲೇ ಮೇಯರ್-ಉಪಮೇಯರ್ ಆಯ್ಕೆಗೆಚುನಾವಣೆ ನಡೆಸಬೇಕು ಎಂದು ಒಂದು ವಾರಗಳಕಾಲ ಗಡುವು ನೀಡಿದ್ದರು.
ಇಲ್ಲದಿದ್ದಲ್ಲಿ ಹೋರಾಟನಡೆಸುವುದಾಗಿಯೂ ಎಚ್ಚರಿಸಿದ್ದರು. ಇದಕ್ಕೂಮುನ್ನ ಕಾಂಗ್ರೆಸ್ ಜಿಲ್ಲಾ ಘಟಕದಿಂದ ರಾಜ್ಯಚುನಾವಣಾ ಆಯೋಗಕ್ಕೆ, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ಚುನಾವಣೆನಡೆಸುವಂತೆ ಕೋರಲಾಗಿತ್ತು.ಕಾಂಗ್ರೆಸ್ ಮುಖಂಡರು ಚುನಾವಣೆನಡೆಸುವಂತೆ ಏನೆಲ್ಲ ಪ್ರಯತ್ನಗಳು ನಡೆಸದರೂ,ಸಕಾರಾತ್ಮಕ ಸ್ಪಂದನೆ ಬಾರದ ಹಿನ್ನೆಲೆಯಲ್ಲಿಕಾಂಗ್ರೆಸ್‌ನ ಯುವಮುಖಂಡ ನಾರಾ ಭರತ್‌ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಬಂಡಾಯ 35ನೇವಾರ್ಡ್‌ನ ಪಕ್ಷೇತರ ಸದಸ್ಯ ಶ್ರೀನಿವಾಸ್ ಮಿಂಚುಮತ್ತು 17ನೇ ವಾರ್ಡ್‌ನ ಕವಿತಾ ಹೊನ್ನಪ್ಪಅವರು ಮೇಯರ್, ಉಪಮೇಯರ್, ಸ್ಥಾಯಿಸಮಿತಿಗಳಿಗೆ ಚುನಾವಣೆ ನಡೆಸದಿರುವುದನ್ನುಪ್ರಶ್ನಿಸಿ ಫೆ. 22ರಂದು ನ್ಯಾಯಾಲಯದ ಮೊರೆಹೋಗಿದ್ದಾರೆ.
ಇದರಿಂದ ಚುನಾವಣೆ ನಡೆಸದಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೂ ನೋಟಿಸ್‌ಜಾರಿಯಾಗಿದ್ದು, ಇದೇ ಫೆ.28 ರಂದು ವಿಚಾರಣೆಗೆನಿಗದಿಯಾಗಿದ್ದು, ಅಂದು ಚುನಾವಣೆ ವಿಳಂಬಕ್ಕೆಕಾರಣಗಳೇನು ಎಂಬುದು ಸ್ಪಷ್ಟವಾಗಲಿದ್ದು, ಕಾದುನೋಡಬೇಕಾಗಿದೆ.